ರೋಹಿತ್ ಮೇಲೆ ಟೀಕೆಗಳ ಬಾಣ: ದಿನೇಶ್ ಆಯ್ಕೆ ಮಾಡಿದ್ದಕ್ಕೆ ಕ್ರಿಕೆಟ್ ಪಂಡಿತರು ಗರಂ: ಈ ಕುರಿತು ಹರ್ಭಜನ್ ದಿನೇಶ್-ರೋಹಿತ್ ಪರ ನಿಂತು ಹೇಳಿದ್ದೇನು ಗೊತ್ತೇ??
ರೋಹಿತ್ ಮೇಲೆ ಟೀಕೆಗಳ ಬಾಣ: ದಿನೇಶ್ ಆಯ್ಕೆ ಮಾಡಿದ್ದಕ್ಕೆ ಕ್ರಿಕೆಟ್ ಪಂಡಿತರು ಗರಂ: ಈ ಕುರಿತು ಹರ್ಭಜನ್ ದಿನೇಶ್-ರೋಹಿತ್ ಪರ ನಿಂತು ಹೇಳಿದ್ದೇನು ಗೊತ್ತೇ??
ಕಳೆದ ಭಾನುವಾರ ನಡೆದ ಭಾರತ ವರ್ಸಸ್ ಪಾಕಿಸ್ತಾನ್ ಪಂದ್ಯವನ್ನು ಭಾರತ ತಂಡ ಗೆದ್ದು ಬೀಗುತ್ತಿದೆ. ಭಾರತ ಗೆದ್ದಿದ್ದೇನೋ ಆಗಿದೆ, ಆದರೆ ಇದೀಗ ಮೇನೇಜ್ಮೆಂಟ್ ನ ಪ್ಲೇಯಿಂಗ್ 11 ಸೆಲೆಕ್ಷನ್ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಭಾನುವಾರದ ಪಂದ್ಯದಲ್ಲಿ ರಿಷಬ್ ಪಂತ್ ಅವರನ್ನು ಪ್ಲೇಯಿಂಗ್ 11 ಗೆ ಆಯ್ಕೆ ಮಾಡಿಕೊಳ್ಳದೆ ದಿನೇಶ್ ಕಾರ್ತಿಕ್ ಅವರಿಗೆ ಅವಕಾಶ ನೀಡಲಾಯಿತು, ಇದರ ಬಗ್ಗೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಪಂತ್ ಅವರಿಗೆ ಅವಕಾಶ ನೀಡಬೇಕಿತ್ತು ಎನ್ನುತ್ತಿದ್ದಾರೆ. ಆದರೆ ಭಾರತ ತಂಡದ ಮಾಜಿ ಆಟಗಾರ ಹರ್ಭಜನ್ ಸಿಂಗ್, ಮ್ಯಾನೇಜ್ಮೆಂಟ್ ತೆಗೆದುಕೊಂಡ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
“ರಿಷಬ್ ಪಂತ್ ಅವರು ಟೆಸ್ಟ್ ಮ್ಯಾಚ್ ಗಳಲ್ಲಿ ಉತ್ತಮವಾದ ಪ್ರದರ್ಶನ ನೀಡಿ, ತಂಡದ ಗೆಲುವಿಗೆ ಹಲವು ಬಾರಿ ಮುಖ್ಯ ಕಾರಣ ಆಗಿದ್ದಾರೆ, ಹಲವು ಪಂದ್ಯಗಳನ್ನು ಗೆಲ್ಲಿಸಿದ್ದಾರೆ. ಆದರೆ, ಟಿ20 ಪಂದ್ಯಗಳಲ್ಲಿ ಅವರು ಹೆಚ್ಚು ಯಶಸ್ವಿಯಾಗಿಲ್ಲ. ದಿನೇಶ್ ಕಾರ್ತಿಕ್ ಅವರು ಈಗ ಉತ್ತಮವಾದ ಫಾರ್ಮ್ ನಲ್ಲಿದ್ದಾರೆ. ದಿನೇಶ್ ಕಾರ್ತಿಕ್ ಅವರ ಈ ಫಾರ್ಮ್ ಅನ್ನು ಭಾರತ ತಂಡ ಬಳಸಿಕೊಳ್ಳಬೇಕು, ಅದರ ಪ್ರಯೋಜನ ಪಡೆದುಕೊಳ್ಳಬೇಕು. ಅದೇ ಕಾರಣದಿಂದ ರಿಷಬ್ ಪಂತ್ ಅವರನ್ನು ಪ್ಲೇಯಿಂಗ್ 11 ಗೆ ಆಯ್ಕೆ ಮಾಡಲಾಗಿಲ್ಲ, ಮ್ಯಾನೇಜ್ಮೆಂಟ್ ನ ಈ ನಿರ್ಧಾರ ಮತ್ತು ಆಯ್ಕೆ ಸರಿಯಾಗಿದೆ.
ರಿಷಬ್ ಪಂತ್ ಇನ್ನು ಚಿಕ್ಕವರು, ಅವರಿಗೆ ಸಾಕಷ್ಟು ಅವಕಾಶ ಸಿಗುತ್ತದೆ. ಆದರೆ ದಿನೇಶ್ ಕಾರ್ತಿಕ್ ಅವರಿಗೆ ಆ ರೀತಿ ಅಲ್ಲ, ಕಾರ್ತಿಕ್ ಅವರ ಫಾರ್ಮ್ ನಂಬಬೇಕು. ಕೆಳ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಕಾರ್ತಿಕ್ ಅತ್ಯುತ್ತಮವಾದ ಪ್ರದರ್ಶನ ನೀಡುತ್ತಾರೆ..” ಎಂದು ಹೇಳಿದ್ದಾರೆ ಹರ್ಭಜನ್ ಸಿಂಗ್. ಭಾನುವಾರದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಅವರಿಗೆ ಬ್ಯಾಟಿಂಗ್ ಮಾಡಲು ಹೆಚ್ಚಿನ ಅವಕಾಶ ಸಿಗಲಿಲ್ಲ. ಕೊನೆಯ ಓವರ್ ನಲ್ಲಿ ಬಂದು, ಒಂದು ಬಾಲ್ ನಲ್ಲಿ ಒಂದು ಸಿಂಗಲ್ ತೆಗೆದುಕೊಂಡರು. ವಿಕೆಟ್ ಕೀಪರ್ ಆಗಿ ಮೂರು ಕ್ಯಾಚ್ ಗಳನ್ನು ಹಿಡಿದರು. ಕಾರ್ತಿಕ್ ಅವರ ಫಾರ್ಮ್ ನೋಡಿ, ಅವರನ್ನು ನಂಬಬೇಕು ಎನ್ನುವುದೇ ಎಲ್ಲರ ಅಭಿಪ್ರಾಯ ಆಗಿದೆ.