ಡೇಂಜರ್ ಜೋನ್ ನಲ್ಲಿ ರಾಹುಲ್: ಮುಗಿಯಿತೇ ರಾಹುಲ್ ವಿಶ್ವಕಪ್ ಕನಸು, ಮತ್ತೊಂದು ಎಡವಟ್ಟು. ಇಂಜುರಿ ಅಲ್ಲ, ಮತ್ತೇನಾಗಿದೆ ಗೊತ್ತೇ??
ಡೇಂಜರ್ ಜೋನ್ ನಲ್ಲಿ ರಾಹುಲ್: ಮುಗಿಯಿತೇ ರಾಹುಲ್ ವಿಶ್ವಕಪ್ ಕನಸು, ಮತ್ತೊಂದು ಎಡವಟ್ಟು. ಇಂಜುರಿ ಅಲ್ಲ, ಮತ್ತೇನಾಗಿದೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಕೆ.ಎಲ್.ರಾಹುಲ್ ಭಾರತ ಕ್ರಿಕೆಟ್ ತಂಡದ ಭರವಸೆಯ ಬ್ಯಾಟ್ಸಮನ್. ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನಂತರ ಭಾರತ ತಂಡದ ಭವಿಷ್ಯದ ನಾಯಕ ಯಾರು ಎಂದರೇ ಅದಕ್ಕೆ ಕೇಳಿ ಬರುತ್ತಿದ್ದ ಉತ್ತರ ಕೆ.ಎಲ್.ರಾಹುಲ್ ಎಂದು. ಐಪಿಎಲ್ ನಲ್ಲಿಯೂ ಸಹ ತಾವು ನೇತೃತ್ವ ವಹಿಸಿದ ತಂಡದ ಪರ ಆಡಿ, ಏಕಾಂಗಿಯಾಗಿ ಹಲವಾರು ಭಾರಿ ಪಂದ್ಯಗಳನ್ನು ಗೆಲ್ಲಿಸಿ ಮ್ಯಾಚ್ ವಿನ್ನರ್ ಆಗಿದ್ದಾರೆ. ಸದ್ಯ ಭಾರತ ತಂಡದ ಉಪನಾಯಕರಾಗಿದ್ದಾರೆ. ಆದರೇ ಕೆ.ಎಲ್.ರಾಹುಲ್ ಕಳೆದ ಎರಡು ವರ್ಷಗಳಿಂದ ಪದೇ ಪದೇ ಗಾಯದ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಹೀಗಾಗಿ ರಾಹುಲ್ ಹಲವಾರು ಮಹತ್ವದ ಸರಣಿಗಳಲ್ಲಿ ಆಡುವುದನ್ನು ಮಿಸ್ ಮಾಡಿಕೊಂಡಿದ್ದಾರೆ.
ಎರಡು ತಿಂಗಳ ಹಿಂದೆ ಐಪಿಎಲ್ ಮುಗಿದ ನಂತರ ಭಾರತ ತಂಡ ದಕ್ಷಿಣ ಆಫ್ರಿಕಾದ ವಿರುದ್ಧ ಆಡಿದ ಟಿ 20 ಸರಣಿಯನ್ನು ರಾಹುಲ್ ಗಾಯದ ಕಾರಣಕ್ಕೆ ಮಿಸ್ ಮಾಡಿಕೊಂಡರು. ಆ ನಂತರ ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಮತ್ತು ಏಕದಿನ ಹಾಗೂ ಟಿ 20 ಸರಣಿಗಳನ್ನು ಶಸ್ತ್ರ ಚಿಕಿತ್ಸೆ ಕಾರಣ ಮಿಸ್ ಮಾಡಿಕೊಂಡರು.ಈಗ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ರಾಹುಲ್ ರನ್ನು ಆಯ್ಕೆ ಮಾಡಲಾಗಿತ್ತು. ಆದರೇ ಕೊನೆ ಕ್ಷಣದಲ್ಲಿ ಕೋರೋನಾ ಆದ ಕಾರಣ ರಾಹುಲ್ ತಂಡದ ಬಯೋ ಬಬಲ್ ಸಹ ಪ್ರವೇಶಿಸಲು ಆಗಲಿಲ್ಲ. ಹೀಗಾಗಿ ವೆಸ್ಟ್ಇಂಡೀಸ್ ಪ್ರವಾಸದಿಂದ ಕೆ.ಎಲ್.ರಾಹುಲ್ ಬಹುತೇಕ ಔಟ್ ಎಂಬ ಮಾತು ಕೇಳಿ ಬರುತ್ತಿದೆ.
ಮುಂದಿನ ತಿಂಗಳು ಜಿಂಬಾಬ್ವೆ ವಿರುದ್ಧ ನಡೆಯುವ ಸರಣಿ ವೇಳೆ ಕೆ.ಎಲ್ ರಾಹುಲ್ ಫಿಟ್ ಆಗದಿದ್ದರೇ, ರಾಹುಲ್ ಭವಿಷ್ಯದ ಮೇಲೆ ದೊಡ್ಡ ಪರಿಣಾಮ ಬೀಳುವ ಸಾಧ್ಯತೆ ಇದೆ. ಏಕೆಂದರೇ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಟಿ 20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಅದಕ್ಕೂ ಮುಂಚೆ ಏಷ್ಯಾ ಕಪ್ ಸಹ ನಡೆಯಲಿದೆ. ಈ ಎರಡು ಸರಣಿಗೂ ಮುನ್ನ ರಾಹುಲ್ ಸಕ್ರೀಯ ಕ್ರಿಕೆಟ್ ಗೆ ಆಗಮಿಸಿ ತನ್ನ ಫಾರ್ಮ್ ಖಚಿತಪಡಿಸಿಕೊಳ್ಳಬೇಕು. ಹಾಗಾದಾಗ ಮಾತ್ರ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಇಲ್ಲವಾದಲ್ಲಿ ಈಗಾಗಲೇ ರಾಹುಲ್ ಬದಲು ತಂಡದಲ್ಲಿ ಸ್ಥಾನ ಪಡೆದಿರುವ ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಶುಭಮಾನ್ ಗಿಲ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇದರಲ್ಲಿ ವಿಕೇಟ್ ಕೀಪರ್ ಬ್ಯಾಟ್ಸಮನ್ ಆಗಿರುವ ಇಶಾನ್ ಕಿಶನ್ ರೋಹಿತ್ ಶರ್ಮಾ ಜೊತೆ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಹೀಗಾಗಿ ಸದ್ಯ ಕೆ.ಎಲ್.ರಾಹುಲ್ ವೃತ್ತಿ ಜೀವನ ಅಪಾಯದಲ್ಲಿದೆ ಎಂದು ಹೇಳಬಹುದು. ರಾಹುಲ್ ಭವಿಷ್ಯದ ದಿನಗಳಲ್ಲಿ ಬಹಳ ಎಚ್ಚರಿಕೆಯಿಂದ ಆಟವಾಡಬೇಕು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.