ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಬಿಗ್ ನ್ಯೂಸ್: ವಿರಾಟ್ ಕೊಹ್ಲಿ ರವರಿಗೆ ಏಷ್ಯಾ ಕಪ್ ಗು ಮುನ್ನವೇ ಶಾಕ್ ನೀಡಿದ ಬಿಸಿಸಿಐ: ಹೀಗೆ ಮಾಡಿದ್ಯಾಕೆ. ಕಿಂಗ್ ಕೆರಿಯರ್ ಅಂತ್ಯ ಮಾಡಲು ಸ್ಕೆಚ್??

13,271

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ವಿರಾಟ್ ಕೊಹ್ಲಿ ರವರನ್ನು ಇಂಗ್ಲೆಂಡ್ ಸರಣಿಯ ನಂತರ ವೆಸ್ಟ್ ಇಂಡೀಸ್ ಸರಣಿಗೆ ಸಂಪೂರ್ಣವಾಗಿ ವಿಶ್ರಾಂತಿ ನೀಡಲಾಗಿತ್ತು. ಎಲ್ಲರೂ ಅಂದುಕೊಂಡಿದ್ದ ಹಾಗೆ ವೆಸ್ಟ್ ಇಂಡೀಸ್ ಸರಣಿಯ ನಂತರ ನಡೆಯಲಿರುವ ಜಿಂಬಾಬ್ವೆ ವಿರುದ್ಧ ಸರಣಿಗೆ ವಿರಾಟ್ ಕೊಹ್ಲಿ ರವರನ್ನು ಆಯ್ಕೆ ಮಾಡಲಾಗುತ್ತದೆ ಎಂಬುದಾಗಿ. ಹೀಗೆ ಮಾಡಿದ್ದರೆ ವಿರಾಟ್ ಕೊಹ್ಲಿ ರವರು ತಮ್ಮ ಕರಿಯರ್ ನಲ್ಲಿ ಮೊದಲ ಬಾರಿಗೆ ಜಿಂಬಾಬ್ವೆ ವಿರುದ್ಧ ಆಡಿದ ಹಾಗೆ ಆಗುತ್ತಿತ್ತು.

ಎಲ್ಲದಕ್ಕಿಂತ ಪ್ರಮುಖವಾಗಿ ಕಳಪೆ ಫಾರ್ಮ್ ನಲ್ಲಿರುವ ವಿರಾಟ್ ಕೊಹ್ಲಿ ರವರಿಗೆ ಏಷ್ಯಾ ಕಪ್ ಹಾಗೂ ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಲು ಒಂದು ಒಳ್ಳೆಯ ಕಾರಣ ಸಿಗುತ್ತಿತ್ತು ಯಾಕೆಂದರೆ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ವಿರಾಟ್ ಕೊಹ್ಲಿ ರವರು ಉತ್ತಮ ಪ್ರದರ್ಶನವನ್ನು ನೀಡುವ ಮೂಲಕ ಏಷ್ಯಾ ಕಪ್ ತಂಡಕ್ಕೆ ಆಯ್ಕೆ ಆಗುವ ಸಾಧ್ಯತೆ ಹೆಚ್ಚಾಗಿತ್ತು. ಆದರೆ ಸದ್ಯಕ್ಕೆ ಕೇಳಿ ಬರುತ್ತಿರುವ ಸುದ್ದಿಯ ಪ್ರಕಾರ ವಿರಾಟ್ ಕೊಹ್ಲಿ ರವರನ್ನು ಜಿಂಬಾಬ್ವೆ ವಿರುದ್ಧದ ಸರಣಿಯ ತಂಡಕ್ಕೆ ಆಯ್ಕೆ ಮಾಡಿಲ್ಲ ಎಂಬುದಾಗಿ ತಿಳಿದು ಬಂದಿದೆ. ಇದು ವಿರಾಟ್ ಕೊಹ್ಲಿ ಅವರಿಗೆ ಕೊನೆಯ ಅವಕಾಶವಾಗಿತ್ತು ಆದರೆ ಇಲ್ಲಿ ಕೂಡ ಬಿಸಿಸಿಐ ಅವರಿಗೆ ಅವಕಾಶ ನೀಡಿಲ್ಲ ಎಂಬುದಾಗಿ ತಿಳಿದು ಬಂದಿದೆ. ಹಲವಾರು ಕ್ರಿಕೆಟ್ ಅಭಿಮಾನಿಗಳು ಈ ಘಟನೆಯನ್ನು ಸಾಕ್ಷಿಕರಿಸಿದ ನಂತರ ಖಂಡಿತವಾಗಿ ಇಲ್ಲೊಂದು ಕಾಣದ ಕೆಲಸವೊಂದು ನಡೆಯುತ್ತಿದೆ ಎಂಬುದಾಗಿ ಅನುಮಾನ ಪಡೆದ ಶುರು ಮಾಡಿದ್ದಾರೆ.

ಹೌದು ಗೆಳೆಯರೆ ಜಿಂಬಾಬ್ವೆ ವಿರುದ್ಧದ ಸರಣಿಗೆ ವಿರಾಟ್ ಕೊಹ್ಲಿ ರವರನ್ನು ತಂಡದಿಂದ ಹೊರ ಹಾಕಿದ ಹಿನ್ನೆಲೆಯಲ್ಲಿ ಖಂಡಿತವಾಗಿ ಏಷ್ಯಾ ಕಪ್ ಹಾಗೂ ವಿಶ್ವಕಪ್ ತಂಡದಲ್ಲಿ ಕೂಡ ವಿರಾಟ್ ಕೊಹ್ಲಿ ರವರಿಗೆ ಸ್ಥಾನವನ್ನು ನೀಡದೇ ಇರಲು ಈ ರೀತಿಯ ಕೆಲಸವನ್ನು ಮಾಡಿದ್ದಾರೆ ಎಂಬುದಾಗಿ ಅಭಿಮಾನಿಗಳು ಹಾಗೂ ಕ್ರಿಕೆಟ್ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ. ಮಾಜಿ ಕ್ರಿಕೆಟಿಗರು ಕೂಡ ಟಿ20 ವಿಶ್ವಕಪ್ ತಂಡದಿಂದ ವಿರಾಟ್ ಕೊಹ್ಲಿ ಅವರನ್ನು ಹೊರಹಾಕಲು ಈ ರೀತಿಯ ಕಾರ್ಯ ನಡೆಯುತ್ತಿದೆ ಎಂಬುದಾಗಿ ಶಂಕಿಸಿದ್ದಾರೆ. ವಿರಾಟ್ ಕೊಹ್ಲಿ ಅವರ ಕರಿಯರ್ ಅನ್ನು ಮುಗಿಸಲು ಪ್ಲಾನ್ ನಡೆಯುತ್ತಿದೆ ಎಂಬುದಾಗಿ ಎಲ್ಲರೂ ಭಾವಿಸುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.