ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಬಿಗ್ ಬ್ರೇಕಿಂಗ್: ಕೊಹ್ಲಿ ಅಭಿಮಾನಿಗಳಿಗೆ ಶಾಕ್: ಪದೇ ಪದೇ ಎಡವುತ್ತಿರುವ ಕೊಹ್ಲಿ ಯಿಂದ ಮತ್ತೊಂದು ಕಠಿಣ ನಿರ್ಧಾರ?? ಏನಾಗುತ್ತಿದೆ ಗೊತ್ತೇ??

135

Get real time updates directly on you device, subscribe now.

ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ವಿರಾಟ್ ಕೋಹ್ಲಿ ಅವರ ಅಭಿಮಾನಿಗಳಿಗೆ ಬೇಸರ ಆಗುವಂತಹ ಸುದ್ದಿಯೊಂದು ಕೇಳಿಬಂದಿದೆ. ಟಿ20 ಪಂದ್ಯಗಳಿಗೆ ವಿರಾಟ್ ಕೋಹ್ಲಿ ಅವರು ವಿದಾಯ ಹೇಳುವ ಸಮಯ ಹತ್ತಿರ ಬಂದಿರಬಹುದೇ ಎನ್ನುವ ಚರ್ಚೆ ಈಗ ಶುರುವಾಗಿದೆ. ನಾವೆಲ್ಲರೂ ನೋಡುತ್ತಿರುವ ಹಾಗೆ ವಿರಾಟ್ ಕೋಹ್ಲಿ ಅವರು ಕಳೆದ ಎರಡೂವರೆ ವರ್ಷಗಳಿಂದ ಫಾರ್ಮ್ ಕಳೆದುಕೊಂಡಿದ್ದಾರೆ. ಎಲ್ಲಾ ಫಾರ್ಮೇಟ್ ಕ್ರಿಕೆಟ್ ನಲ್ಲೂ ಕಿಂಗ್ ಆಗಿ, ರನ್ ಗಳನ್ನು ಸಿಡಿಸಿ ಭಾರತ ತಂಡದ ಗೆಲುವಿಗೆ ಆಧಾರಾಗಿದ್ದ ಕಿಂಗ್ ಕೋಹ್ಲಿ ಈಗ ಭಾರಿ ವೈಫಲ್ಯ ಅನುಭವಿಸುತ್ತಿದ್ದಾರೆ.

ಎರಡೂವರೆ ವರ್ಷಗಳಿಂದ ಕೋಹ್ಲಿ ಅವರು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸೆಂಚುರಿ ಭಾರಿಸಿಲ್ಲ. ಇಂಗ್ಲೆಂಡ್ ಪಂದ್ಯಗಳಲ್ಲಿ ವಿಫಲರಾದ ಕಾರಣ, ಒಂದು ತಿಂಗಳು ವಿಶ್ರಾಂತಿ ಪಡೆದು, ಈಗ ಏಷ್ಯಾಕಪ್ ಪಂದ್ಯಗಳಿಗೆ ಮರಳಿ ಬಂದಿದ್ದಾರೆ. ವಿರಾಟ್ ಕೋಹ್ಲಿ ಅವರು ಭಾನುವಾರ ನಡೆದ ಪಾಕಿಸ್ತಾನ್ ವಿರುದ್ದದ ಪಂದ್ಯದಲ್ಲಿ 30+ ರನ್ಸ್ ಗಳಿಸಿದರು. ವಿರಾಟ್ ಅವರು, ರನ್ ಗಳಿಸುವ ಪ್ರಯತ್ನದಲ್ಲಿದ್ದರು ಸಹ, ಹಿಂದಿನ ಹಾಗೆ ಸುಲಭವಾಗಿ ರನ್ ಗಳು ಅವರ ಬ್ಯಾಟ್ ಇಂದ ಬರುತ್ತಿರುವ ಹಾಗೆ ತೋರಲಿಲ್ಲ. ರನ್ ಗಳಿಸಲು ಕೋಹ್ಲಿ ಅವರ ಬಹಳ ಪರದಾಡುತ್ತಿರುವ ಹಾಗೆ ತೋರುತ್ತದೆ.

ಹಾಗಾಗಿ ಕೋಹ್ಲಿ ಅವರು ಯಾವುದಾದರೂ ಒಂದು ಮಾದರಿ ಕ್ರಿಕೆಟ್ ಇಂದ ನಿವೃತ್ತಿ ಪಡೆಯುವುದು ಒಳ್ಳೆಯದು ಎಂದು ಕೆಲವರ ಅಭಿಪ್ರಾಯ ವ್ಯಕ್ತವಾಗಿದೆ. ಜೊತೆಗೆ ಟಿ20 ವರ್ಲ್ಡ್ ಕಪ್ ಗೆ ವಿರಾಟ್ ಆಯ್ಕೆಯಾಗುತ್ತಾರಾ ಇಲ್ಲವಾ ಎನ್ನುವ ಪ್ರಶ್ನೆ ಸಹ ಮೂಡಿದೆ. ಭಾರತದ ಮುಂದಿನ ಪಂದ್ಯಗಳಲ್ಲಿ ವಿರಾಟ್ ಕೋಹ್ಲಿ ಅವರ ಪ್ರದರ್ಶನ ಹೇಗಿರುತ್ತದೆ ಎನ್ನುವುದರ ಮೇಲೆ ಇದು ಅವಲಂಬಿಸಿದ್ದು, ಟಿ20 ವಿಶ್ವಕಪ್ ಪಂದ್ಯಗಳಿಗೆ ಆಯ್ಕೆಯಾದರು ಸಹ, ಅದಾದ ಬಳಿಕ ವಿರಾಟ್ ಅವರು ಮುಂದುವರೆಯುತ್ತಾರೋ ಇಲ್ಲವೋ, ನಿವೃತ್ತಿಯನ್ನು ಬಿಸಿಸಿಐ ಘೋಷಣೆ ಮಾಡುತ್ತಾ ಅಥವಾ ವಿರಾಟ್ ಅವರು ಮಾಡುತ್ತಾರಾ ಎನ್ನುವ ಆತಂಕ ಸಹ ಶುರುವಾಗಿದೆ. ವಿರಾಟ್ ಅವರ ನಿರ್ಧಾರ ಏನಾಗಿರುತ್ತದೆ ಎಂದು ಕಾದು ನೋಡಬೇಕಿದೆ

Get real time updates directly on you device, subscribe now.