ಬರೋಬ್ಬರಿ 146 ಕಿಲೋ ಮೀಟರ್ ವೇಗದ ಬಾಲ್ ಗೆ ಸೂರ್ಯ ಕುಮಾರ್ ಉತ್ತರ ನೀಡಿದ್ದು ಹೇಗೆ ಗೊತ್ತೇ?? ಸಿಕ್ಸರ್ ಗಳಿಸಿದ ವಿಡಿಯೋ ನೀವೇ ನೋಡಿ.
ಬರೋಬ್ಬರಿ 146 ಕಿಲೋ ಮೀಟರ್ ವೇಗದ ಬಾಲ್ ಗೆ ಸೂರ್ಯ ಕುಮಾರ್ ಉತ್ತರ ನೀಡಿದ್ದು ಹೇಗೆ ಗೊತ್ತೇ?? ಸಿಕ್ಸರ್ ಗಳಿಸಿದ ವಿಡಿಯೋ ನೀವೇ ನೋಡಿ.
ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ಭಾರತೀಯ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯನ್ನು ವೈಟ್ ವಾಶ್ ಮಾಡಿ ಗೆದ್ದುಕೊಂಡಿದೆ. ಇನ್ನು ಐದು ಪಂದ್ಯಗಳ ಟಿ ಟ್ವೆಂಟಿ ಸರಣಿ ಕೂಡ ಪ್ರಾರಂಭವಾಗಿದ್ದು ಭಾರತೀಯ ಕ್ರಿಕೆಟ್ ತಂಡ ಮೊದಲನೇ ಪಂದ್ಯವನ್ನೇ ಗೆದ್ದುಬೀಗಿದೆ.
ಅದರಲ್ಲೂ ವಿಶೇಷವಾಗಿ ಸೂರ್ಯ ಕುಮಾರ್ ಯಾದವ್ ರವರು ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ ಟ್ವೆಂಟಿ ಪಂದ್ಯದಲ್ಲಿ ರೋಹಿತ್ ಶರ್ಮ ರವರ ಜೊತೆಗೆ ಓಪನಿಂಗ್ ಸ್ಥಾನದಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿ ಕಂಡುಬಂದಿತು. ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಳ್ಳಲು ಪ್ರಯತ್ನಿಸಿದ ಸೂರ್ಯ ಕುಮಾರ್ ಯಾದವ್ ಆರಂಭಿಕ ಆಟಗಾರನಾಗಿ ಅಪಾಯಕಾರಿಯಾಗಿ ವೆಸ್ಟ್ ಇಂಡೀಸ್ ಬೌಲರ್ ಗಳಿಗೆ ಕಾಣಿಸಿಕೊಳ್ಳತೊಡಗಿದರು ಎಂದರೆ ತಪ್ಪಾಗಲಾರದು. ಹೌದು ಗೆಳೆಯರೇ ಸೂರ್ಯ ಕುಮಾರ್ ಯಾದವ್ರವರು ಮೊದಲ ಟಿ ಟ್ವೆಂಟಿ ಪಂದ್ಯದಲ್ಲಿ ಗಳಿಸಿದ್ದು ಕೇವಲ 16 ಎಸೆತಗಳಲ್ಲಿ 24 ರನ್ನುಗಳಾದರೂ ಕೂಡ ಅಲ್ಜರಿ ಜೋಸೆಫ್ ರವರ ಎಸೆತದಲ್ಲಿ ಸೂರ್ಯ ಕುಮಾರ್ ಯಾದವ್ ನಿರ್ಭೀತರಾಗಿ ಬಾರಿಸಿದ ಹೊಡೆತ ಒಂದು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಸೆನ್ಸೇಷನ್ ಸೃಷ್ಟಿಸಿದೆ. ಹೌದು ಗೆಳೆಯರೇ, ಸೂರ್ಯಕುಮಾರ್ ಯಾದವ್ ರವರ ಈ ಸಿಕ್ಸ್ ಎಲ್ಲಾ ಕಡೆ ಈಗ ಟ್ರೆಂಡಿಂಗ್ ಟಾಪಿಕ್ ಆಗಿದೆ.
ಅಲ್ಜರಿ ಜೋಸೆಫ್ ರವರ ನಾಲ್ಕನೇ ಓವರ್ ನ ಎರಡನೇ ಎಸೆತದಲ್ಲಿ ಸೂರ್ಯ ಕುಮಾರ್ ಯಾದವ್ ರವರು ವಿಕೆಟ್ನಿಂದ ಆಫ್ ಸೈಡ್ ಗೆ ಹೋಗಿ ಹಿಂದಕ್ಕೆ ಹೆಲಿಕಾಪ್ಟರ್ ಶಾಟ್ ಮಾದರಿಯ ಸಿಕ್ಸ್ ಅನ್ನು ಬಾರಿಸುತ್ತಾರೆ. ಕ್ಯಾಮರಾ ಕಣ್ಣಿಗೆ ಅಪರೂಪವಾಗಿ ಸೆರೆಯಾಗಿರುವ ಈ ದೃಶ್ಯ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸುತ್ತಿದೆ. 31ರ ಹರೆಯದ ಸೂರ್ಯಕುಮಾರ್ ಯಾದವ್ 19 ಟಿ 20 ಪಂದ್ಯಗಳಿಂದ ಈಗಾಗಲೇ ಬರೋಬ್ಬರಿ 537 ರನ್ನುಗಳನ್ನು ಬಾರಿಸಿದ್ದು ಸದ್ಯದ ಮಟ್ಟಿಗೆ ಭಾರತೀಯ ಕ್ರಿಕೆಟ್ ತಂಡದ ಎಲ್ಲಾ ಮಾದರಿಯ ಫಾರ್ಮೆಟ್ ಗಳ ನಂಬಿಕಸ್ಥ ಆಟಗಾರ ಎಂಬುದಾಗಿ ಹೇಳಬಹುದಾಗಿದೆ. ಅದರಲ್ಲೂ ಪ್ರಮುಖವಾಗಿ ಮುಂದಿನ ಟಿ20 ವಿಶ್ವಕಪ್ ತಂಡಕ್ಕೆ ಭಾರತ ತಂಡದಲ್ಲಿ ಇರಲೇಬೇಕಾದ ಪ್ರಮುಖ ಆಟಗಾರ ಎಂದು ಹೇಳಬಹುದು.
#SuryakumarYadav start with his own way #surya #rohit #INDvsWIt20 #six pic.twitter.com/qUGJPNprtN
— cricket_lover♥️ (@cricket_lover55) July 29, 2022