ಎರಡು ಪಂದ್ಯ ಗೆದ್ದಿರುವ ತಂಡದಿಂದ ಈತನೊಬ್ಬನನ್ನು ಕೈ ಬಿಟ್ಟರೆ, ಭಾರತ ತಂಡ ಮತ್ತಷ್ಟು ಬಲಿಷ್ಠವಾಗುವುದು ಖಚಿತ: ಯಾರು ಗೊತ್ತೇ ಆ ಆಟಗಾರ??

ಎರಡು ಪಂದ್ಯ ಗೆದ್ದಿರುವ ತಂಡದಿಂದ ಈತನೊಬ್ಬನನ್ನು ಕೈ ಬಿಟ್ಟರೆ, ಭಾರತ ತಂಡ ಮತ್ತಷ್ಟು ಬಲಿಷ್ಠವಾಗುವುದು ಖಚಿತ: ಯಾರು ಗೊತ್ತೇ ಆ ಆಟಗಾರ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತ ಕ್ರಿಕೆಟ್ ತಂಡ ಈಗಾಗಲೇ ಏಷ್ಯಾ ಕಪ್ ನಲ್ಲಿ ಮುಂದಿನ ಹಂತವನ್ನು ತಲುಪಿದೆ. ಗ್ರೂಪ್ ಎ ನಲ್ಲಿ ಆಟವಾಡಿದ ಎರಡು ಪಂದ್ಯಗಳನ್ನು ಜಯಿಸಿದ ಬಳಿಕ ನಾಲ್ಕು ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿ ಸೂಪರ್ 4 ಹಂತಕ್ಕೆ ತಲುಪುವಲ್ಲಿ ಯಶಸ್ವಿಯಾಗಿದೆ. ಈ ಹಾದಿಯನ್ನು ನೋಡುವುದಾದರೆ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಹಾಗೂ ನೆನ್ನೆ ನಡೆದ ಪಂದ್ಯದಲ್ಲಿ ಹಾಂಗ್ ಕಾಂಗ್ ವಿರುದ್ಧ ಸುಲಭದ ಜಯ ದಾಖಲಿಸುವ ಮೂಲಕ ಅಗ್ರಸ್ಥಾನ ಪಡೆದುಕೊಂಡಿದೆ.

ಆದರೆ ಹೀಗೆ ಆಟವಾಡಿದ ಎರಡು ಪದ್ಯಗಳಲ್ಲಿ ಕೂಡ ಯಶಸ್ವಿಯಾಗಿ ಜಯಗಳಿಸಿದರೂ ಕೂಡ ಭಾರತ ತಂಡಕ್ಕೆ ‌ ಕೆಲವೊಂದು ಆತಂಕ ಇರುವುದು ಸುಳ್ಳಲ್ಲ. ಅದರಲ್ಲಿಯೂ ಹಾಂಗ್ ಕಾಂಗ್ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ರವರ ಫಾರ್ಮ್ ಬಗ್ಗೆ ಹೆಚ್ಚು ಚರ್ಚೆ ಮಾಡಲಾಗುತ್ತಿತ್ತು. ಆದರೆ ನಿನ್ನೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ರವರು ಉತ್ತಮವಾಗಿ ಬ್ಯಾಟಿಂಗ್ ಮಾಡುವ ಮೂಲಕ ಎಲ್ಲಾ ಟೀಕೆಗಳಿಗೆ ಉತ್ತರ ನೀಡಿದ್ದಾರೆ.

ಇನ್ನು ತಮ್ಮನ್ನು ತಾವು ಕ್ರಿಕೆಟ್ ಪಂಡಿತರು ಎಂದು ಕೊಂಡಿರುವ ಕೆಲವರು ಕ್ರಿಕೆಟ್ ಶಿಶುಗಳ ಮೇಲೆ ವಿರಾಟ್ ಕೊಹ್ಲಿ ರವರು ಆಟವಾಡಿದ್ದು ದೊಡ್ಡ ವಿಷಯವಲ್ಲ ಎಂದು ಮಾತನಾಡುತ್ತಿದ್ದಾರೆ. ಹೌದು ಅದರಲ್ಲಿಯೂ ಕೂಡ ಟೀಕೆ ಮಾಡುವುದನ್ನು ಬಿಟ್ಟಿಲ್ಲ, ಇನ್ನು ಇದಕ್ಕೆ ಪ್ರತಿಕ್ರಿಯೆ ನೀಡಿರುವ ವಿರಾಟ್ ಕೊಹ್ಲಿ ಅಭಿಮಾನಿಗಳು ರಾಹುಲ್ ಹಾಗೂ ರೋಹಿತ್ ಕೂಡ ಅವರ ವಿರುದ್ಧವೇ ಬ್ಯಾಟಿಂಗ್ ಮಾಡಿದ್ದರು. ಅವರು ಹೆಚ್ಚು ರನ್ ಗಳಿಸಲಾಗಲಿಲ್ಲ ಎಂದು ಉತ್ತರ ನೀಡಿದ್ದಾರೆ.

ಇನ್ನು ಈ ಸಮಯದಲ್ಲಿ ಮಾತನಾಡಿರುವ ಕ್ರಿಕೆಟ್ ಪಂಡಿತರು ಮೊದಲ 10 ಓವರ್ ಗಳಲ್ಲಿ ಈ ಪಿಚ್ ನಲ್ಲಿ ಬ್ಯಾಟಿಂಗ್ ಮಾಡುವುದು ಬಹಳ ಕಷ್ಟ, ವಿರಾಟ್ ಕೊಹ್ಲಿ ರವರು ಗಟ್ಟಿಯಾಗಿ ನಿಂತು ಬಹಳ ಯಶಸ್ವಿಯಾಗಿ ತಂಡವನ್ನು ಉತ್ತಮ ಪರಿಸ್ಥಿತಿಗೆ ತಂದು ನಿಲ್ಲಿಸಿದರು. ಅದೇ ಕಾರಣಕ್ಕಾಗಿ ಸೂರ್ಯಕುಮಾರ್ ಯಾದವ್ ರವರು ಕೂಡ ಯಾವುದೇ ಆತಂಕವಿಲ್ಲದೆ ಬ್ಯಾಟಿಂಗ್ ಮಾಡಲು ಸಾಧ್ಯವಾಗಿದ್ದು ಎಂದು ವಿರಾಟ್ ಕೊಹ್ಲಿ ರವರ ಪರವಾಗಿ ನಿಂತಿದ್ದಾರೆ.

ಹೀಗೆ ಪರ ವಿರೋಧಗಳು ಚರ್ಚೆಯಾಗುತ್ತಿರುವಾಗ ಭಾರತ ತಂಡದಲ್ಲಿ ಒಂದು ಬಹುದೊಡ್ಡ ಆತಂಕ ಕಾಡುತ್ತಿದೆ. ಹೌದು ಸ್ನೇಹಿತರೇ, ಭಾರತದ ತಂಡದಲ್ಲಿ ಎಲ್ಲರೂ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಕೂಡ ಆ ಒಬ್ಬ ಆಟಗಾರನ ಮೇಲೆ ಮಾತ್ರ ಹಲವಾರು ಟೀಕೆಗಳು ಕೇಳಿ ಬರುತ್ತಿವೆ, ಯಾಕೆಂದರೆ ಎಂತಹ ಪರಿಸ್ಥಿತಿಯಲ್ಲೂ ಕೂಡ ಆತ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದಾರೆ. ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾರಣಕ್ಕಾಗಿ ಭಾರತ ತಂಡಕ್ಕೆ ಆಯ್ಕೆ ಮಾಡಿದ ಬಳಿಕ ಒಂದೆರಡು ಪಂದ್ಯಗಳಲ್ಲಿ ಬಿಟ್ಟರೆ ಇಲ್ಲಿಯವರೆಗೂ ಆತ ಉತ್ತಮ ಪ್ರದರ್ಶನ ನೀಡಲಿಲ್ಲ, ಹೌದು ನಾವು ಮಾತನಾಡುತ್ತಿರುವುದು ಭಾರತದ ಯುವ ಬೌಲರ್ ಆವೇಷ್ ಖಾನ್ ರವರ ಬಗ್ಗೆ.

ಇಲ್ಲಿಯವರೆಗೂ 15 ಟಿ 20 ಪಂದ್ಯಗಳನ್ನು ಭಾರತದ ಪರ ಆಡಿರುವ ಇವರು ಪಡೆದಿದ್ದು ಕೇವಲ 13 ವಿಕೆಟ್ ಹಾಗೂ ಬರೋಬ್ಬರಿ 9.11 ಎಕಾನಮಿಯಲ್ಲಿ ರನ್ ಗಳನ್ನು ನೀಡಿದ್ದಾರೆ . ಪ್ರತಿ ಪಂದ್ಯದಲ್ಲೂ ಕೂಡ ಇವರು ದುಬಾರಿಯನಿಸಿಕೊಳ್ಳುತ್ತಿದ್ದಾರೆ. ಇನ್ನು ಏಷ್ಯಾ ಕಪ್ ನಲ್ಲಿಯೂ ಕೂಡ ಮೊದಲ ಪಂದ್ಯದಲ್ಲಿ ಯಾವುದೇ ವಿಕೆಟ್ ಪಡೆಯದೆ ಹೋದರು ಕೂಡ ಎರಡು ಓವರ್ ಗಳಲ್ಲಿ 19 ರನ್ ಗಳನ್ನು ಬಿಟ್ಟುಕೊಟ್ಟಿದ್ದರು.

ಇನ್ನು ಎರಡನೇ ಪಂದ್ಯದಲ್ಲಿ ಕ್ರಿಕೆಟ್ ಶಿಶು ಎನ್ನುವ ಹಾಂಗ್ ಕಾಂಗ್ ದೇಶದ ಮೇಲೆ ನಾಲ್ಕು ಓವರ್ ಗಳಲ್ಲಿ ಬರೋಬ್ಬರಿ 53 ರನ್ ಬಿಟ್ಟು ಕೊಟ್ಟಿದ್ದಾರೆ ಹಾಗೂ ಕೇವಲ ಒಂದು ವಿಕೆಟ್ ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿದ್ದಾರೆ. ಇನ್ನು ಈ ಬಾರಿಯ ಸರಾಸರಿ 13.20. ಹೀಗೆ ಪದೇ ಪದೇ ಅವಕಾಶ ನೀಡುತ್ತಿದ್ದರು ಕೂಡ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಅವಿಶ್ ಖಾನ್ ರವರು ವಿಫಲವಾಗುತ್ತಿದ್ದಾರೆ/ ಇವರೊಬ್ಬರನ್ನು ಬದಲಾಯಿಸಿದರೆ, ಖಂಡಿತಾ ಭಾರತ ತಂಡ ಮತ್ತಷ್ಟು ಬಲಿಷ್ಠವಾಗಲಿದೆ ಎಂಬುದು ಕ್ರಿಕೆಟ್ ಪಂಡಿತ ಲೆಕ್ಕಾಚಾರ.