ಒಂದೇ ಹೇಳಿಕೆಯಲ್ಲಿ ಶಮಿ ಹಾಗೂ ಬುಮ್ರಾ ರವರಿಗೆ ಶಾಕ್ ನೀಡಿದ ನಾಯಕ ರೋಹಿತ್ ಶರ್ಮ: ಟಾಪ್ ಬೌಲರ್ ಗಳಿಗೂ ಕ್ಯಾರೇ ಎನ್ನದೆ ಹೇಳಿದ್ದೇನು ಗೊತ್ತೇ??

ಒಂದೇ ಹೇಳಿಕೆಯಲ್ಲಿ ಶಮಿ ಹಾಗೂ ಬುಮ್ರಾ ರವರಿಗೆ ಶಾಕ್ ನೀಡಿದ ನಾಯಕ ರೋಹಿತ್ ಶರ್ಮ: ಟಾಪ್ ಬೌಲರ್ ಗಳಿಗೂ ಕ್ಯಾರೇ ಎನ್ನದೆ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತ ಕ್ರಿಕೆಟ್ ಸದ್ಯ ವಿಶ್ವದ ಅತ್ಯಂತ ಬಲಿಷ್ಠ ಕ್ರಿಕೆಟ್ ತಂಡ. ಕೋಚ್ ರಾಹುಲ್ ದ್ರಾವಿಡ್ ಹಾಗೂ ನಾಯಕ ರೋಹಿತ್ ಶರ್ಮಾ ಗರಡಿಯಲ್ಲಿ ಪಳಗಿರುವ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಸದ್ಯ ಆಡುವ ಹನ್ನೊಂದರ ಬಳಗದಲ್ಲಿ ಯಾರಿಗೆ ಸ್ಥಾನ ನೀಡುವುದು ಎಂಬುದೇ ಆಯ್ಕೆದಾರರಿಗೆ ತಲೆನೋವಾಗಿದೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಸಹ ಹಲವಾರು ಯುವ ವೇಗದ ಬೌಲರ್ ಗಳಿಗೆ ಅವಕಾಶ ನೀಡಲಾಗುತ್ತಿದೆ.

ಈ ನಡುವೆ ಭಾರತ ತಂಡದ ಸ್ಟಾರ್ ವೇಗಿಗಳಾದ ಜಸಪ್ರಿತ್ ಬುಮ್ರಾ ಹಾಗೂ ಮೊಹಮದ್ ಶಮಿ ರವರಿಗೆ ಮೊದಲಿನಂತೆ ಅವಕಾಶಗಳು ಸಿಗುತ್ತಿಲ್ಲ. ಟೆಸ್ಟ್ ಕ್ರಿಕೆಟ್ ಹೊರತುಪಡಿಸಿದರೇ ಈ ಜೋಡಿ ಬೇರೆ ಯಾವ ಮಾದರಿ ಕ್ರಿಕೆಟ್ ನಲ್ಲಿಯೂ ಸಹ ಜೋಡಿಯಾಗಿ ಬೌಲಿಂಗ್ ಮಾಡುತ್ತಿಲ್ಲ. ಈ ಬಗ್ಗೆ ನಾಯಕ ರೋಹಿತ್ ಶರ್ಮಾಗೆ ಕೇಳಿದಾಗ ಅವರು ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಜಸಪ್ರಿತ್ ಬುಮ್ರಾ ಹಾಗೂ ಮೊಹಮದ್ ಶಮಿ ಎಲ್ಲಾ ಸಮಯದಲ್ಲಿ ಒಟ್ಟಾಗಿ ಇನ್ಮುಂದೆ ಭಾರತ ತಂಡದಲ್ಲಿ ಆಡುವುದಿಲ್ಲ. ಇವರಿಗೆ ಸರಿಯಾಗುವ ಬ್ಯಾಕ್ ಅಪ್ ಆಟಗಾರರನ್ನು ಹುಡುಕುತ್ತಿದ್ದೇವೆ. ಆಟಗಾರರು ಗಾಯದ ಸಮಸ್ಯೆಗೆ ತುತ್ತಾಗದಿರಲು ಹಾಗೂ ಕಾರ್ಯಭಾರ ತಗ್ಗಿಸಲು ನಾವು ಕೋಚ್ ಜೊತೆ ರೋಟೆಶನ್ ಪದ್ದತಿ ತಂದಿದ್ದೇವೆ. ನಾವು ಕೇವಲ ಯಾರೋ ಒಂದಿಬ್ಬರ ಮೇಲೆ ಅವಲಂಬಿತವಾಗಿರುವುದಿಲ್ಲ. ಆಡುವ ಹನ್ನೊಂದು ಆಟಗಾರರು ಶೇ.100ರಷ್ಟು ಸಾಮರ್ಥ್ಯ ಹಾಕಬೇಕು. ಹಾಗಾಗಿ ಬುಮ್ರಾ ಮತ್ತು ಶಮಿ ಇನ್ನು ಮುಂದೆ ಒಟ್ಟಾಗಿ ಎಲ್ಲಾ ಪಂದ್ಯಗಳಲ್ಲಿ ಆಡುವುದಿಲ್ಲ. ಆದರೇ ಮಹತ್ವದ ಸರಣಿಗೆ ಮಾತ್ರ ಇವರಿಬ್ಬರೂ ಜೋಡಿಯಾಗಿ ಭಾರತ ತಂಡಕ್ಕೆ ಆಡುತ್ತಾರೆ. ಭಾರತ ತಂಡಕ್ಕೆ ಆಗಮಿಸುವ ಎಲ್ಲಾ ಪ್ರತಿಭೆಗಳಿಗೂ ಅವಕಾಶ ನೀಡುತ್ತೇವೆ. ಈ ದಿಸೆಯಲ್ಲಿಯೂ ಸಹ ಪ್ರಯತ್ನ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.