ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಜಿಂಬಾಬ್ವೆ ಪ್ರವಾಸದಲ್ಲಿ ಕೊಹ್ಲಿ ಕುರಿತು ಹೊಸ ಭವಿಷ್ಯ ನುಡಿದ ನ್ಯೂಝಿಲ್ಯಾಂಡ್ ಸ್ಕಾಟ್ ಸ್ಟೈರಿಸ್ , ಏನಂತೆ ಗೊತ್ತೇ?? ಕೊಹ್ಲಿ ಫ್ಯಾನ್ಸ್ ಪ್ರತಿಕ್ರಿಯೆ ಏನು ಗೊತ್ತೇ??

567

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಟೀಂ ಇಂಡಿಯಾ ಸದ್ಯ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದು ಏಕದಿನ ಸರಣಿಯಲ್ಲಿ ಐತಿಹಾಸಿಕ ದಿಗ್ವಿಜಯಗಳಿಸಿದೆ. ಇಂದಿನಿಂದ ಟಿ 20 ಸರಣಿ ಆರಂಭವಾಗಲಿದ್ದು, ಐದು ಪಂದ್ಯಗಳ ಟಿ 20 ಸರಣಿಯನ್ನು ಸಹ ಕ್ಲೀನ್ ಸ್ವೀಪ್ ಮಾಡಿಕೊಳ್ಳಲು ಎಲ್ಲಾ ಥರಹದ ಸಿದ್ದತೆಯಲ್ಲಿ ತೊಡಗಿದೆ. ವೆಸ್ಟ್ ಇಂಡೀಸ್ ಸರಣಿ ಮುಗಿದ ಅಲ್ಲಿಂದ ಸೀದಾ ಜಿಂಬಾಬ್ವೆಗೆ ತೆರಳಿ ಅಲ್ಲಿ ಸರಣಿಯನ್ನು ಆಡಲಿದೆ. ಅದಾದ ನಂತರ ಏಷ್ಯಾ ಕಪ್ ಹಾಗೂ ತದನಂತರ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ನಲ್ಲಿ ಪಾಲ್ಗೊಳ್ಳಲಿದೆ.

ಹಲವಾರು ವರ್ಷಗಳಿಂದ ಭಾರತದ ಪಾಲಿಗೆ ಮರೀಚಿಕೆಯಾಗಿರುವ ಐಸಿಸಿ ಟ್ರೋಫಿಯನ್ನು ಈ ಭಾರಿ ಶತಾಯಗತಾಯವಾಗಿ ಗೆಲ್ಲಲೇಬೇಕೆಂದು ಬಿಸಿಸಿಐ ತಂಡದ ಕೋಚ್ ರಾಹುಲ್ ದ್ರಾವಿಡ್ ಹಾಗೂ ಮ್ಯಾನೇಜ್ ಮೆಂಟ್ ಗೆ ಖಡಕ್ ಸೂಚನೆ ನೀಡಿದೆ ಎಂದು ಹೇಳಲಾಗಿದೆ. ಇನ್ನು ಭಾರತ ಕ್ರಿಕೆಟ್ ತಂಡದ ರನ್ ಮಶೀನ್ ಎಂದೇ ಬಿಂಬಿತವಾಗಿದ್ದ ವಿರಾಟ್ ಕೊಹ್ಲಿಯವರಿಗೆ ಮಾಡು ಇಲ್ಲವೇ ಮಡಿ ಎಂಬಂತೆ ಜಿಂಬಾಬ್ವೆ ಪ್ರವಾಸ ಏರ್ಪಾಡಾಗಿದೆ.

ಇಲ್ಲಿ ವಿರಾಟ್ ಕೊಹ್ಲಿ ವಿಫಲರಾದರೇ ಅವರು ತಂಡಕ್ಕೆ ವಾಪಸ್ ಆಗುವುದು ಬಹಳ ಕಷ್ಟವಾಗುತ್ತದೆ. ಹೀಗಾಗಿ ಜಿಂಬಾಬ್ವೆ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ತೋರಲೇಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಮಾತನಾಡಿರುವ ನ್ಯೂಜಿಲೆಂಡ್ ತಂಡದ ಮಾಜಿ ಆಟಗಾರ ಹಾಗೂ ವೀಕ್ಷಕ ವಿವರಣೆಗಾರ ಸ್ಕಾಟ್ ಸ್ಟೈರಿಸ್, ವಿರಾಟ್ ಕೊಹ್ಲಿ ಜಿಂಬಾಬ್ವೆ ಸರಣಿಯಲ್ಲಿ ಶತಕ ಗಳಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ವಿರಾಟ್ ಕೊಹ್ಲಿ ಈ ಹಿಂದೆ ಒತ್ತಡದ ಸಂದರ್ಭದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಈ ಭಾರಿ ಜಿಂಬಾಬ್ವೆ ಪ್ರವಾಸ ಬಹು ಒತ್ತಡದಿಂದ ಕೂಡಿರುತ್ತದೆ. ವಿರಾಟ್ ಕೊಹ್ಲಿ ಶತಕಗಳಿಸಿ ಪುನಃ ಫಾರ್ಮ್ ಗೆ ಮರಳಲಿದ್ದಾರೆ ಎಂದು ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.