ಕರುನಾಡ ವಾಣಿ
ಇದು ನಿಮ್ಮ ಧ್ವನಿ

ವಿರಾಟ್ ಕೊಹ್ಲಿ ವಿಚಾರದಲ್ಲಿ ಬಿಸಿಸಿಐ ಗೆ ಹಾಗೂ ಭಾರತ ತಂಡಕ್ಕೆ ಎಚ್ಚರಿಕೆ ನೀಡಿದ ಆಸ್ಟ್ರೇಲಿಯಾ ಗ್ರಿಲ್ ಕ್ರಿಸ್ಟ್. ಹೇಳಿದ್ದೇನು ಗೊತ್ತೇ??

ವಿರಾಟ್ ಕೊಹ್ಲಿ ವಿಚಾರದಲ್ಲಿ ಬಿಸಿಸಿಐ ಗೆ ಹಾಗೂ ಭಾರತ ತಂಡಕ್ಕೆ ಎಚ್ಚರಿಕೆ ನೀಡಿದ ಆಸ್ಟ್ರೇಲಿಯಾ ಗ್ರಿಲ್ ಕ್ರಿಸ್ಟ್. ಹೇಳಿದ್ದೇನು ಗೊತ್ತೇ??

1,086

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತೀಯ ಕ್ರಿಕೆಟ್ ತಂಡ ಈಗಾಗಲೇ ಅಂತರಾಷ್ಟ್ರೀಯ ಕ್ರಿಕೆಟ್ ಸರಣಿಯಲ್ಲಿ ಅತ್ಯುತ್ತಮವಾಗಿ ಪ್ರದರ್ಶನವನ್ನು ನೀಡುತ್ತಿದೆ. ಸೌತ್ ಆಫ್ರಿಕಾ ಇಂಗ್ಲೆಂಡ್ ಐರ್ಲೆಂಡ್ ಹಾಗೂ ಈಗಾಗಲೇ ವೆಸ್ಟ್ ಇಂಡೀಸ್ ವಿರುದ್ಧವೂ ಕೂಡ ಭಾರತೀಯ ಕ್ರಿಕೆಟ್ ತಂಡ ಅಧಿಕಾರಯುತವಾಗಿ ಸರಣಿಯನ್ನು ಆಡಿದೆ ಎಂದು ಹೇಳಬಹುದಾಗಿದೆ. ಅದರಲ್ಲೂ ಪ್ರಮುಖವಾಗಿ ಈ ಎಲ್ಲಾ ಸರಣಿಗಳಲ್ಲಿ ಕೂಡ ಹೆಚ್ಚಾಗಿ ತಂಡದಲ್ಲಿ ಇದ್ದಿದ್ದು ಕೇವಲ ಯುವ ಆಟಗಾರರ ಎಂದು ಹೇಳಬಹುದು.

Follow us on Google News

ಕಳೆದ ಕೆಲವು ವರ್ಷಗಳಿಂದ ತಂಡದ ಪ್ರಮುಖ ಆಟಗಾರ ಆಗಿರುವ ವಿರಾಟ್ ಕೊಹ್ಲಿ ರವರು ಕಳಪೆ ಫಾರ್ಮ್ ನಲ್ಲಿ ಇರುವ ಕಾರಣದಿಂದಾಗಿ ಅವರನ್ನು ತಂಡದಿಂದ ಹೊರ ಹಾಕಿ ಹಾಗೂ ಮುಂದಿನ ವಿಶ್ವಕಪ್ ನಲ್ಲಿ ಅವರನ್ನು ಆಡಿಸಬೇಡಿ ಎಂಬುದಾಗಿ ಹಲವಾರು ಮಾಜಿ ಕ್ರಿಕೆಟಿಗರು ವಿರಾಟ್ ಕೊಹ್ಲಿ ರವರ ವಿರುದ್ಧ ಅಸಮಾಧಾನವನ್ನು ಹೊರಹಾಕಿದ್ದಾರೆ. ಹೇಗಿದ್ದರೂ ಕೂಡ ಕೆಲವೊಂದು ಕಡೆಗಳಲ್ಲಿ ವಿರಾಟ್ ಕೊಹ್ಲಿ ಅವರಿಗೆ ಏಷ್ಯಾ ಕಪ್ ಹಾಗೂ ಟಿ20 ವಿಶ್ವಕಪ್ ನಲ್ಲಿ ಕ್ರಿಕೆಟ್ ಮಂಡಳಿ, ಜಿಂಬಾಬ್ವೆ ಸರಣಿಯನ್ನು ಕೊನೆಯ ಅವಕಾಶವನ್ನಾಗಿ ನೀಡಿದೆ ಎಂದು ಹೇಳಬಹುದು. ಇನ್ನು ಆಸ್ಟ್ರೇಲಿಯಾ ಮೂಲದ ಮಾಜಿ ಕ್ರಿಕೆಟಿಗ ಆಗಿರುವ ಆಡಂ ಗಿಲ್ ಕ್ರಿಸ್ಟ್ ರವರು ವಿರಾಟ್ ಕೊಹ್ಲಿ ರವರ ವಿರುದ್ಧ ಟೀಕೆ ಮಾಡುತ್ತಿರುವ ಮಾಜಿ ಕ್ರಿಕೆಟಿಗರಿಗೆ ಹಾಗೂ ಬಿಸಿಸಿಐ ಆಯ್ಕೆ ಸಮಿತಿಗೆ ಬಿಸಿ ಮುಟ್ಟಿಸಿದ್ದಾರೆ.

ವಿರಾಟ್ ಕೊಹ್ಲಿ ರವರು ಭಾರತೀಯ ಕ್ರಿಕೆಟ್ ತಂಡಕ್ಕೆ ಯಾವ ರೀತಿಯ ಕೊಡುಗೆಯನ್ನು ತಮ್ಮ ಸುದೀರ್ಘ ಕ್ರಿಕೆಟ್ ಅವಧಿಯಲ್ಲಿ ನೀಡಿದ್ದಾರೆ ಎಂಬುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ ಅವರಿಗೆ ಮತ್ತೆ ತಮ್ಮ ಲಯಕೆ ಮರಳಿ ಬರಲು ಕೇವಲ ಒಂದು ಇನ್ನಿಂಗ್ಸ್ ಸಾಕು ಎಂಬುದಾಗಿ ಆಡಂ ಗಿಲ್ ಕ್ರಿಸ್ಟ್ ವಿರಾಟ್ ಕೊಹ್ಲಿ ಪರ ಬ್ಯಾಟ್ ಬೀಸಿದ್ದಾರೆ. ಮುಂದಿನ ಟಿ20 ವಿಶ್ವಕಪ್ ನಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ವಿರಾಟ್ ಕೊಹ್ಲಿ ಇಲ್ಲದಿದ್ದರೆ ಖಂಡಿತವಾಗಿ ತಂಡ ಸಾಕಷ್ಟು ತಾಪತ್ರೆಗಳನ್ನು ಎದುರಿಸಬೇಕಾಗುತ್ತದೆ ಎಂಬುದಾಗಿ ಕೂಡ ಹೇಳಿದ್ದಾರೆ. ಕೇವಲ ಇಷ್ಟು ಮಾತ್ರವಲ್ಲದೆ ಈ ಬಾರಿಯ ವಿಶ್ವಕಪ್ ನಲ್ಲಿ ಫೈನಲ್ ಗೆ ಏರುವ ಫೇವರೆಟ್ ತಂಡಗಳಲ್ಲಿ ಭಾರತ ಕೂಡ ಒಂದು ಎಂಬುದಾಗಿ ಹೇಳಿದ್ದಾರೆ. ಗಿಲ್ ಕ್ರಿಸ್ಟ್ ರವರ ಈ ಹೇಳಿಕೆ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ನಮ್ಮೊಂದಿಗೆ ಹಂಚಿಕೊಳ್ಳಿ.