ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಭಾರತೀಯ ಆಟಗಾರರು ಹೊರ ದೇಶದ ಲೀಗ್ ನಲ್ಲಿ ಆಟವಾಡಬಾರದು ಎನ್ನುವ ಬಿಸಿಸಿಐ ನಿಯಮದ ಬಗ್ಗೆ ಮಾತನಾಡಿದ ಆಸ್ಟ್ರೇಲಿಯಾ ಲೆಜೆಂಡ್ ಗ್ರಿಲ್ ಕ್ರಿಸ್ಟ್ ಹೇಳಿದ್ದೇನು ಗೊತ್ತೆ??

307

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇಡೀ ಕ್ರಿಕೆಟ್ ಜಗತ್ತಿನಲ್ಲಿಯೇ ಅತ್ಯಂತ ಶ್ರೀಮಂತ ಕ್ರಿಕೆಟ್ ಅಲ್ಲಿ ನಮ್ಮ ಹೆಮ್ಮೆಯ ಐಪಿಎಲ್ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಇಂದು ನಮ್ಮ ಭಾರತೀಯ ಕ್ರಿಕೆಟ್ ಬೋರ್ಡ್ ಅಂದರೆ ಬಿಸಿಸಿಐ ಇಡೀ ವಿಶ್ವದಲ್ಲಿ ಅತ್ಯಂತ ಶ್ರೀಮಂತ ಸಂಸ್ಥೆ ಆಗಿದೆ ಎಂದರೆ ಅದಕ್ಕೆ ಪ್ರಮುಖ ಕಾರಣ ಐಪಿಎಲ್ ನಿಂದ ಹರಿದು ಬರುವ ಆದಾಯ ಎಂಬುದನ್ನು ನಾವು ನೆನಪಿಟ್ಟುಕೊಳ್ಳಬೇಕು. ಅಷ್ಟರಮಟ್ಟಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಎನ್ನುವುದು ಮನಿ ಮೇಕಿಂಗ್ ಲೀಗ್ ಆಗಿದೆ. ಆದರೆ ನಿಮಗೊಂದು ವಿಚಾರ ತಿಳಿದಿರಲಿ ಗೆಳೆಯರೇ ಕೇವಲ ನಮ್ಮ ಭಾರತದಲ್ಲಿ ಮಾತ್ರವಲ್ಲದೆ ಬೇರೆ ದೇಶಗಳಲ್ಲಿ ಕೂಡ ಕ್ರಿಕೆಟ್ ಲೀಗ್ ನಡೆಯುತ್ತದೆ.

ಉದಾಹರಣೆಗೆ ಆಸ್ಟ್ರೇಲಿಯಾದಲ್ಲಿ ಸೌತ್ ಆಫ್ರಿಕಾದಲ್ಲಿ ವೆಸ್ಟ್ ಇಂಡೀಸ್ ನಲ್ಲಿ ಬಾಂಗ್ಲಾದೇಶದಲ್ಲಿ ಹಾಗೂ ಪಾಕಿಸ್ತಾನದಲ್ಲಿ ಕೂಡ ನಡೆಯುತ್ತದೆ. ಆದರೆ ಐಪಿಎಲ್ ಹುಟ್ಟು ಹಾಕಿರುವ ಕ್ರೇಜ್ ಹಾಗೂ ಐಪಿಎಲ್ ಗೆ ಇರುವ ಜನಪ್ರಿಯತೆ ಎನ್ನುವುದು ಬೇರೆ ಯಾವ ಲೀಗ್ ಗಳಲ್ಲಿಯೂ ಕೂಡ ಕಂಡು ಬರುವುದಿಲ್ಲ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಬೇರೆ ಲೀಗ್ ಗಳಲ್ಲಿ ಭಾರತೀಯ ಕ್ರಿಕೆಟ್ ಆಟಗಾರರು ನಿಮಗೆ ಕಾಣಿಸಿಕೊಳ್ಳುವುದಿಲ್ಲ. ಇದರ ಕುರಿತಂತೆ ಮೊದಲ ಬಾರಿಗೆ ಆಸ್ಟ್ರೇಲಿಯಾ ಮೂಲದ ಮಾಜಿ ಆಟಗಾರ ಆಗಿರುವ ಆಡಂ ಗಿಲ್ ಕ್ರಿಸ್ಟ್ ರವರು ಮಾತನಾಡಿದ್ದಾರೆ. ಹೌದು ಗೆಳೆಯರೇ, ಬಿಸಿಸಿಐ ಭಾರತೀಯ ಕ್ರಿಕೆಟ್ ಆಟಗಾರರನ್ನು ವಿದೇಶಿ ಕ್ರಿಕೆಟ್ ಲೀಗ್ ಗಳಲ್ಲಿ ಆಟವಾಡಲು ಬಿಡದೆ ಇರುವ ಕುರಿತಂತೆ ಮಾತನಾಡಿದ್ದಾರೆ.

ನಾನು ಬಿಸಿಸಿಐ ಅನ್ನು ಹಾಗೂ ಐಪಿಎಲ್ ಅನ್ನು ಸಾಕಷ್ಟು ಗೌರವಿಸುತ್ತೇನೆ ಆದರೆ ಭಾರತೀಯ ಕ್ರಿಕೆಟ್ ಸಂಸ್ಥೆ ತನ್ನ ಆಟಗಾರರನ್ನು ಬೇರೆ ವಿದೇಶಿ ಲೀಗ್ ಗಳಲ್ಲಿ ಯಾಕೆ ಆಡಲು ಬಿಡುತ್ತಿಲ್ಲ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಒಂದು ವೇಳೆ ಬಿಸಿಸಿಐ ತನ್ನ ಆಟಗಾರರನ್ನು ಬೇರೆ ಕ್ರಿಕೆಟ್ ಲೀಗ್ ಗಳಲ್ಲಿ ಆಟವಾಡಲು ಬಿಟ್ಟರೆ ಕ್ರಿಕೆಟ್ ಎನ್ನುವುದು ಇನ್ನಷ್ಟು ವೇಗ ಗತಿಯಲ್ಲಿ ಬೆಳವಣಿಗೆ ಹೊಂದಲಿದೆ ಎಂಬುದಾಗಿ ಹೇಳಿದ್ದಾರೆ. ಒಟ್ಟಾರೆಯಾಗಿ ಕೊನೆಯಲ್ಲಿ ಆಡಂ ಗಿಲ್ ಕ್ರಿಸ್ಟ್ ಬಿಸಿಸಿಐ ಬೇರೆ ದೇಶದ ಕ್ರಿಕೆಟಿಗರಂತೆ ತನ್ನ ಕ್ರಿಕೆಟಿಗರನ್ನು ಕೂಡ ಬೇರೆ ಕ್ರಿಕೆಟ್ ಲೀಗ್ ಗಳಲ್ಲಿ ಆಡಲು ಅನುಮತಿ ನೀಡಬೇಕು ಎಂಬುದಾಗಿ ಹೇಳಿದ್ದಾರೆ. ಇವರ ಈ ಮಾತಿನ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ತಿಳಿಸಿ.