ಅದ್ಭುತ ಆಟವಾಡಿದರೂ ಕೂಡ ಗಾಯದ ಸಮಸ್ಯೆಯಿಂದ ಸ್ಥಾನವನ್ನು ಕಳೆದುಕೊಂಡಿರುವ ಟಾಪ್ -4 ನತದೃಷ್ಟ ಆಟಗಾರರು ಯಾರು ಗೊತ್ತೇ??
ಅದ್ಭುತ ಆಟವಾಡಿದರೂ ಕೂಡ ಗಾಯದ ಸಮಸ್ಯೆಯಿಂದ ಸ್ಥಾನವನ್ನು ಕಳೆದುಕೊಂಡಿರುವ ಟಾಪ್ -4 ನತದೃಷ್ಟ ಆಟಗಾರರು ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ದೈಹಿಕ ಸಾಮರ್ಥ್ಯ ಕ್ರೀಡೆಯಲ್ಲಿ ಬಹುಮುಖ್ಯ. ಯಾರು ಫಿಟ್ ನೆಸ್ ಕಾಯ್ದುಕೊಳ್ಳುತ್ತಾರೋ ಬಹುಕಾಲ ಕ್ರೀಡಾಲೋಕವನ್ನು ಆಳಬಹುದು. ಕ್ರಿಕೆಟ್ ಸಹ ಇಂತಹದೇ ಗೇಮ್. ಇಲ್ಲಿ ಸಹ ಫಿಟ್ ನೆಸ್ ಗೆ ಬಹಳ ಆದ್ಯತೆ ಇದೆ. ಪ್ರತಿಭೆ ಇದ್ದೂ ಸಹ ಕೆಲವು ಆಟಗಾರರು ಕೆರಿಯರ್ ಪದೇ ಪದೇ ಗಾಯದ ಸಮಸ್ಯೆಯ ಕಾರಣ ಅರ್ಧದಲ್ಲೇ ಮೊಟಕಾಯಿತು. ಬನ್ನಿ ಅಂತಹ ಟಾಪ್ -4 ಭಾರತೀಯ ಆಟಗಾರರು ಯಾರು ಎಂಬುದನ್ನು ತಿಳಿಯೋಣ.
ಟಾಪ್ 4 – ಮನೋಜ್ ತಿವಾರಿ : ಪಶ್ಚಿಮ ಬಂಗಾಳದ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್. ಉತ್ತಮ ಸರಾಸರಿಯಲ್ಲಿ ಬ್ಯಾಟ್ ಬೀಸಿ ರಾಷ್ಟ್ರೀಯ ತಂಡದಲ್ಲಿ ಸಹ ಸ್ಥಾನ ಪಡೆದಿದ್ದರು.ಆದರೇ ಪದೇ ಪದೇ ಗಾಯಗೊಂಡ ಕಾರಣ ತಂಡದಲ್ಲಿ ಅವಕಾಶ ಸಿಗದೇ ಅವರ ಕೆರಿಯರ್ ಮುಗಿಯಿತು.
ಟಾಪ್ 3 – ವಿಜಯ್ ಶಂಕರ್: ತಮಿಳುನಾಡಿನ ಆಲ್ ರೌಂಡರ್ ವಿಜಯ್ ಶಂಕರ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದರು.ಆದರೇ ಪದೇ ಪದೇ ಗಾಯಕ್ಕೆ ಒಳಗಾದ ಕಾರಣ ತಂಡದಿಂದ ಹೊರಬೀಳಬೇಕಾಯಿತು. ಜೊತೆಗೆ ಫಾರ್ಮ್ ಸಹ ಕಳೆದುಕೊಂಡರು. ಹೀಗಾಗಿ ಈಗ ಅವರು ರಾಷ್ಟ್ರೀಯ ತಂಡಕ್ಕೆ ಮರಳುವುದು ಕಷ್ಟಸಾಧ್ಯವಾಗಿದೆ.
ಟಾಪ್ 2 – ಟಿ.ನಟರಾಜನ್ : ತಮಿಳುನಾಡಿನ ಏಡಗೈ ವೇಗದ ಬೌಲರ್ ಟಿ.ನಟರಾಜನ್ ಟೀಂ ಇಂಡಿಯಾಕ್ಕೆ ಬಂದಷ್ಟೇ ವೇಗವಾಗಿ ವಾಪಸ್ ಹೋದರು. ಅದಕ್ಕೆ ಪ್ರಮುಖ ಕಾರಣ ಗಾಯ. ಗಾಯಗೊಳ್ಳದಿದ್ದರೇ ನಟರಾಜನ್ ಟೀಂ ಇಂಡಿಯಾದ ಖಾಯಂ ಸದಸ್ಯರಾಗಬಹುದಿತ್ತು.
ಟಾಪ್ 1 – ವಾಷಿಂಗ್ಟನ್ ಸುಂದರ್: ತಮಿಳುನಾಡಿನ ಮತ್ತೊಬ್ಬ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್, ವರ್ಷದಲ್ಲಿ ಕ್ರಿಕೆಟ್ ಆಡುವುದಕ್ಕಿಂತ ಹೆಚ್ಚಾಗಿ ಗಾಯಗೊಂಡು ಮೈದಾನದಿಂದ ಹೊರಗುಳಿದಿದ್ದೇ ಜಾಸ್ತಿ. ಹೀಗಾಗಿ ಅವರು ಪ್ರತಿಭೆಯಿದ್ದರೂ ತಂಡದಲ್ಲಿ ಸ್ಥಾನ ಪಡೆಯಲು ಗಾಯ ಅಡ್ಡವಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.