ಮೊದಲ ಬಾರಿಗೆ ದ್ರಾವಿಡ್ ವಿರುದ್ಧ ಕೂಗು: ದ್ರಾವಿಡ್ ಹಾಗೂ ರೋಹಿತ್ ಶರ್ಮಾ ವಿರುದ್ಧ ಕಿಡಿಕಾರಿದ ಮೊಹಮ್ಮದ್ ಕೈಫ್. ಯಾಕೆ ಗೊತ್ತೇ??
ಮೊದಲ ಬಾರಿಗೆ ದ್ರಾವಿಡ್ ವಿರುದ್ಧ ಕೂಗು: ದ್ರಾವಿಡ್ ಹಾಗೂ ರೋಹಿತ್ ಶರ್ಮಾ ವಿರುದ್ಧ ಕಿಡಿಕಾರಿದ ಮೊಹಮ್ಮದ್ ಕೈಫ್. ಯಾಕೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನದ ಸರಣಿಯನ್ನು ಗೆದ್ದ ಭಾರತ ತಂಡ , ಟಿ 20 ಸರಣಿಯಲ್ಲಿ ಸಹ ಮೊದಲ ಪಂದ್ಯವನ್ನು ಭರ್ಜರಿಯಾಗಿ ಯಶಸ್ವಿಯಾಗಿ ಗೆದ್ದಿದೆ. ಮೊದಲು ಬ್ಯಾಟ್ ಮಾಡಿದ ಭಾರತ ತಂಡ ರೋಹಿತ್ ಶರ್ಮಾ ಹಾಗೂ ವಿಕೆಟ್ ಕೀಪರ್ ಬ್ಯಾಟ್ಸಮನ್ ದಿನೇಶ್ ಕಾರ್ತಿಕ್ ರವರ ಅದ್ಭುತ ಬ್ಯಾಟಿಂಗ್ ನಿಂದ 20 ಓವರ್ ಗಳಲ್ಲಿ 190 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಆಕ್ರಮಣಕಾರಿಯಾಗಿ ಇನ್ನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ತಂಡ ನಂತರ ಭಾರತೀಯ ಬೌಲರ್ ಗಳ ಕರಾರುವಕ್ಕಾದ ದಾಳಿಯಿಂದ ಪ್ರತಿ ಹಂತದಲ್ಲಿಯೂ ವಿಕೇಟ್ ಕಳೆದುಕೊಳ್ಳುತ್ತಾ ಸಾಗಿ ನಂತರ 70 ರನ್ ಗಳಿಂದ ಸೋಲನ್ನು ಒಪ್ಪಿಕೊಂಡಿತು.
ಈ ನಡುವೆ ಭಾರತ ತಂಡದಲ್ಲಿ ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ಸೂರ್ಯ ಕುಮಾರ್ ಯಾದವ್ ಕಣಕ್ಕಿಳಿದರು.ಇದು ಹಲವರ ಅಚ್ಚರಿಗೆ ಕಾರಣವಾಯಿತು. ಕಳೆದ ಭಾರಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಜೊತೆ ರಿಷಭ್ ಪಂತ್ ಇನ್ನಿಂಗ್ಸ್ ಆರಂಭಿಸಿದ್ದರು. ಈ ಸರಣಿಯಲ್ಲಿಯೂ ಸಹ ಅದೇ ಜೋಡಿ ಆರಂಭಿಸುತ್ತದೆ ಎಂದು ನೀರಿಕ್ಷಿಸಲಾಗಿತ್ತು. ಆದರೇ ಸೂರ್ಯ ಕುಮಾರ್ ಯಾದವ್ ಜೊತೆ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡದ ನಡೆ ಬಗ್ಗೆ ಈಗ ಭಾರತ ತಂಡದ ಮಾಜಿ ಆಟಗಾರರು ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಭಾರತ ತಂಡದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ತಂಡದ ಕೋಚ್ ರಾಹುಲ್ ದ್ರಾವಿಡ್ ಹಾಗೂ ರೋಹಿತ್ ಶರ್ಮಾ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಟಿ 20 ವಿಶ್ವಕಪ್ ಇಟ್ಟುಕೊಂಡು ತಂಡದ ಸಂಯೋಜನೆಯಲ್ಲಿ ಏಕೆ ಪದೇ ಪದೇ ಬದಲಾವಣೆ ಮಾಡುತ್ತಿರಿ.ಒಂದು ವೇಳೆ ಗಾಯಗೊಂಡಿರುವ ಕೆ.ಎಲ್.ರಾಹುಲ್ ಹಾಗೂ ವಿರಾಟ್ ಕೊಹ್ಲಿ ತಂಡಕ್ಕೆ ಪುನಃ ಆಗಮಿಸಿದರೇ ಆಗ ಸೂರ್ಯ ಕುಮಾರ್ ಯಾದವ್ ರನ್ನು ಯಾವ ಕ್ರಮಾಂಕದಲ್ಲಿ ಆಡಿಸುತ್ತಿರಿ ಎಂದು ಪ್ರಶ್ನಿಸಿದ್ದಾರೆ. ಇನ್ನು ರಿಷಭ್ ಪಂತ್ ರಿಗೆ ಇನ್ನು ಹೆಚ್ಚು ಅವಕಾಶಗಳನ್ನು ನೀಡಬಹುದಿತ್ತು ಏಕೆ ನೀಡಿಲ್ಲ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಉಳಿದಿರುವ ನಾಲ್ಕು ಪಂದ್ಯಗಳಲ್ಲಾದರೂ ಉತ್ತಮ ತಂಡದ ಸಂಯೋಜನೆ ಮಾಡಿ ಎಂದು ಸಲಹೆ ನೀಡಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ