ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಕೈಗೆಟುವ ದರದಲ್ಲಿ ಫುಲ್ ತಜ್ಞರಿಂದ ಚೆಕ್ ಮಾಡಿಸಿ ಸೆಕೆಂಡ್ ಹ್ಯಾಂಡ್ ಫೋನ್ ಗಳ ಭರ್ಜರಿ ಮಾರಾಟ. ಚಿಲ್ಲರೆ ಹಣಕ್ಕೆ ಸಿಗುತ್ತದೆ ಐಫೋನ್: ಎಲ್ಲಿ ಗೊತ್ತೇ??

31

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಈ ಜಮಾನದಲ್ಲಿ ಪ್ರತಿಯೊಬ್ಬರ ಕೈಯಲ್ಲಿ ಕೂಡ ಮೊಬೈಲ್ ಫೋನ್ ಗಳು ಇರಲೇಬೇಕು. ಕೆಲವರು ಶೋಕಿಗಾಗಿ ಖರೀದಿಸಿದರೆ ಮತ್ತು ಹಲವರಿಗೆ ಮೊಬೈಲ್ ಫೋನ್ಗಳ ಅಗತ್ಯತೆ, ಅವರು ಉಸಿರಾಡುವ ಗಾಳಿಗಿಂತ ಹೆಚ್ಚಾಗಿರುತ್ತದೆ ಎಂದು ಹೇಳಬಹುದಾಗಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹಣದುಬ್ಬರ ಆಗಿರುವ ಕಾರಣದಿಂದಾಗಿ ಮೊಬೈಲ್ ಫೋನ್ ಗಳನ್ನು ಹೆಚ್ಚಿನವರು ಮಾರಾಟ ಮಾಡುತ್ತಾರೆ.

ಮರುವಾಣಿಜ್ಯ ಕಂಪನಿಗಳು ಹೀಗೆ ಮಾರಾಟ ಮಾಡಿದ ಸೆಕೆಂಡ್ ಹ್ಯಾಂಡ್ ಫೋನ್ ಗಳ ಬಿಡಿ ಭಾಗಗಳನ್ನು ಖರೀದಿಸುತ್ತಾರೆ. ಇತ್ತೀಚಿಗಷ್ಟೇ ಕ್ಯಾಶಿಫೈ ಸಂಸ್ಥೆ ನಡೆಸಿರುವ ಸಮೀಕ್ಷೆ ಪ್ರಕಾರ 70 ಪ್ರತಿಶತ ಜನರು ಬ್ರಾಂಡೆಡ್ ಫೋನ್ ಗಳ ಮರು ನವೀಕರಣಗೊಂಡ ಡಿವೈಸ್ ಗಳನ್ನು ತಮ್ಮ ಬಜೆಟ್ಗೆ ತಕ್ಕಂತೆ ಸೆಕೆಂಡ್ ಹ್ಯಾಂಡ್ ಗೆ ಖರೀದಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಮೊಬೈಲ್ಗಳ ದರ ದಿನದಿಂದ ದಿನಕ್ಕೆ ಏರುತ್ತಿರುವ ಕಾರಣದಿಂದಾಗಿ ಮರು ನವೀಕರಣಗೊಂಡ ಫೋನ್ಗಳನ್ನು ಹೆಚ್ಚಾಗಿ ಎಲ್ಲರೂ ಖರೀದಿಸುತ್ತಿದ್ದಾರೆ. ಕೆಲವರು ತಮಗಾಗಿ ಖರೀದಿಸಿದರೆ ಇನ್ನು ಕೆಲವರು ತಮ್ಮ ಪ್ರೀತಿಪಾತ್ರರಿಗಾಗಿ ಖರೀದಿಸುತ್ತಿದ್ದಾರೆ. ಅದರಲ್ಲೂ ಬ್ರಾಂಡೆಡ್ ಫೋನ್ ಗಳು ವಿಶೇಷವಾಗಿ ಐಫೋನ್ ಮೊಬೈಲ್ ನ ಹಲವಾರು ಸರಣಿಗಳು ಅದನ್ನು ಹೊಸದಾಗಿ ಖರೀದಿಸುವುದಕ್ಕಿಂತ ಇಲ್ಲಿ ಮರು ನವೀಕರಣಗೊಂಡ ಕಡಿಮೆ ಬೆಲೆಯಲ್ಲಿ ಖರೀದಿಸುವುದಕ್ಕೆ ಜನರು ಮುಗಿ ಬೀಳುತ್ತಿದ್ದಾರಂತೆ.

2021ರ ಸಮೀಕ್ಷೆ ಪ್ರಕಾರ ತಮ್ಮ ಮೊಬೈಲ್ ಫೋನ್ ಗಳನ್ನು ಮಾರಾಟ ಮಾಡಿರುವ ಅವರ ಸಂಖ್ಯೆಯಲ್ಲಿ ಮೊದಲ ಮೂರು ಸ್ಥಾನಗಳನ್ನು ನವದೆಹಲಿ ಬೆಂಗಳೂರು ಹಾಗೂ ಮುಂಬೈನ ವಾಸಿಗಳು ಕಾಣಿಸಿಕೊಳ್ಳುತ್ತಾರೆ. ಹೀಗಾಗಿ ಸದ್ಯದ ಮಟ್ಟಿಗೆ ದಿನೇದಿನೇ ಏರುತ್ತಿರುವ ಮೊಬೈಲ್ನ ಬೆಲೆ ಏರಿಕೆ ಎದುರಿಗೆ ಗ್ರಾಹಕರು ಮರುಣವೀಕರಣಗೊಂಡ ಫೋನ್ಗಳನ್ನೇ ಹೆಚ್ಚಾಗಿ ಖರೀದಿಸುತ್ತಿದ್ದಾರೆ ಎಂಬುದಾಗಿ ನಡೆಸಿರುವ ಸರ್ವೆಯ ಪ್ರಕಾರ ಒಟ್ಟಾರೆಯಾಗಿ ನಾವು ನಿರ್ಧಾರಕ್ಕೆ ಬರಬಹುದಾಗಿದೆ. ಕ್ಯಾಶಿಫೈ ನಂತಹ ಮರು ವಾಣಿಜ್ಯ ಕಂಪನಿಯಲ್ಲಿ ಸಿಗುವಂತಹ ಕಡಿಮೆ ಬೆಲೆಯ ಉತ್ಕೃಷ್ಟ ಗುಣಮಟ್ಟದ ಸೆಕೆಂಡ್ ಹ್ಯಾಂಡ್ ಮೊಬೈಲ್ ಗಳನ್ನು ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.

Get real time updates directly on you device, subscribe now.