ಫಾರ್ಮ್ ಕಳೆದುಕೊಂಡಿರುವ ವಿರಾಟ್ ಹೊರಹೋದರೆ ಮೂರನೇ ಕ್ರಮಾಂಕದ ಮೇಲೆ ಕಣ್ಣಿಟ್ಟಿರುವ ಮೂರು ಆಟಗಾರರು ಯಾರು ಗೊತ್ತೇ?? ಯಾರು ಬೆಸ್ಟ್ ಇವರಲ್ಲಿ??

ಫಾರ್ಮ್ ಕಳೆದುಕೊಂಡಿರುವ ವಿರಾಟ್ ಹೊರಹೋದರೆ ಮೂರನೇ ಕ್ರಮಾಂಕದ ಮೇಲೆ ಕಣ್ಣಿಟ್ಟಿರುವ ಮೂರು ಆಟಗಾರರು ಯಾರು ಗೊತ್ತೇ?? ಯಾರು ಬೆಸ್ಟ್ ಇವರಲ್ಲಿ??

ನಮಸ್ಕಾರ ಸ್ನೇಹಿತರೇ ವಿರಾಟ್ ಕೊಹ್ಲಿ ಒಂದು ಕಾಲದಲ್ಲಿ ಭಾರತ ಕ್ರಿಕೆಟ್ ತಂಡದ ರನ್ ಮಶೀನ್. ವಿರಾಟ್ ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತಿತ್ತು. ಆದರೇ ಈಗ ಕಾಲ ಬದಲಾಗಿದೆ. ವಿರಾಟ್ ಬ್ಯಾಟ್ ನಿಂದ ರನ್ನುಗಳ ಬರ ಆರಂಭವಾಗಿದೆ. ಹಾಗಾಗಿ ವಿರಾಟ್ ಅರ್ಧಕ್ಕಿಂತ ಹೆಚ್ಚು ವರ್ಷ ವಿಶ್ರಾಂತಿಯಲ್ಲಿಯೇ ಇರುತ್ತಾರೆ. ಸದ್ಯ ವಿರಾಟ್ ಕೊಹ್ಲಿ ಆಡುತ್ತಿದ್ದ ಮೂರನೇ ಕ್ರಮಾಂಕದ ಮೇಲೆ ಭಾರತದ ಟಾಪ್ 3 ಬ್ಯಾಟ್ಸ್ಮನ್ ಗಳು ಕಣ್ಣಿಟ್ಟಿದ್ದಾರೆ. ಬನ್ನಿ ಆ ಆಟಗಾರರು ಯಾರು ಎಂಬುದನ್ನು ತಿಳಿಯೋಣ.

1.ಶುಭಮಾನ್ ಗಿಲ್ : ಆರಂಭಿಕ, ಮಧ್ಯಮ ಕ್ರಮಾಂಕ ಹೀಗೆ ಎಲ್ಲಿ ಬ್ಯಾಟಿಂಗ್ ಸಿಗುತ್ತದೆಯೋ ಅಲ್ಲಿ ಜವಾಬ್ದಾರಿಯುತವಾಗಿ ಆಡುವ ಯುವ ಆಟಗಾರ ಶುಭಮಾನ್ ಗಿಲ್ ಮೂರನೇ ಕ್ರಮಾಂಕಕ್ಕೆ ಹೇಳಿ ಮಾಡಿಸಿದ ಆಟಗಾರರಾಗಿದ್ದಾರೆ. ಇವರು ಟೀಂ ಇಂಡಿಯಾದ ಮೂರನೇ ಕ್ರಮಾಂಕದ ಭವಿಷ್ಯದ ಆಟಗಾರ ಆದರೂ ಆಗಬಲ್ಲರು.

2.ಶ್ರೇಯಸ್ ಅಯ್ಯರ್ : ಭವಿಷ್ಯದ ಟೀಂ ಇಂಡಿಯಾದ ನಾಯಕ ಎಂದೇ ಬಿಂಬಿತವಾಗಿದ್ದ ಅಯ್ಯರ್ ಸಹ ವಿರಾಟ್ ಕೊಹ್ಲಿಯ ಮೂರನೇ ಕ್ರಮಾಂಕದ ಮೇಲೆ ಕಣ್ಣಿಟ್ಟಿರುವ ಆಟಗಾರ. ಆದರೇ ಇವರ ಫಾರ್ಮ್ ಸಹ ಆಗಾಗ ಕಣ್ಣಾಮುಚ್ಚಾಲೆ ಆಟವಾಡುತ್ತಿರುತ್ತದೆ. ಶಾರ್ಟ್ ಬಾಲ್ ಗಳನ್ನು ಎದುರಿಸುವ ಕೌಶಲ್ಯ ಬೆಳೆಸಿಕೊಂಡರೇ,ಅಯ್ಯರ್ ಗೆ ಉತ್ತಮ ಭವಿಷ್ಯವಿದೆ.

3.ದೀಪಕ್ ಹೂಡಾ : ತಮ್ಮ ಹೊಡಿಬಡಿ ಆಟದಿಂದ ಫೇಮಸ್ ಆಗಿರುವ ಆಲ್ ರೌಂಡರ್ ಹೂಡಾ ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಗಿಟ್ಟಿಸಲು ಆಸೆಯಿಂದ ಕಾಯುತ್ತಿದ್ದಾರೆ. ಇವರು ಸಹ ವಿರಾಟ್ ಕೊಹ್ಲಿಯ ಮೂರನೇ ಕ್ರಮಾಂಕದ ಮೇಲೆ ಕಣ್ಣಿಟ್ಟಿದ್ದಾರೆ. ಬ್ಯಾಟಿಂಗ್ ಜೊತೆ ಬೌಲಿಂಗ್ ನಲ್ಲಿಯೂ ಸಹ ಉಪಯುಕ್ತ ಕಾಣಿಕೆ ನೀಡಬಲ್ಲ ಇವರು ಸಹ ಆಯ್ಕೆಯಾಗಬಹುದು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ