ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಜಿಂಬಾಬ್ವೆ ತಂಡದ ವಿರುದ್ಧ ಸರಣಿಯಲ್ಲಿ ಒಂದು ವೇಳೆ ವಿಫಲವಾದ್ರೆ ಮೂವರು ಶಾಶ್ವತವಾಗಿ ಹೊರಹೋಗುವುದು ಖಚಿತ. ಯಾರ್ಯಾರು ಗೊತ್ತೇ??

251

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಇಂಗ್ಲೆಂಡ್ ವಿರುದ್ಧದ ಸರಣಿಯ ನಂತರ ಭಾರತೀಯ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ವೆಸ್ಟ್ ಇಂಡೀಸ್ ಸರಣಿಯ ನಂತರ ಭಾರತೀಯ ಯುವ ತಂಡ ಜಿಂಬಾಬ್ವೆ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಯನ್ನು ಆಗಸ್ಟ್ 18 ರಿಂದ ಆಡಲಿದೆ. ಇನ್ನು ಈ ಸರಣಿಯಲ್ಲಿ ಅತ್ಯುತ್ತಮವಾಗಿ ಆಡದಿದ್ದರೆ ತಂಡದಿಂದ ಮೂರು ಸ್ಟಾರ್ ಆಟಗಾರರಿಗೆ ಗೇಟ್ ಪಾಸ್ ಸಿಗುವ ಸಾಧ್ಯತೆ ಹೆಚ್ಚಾಗಿದೆ. ಹಾಗಿದ್ದರೆ ಆ 3 ಸಂಭಾವ್ಯ ಆಟಗಾರರು ಯಾರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಮೊದಲಿಗೆ ಶಿಖರ್ ಧವನ್.

ವೆಸ್ಟ್ ಇಂಡೀಸ್ ಸರಣಿಯಲ್ಲಿ ಕೂಡ ಆಡುವ ಶಿಖರ್ ಧವನ್ ರವರು ನಂತರ ಜಿಂಬಾಬ್ವೆ ಸರಣಿಯಲ್ಲಿ ಕೂಡ ಆಡಲಿದ್ದಾರೆ. ಒಂದು ವೇಳೆ ಇದರಲ್ಲಿ ವಿಫಲರಾದರೆ ಅವರ ತಂಡದಿಂದ ಹೊರ ಆಗುವ ಸಾಧ್ಯತೆಯಿದೆ ಯಾಕೆಂದರೆ ಈಗಾಗಲೇ ಭಾರತೀಯ ಕ್ರಿಕೆಟ್ ತಂಡಕ್ಕೆ ಆರಂಭಿಕ ಆಟಗಾರರ ಆಯ್ಕೆಯಲ್ಲಿ ಮೊದಲ ಆಯ್ಕೆಯಾಗಿ ಕೆ ಎಲ್ ರಾಹುಲ್ ನಂತರ ಋತುರಾಜ ಗಾಯಕ್ವಾಡ್ ಹಾಗೂ ಇಶಾನ್ ಕಿಶನ್ ಕೂಡ ಇದ್ದಾರೆ. ಇಂತಹ ಸ್ಪರ್ಧೆಯ ನಡುವೆ ಶಿಖರ್ ಧವನ್ ಅವರು ಅತ್ಯುತ್ತಮ ಪ್ರದರ್ಶನವನ್ನು ನೀಡಲೇಬೇಕಾದ ಒತ್ತಡದಲ್ಲಿದ್ದಾರೆ.

ಎರಡನೆಯದಾಗಿ ಶ್ರೇಯಸ್ ಐಯ್ಯರ್. ಹೌದು ಗೆಳೆಯರೇ ಶ್ರೇಯಸ್ ಅಯ್ಯರ್ ಅವರು ಇತ್ತೀಚಿನ ದಿನಗಳಲ್ಲಿ ನೀಡಿರುವ ಅವಕಾಶ ವನ್ನು ಸದುಪಯೋಗಪಡಿಸಿಕೊಳ್ಳುವ ಲ್ಲಿ ವಿಫಲರಾಗಿದ್ದಾರೆ. ಇಂಗ್ಲೆಂಡ್ ಸರಣಿಯಲ್ಲಿ ಕೂಡ ವಿರಾಟ್ ಕೊಹ್ಲಿ ಅವರ ಬದಲಿಗೆ ಅವಕಾಶ ಸಿಕ್ಕಿದ್ದರೂ ಅತ್ಯುತ್ತಮವಾಗಿ ಆಡಲು ವಿಫಲ ರಾಗಿದ್ದರು. ಹೀಗಾಗಿ ಜಿಂಬಾಬ್ವೆ ಸರಣಿ ಕೂಡ ಅವರ ಪಾಲಿಗೆ ಪ್ರಾಮುಖ್ಯತೆಯನ್ನು ವಹಿಸಿದೆ.

ಮೂರನೇದಾಗಿ ಅಕ್ಷರ್ ಪಟೇಲ್. ಸದ್ಯದ ಮಟ್ಟಿಗೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಆಲ್ರೌಂಡರ್ ವಿಭಾಗದಲ್ಲಿ ರವೀಂದ್ರ ಜಡೇಜಾ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ ಹೀಗಾಗಿ ಈ ವಿಭಾಗದಲ್ಲಿ ಅವರ ಬ್ಯಾಕಪ್ ಆಗಿರುವ ಅಕ್ಷರ ಪಟೇಲ್ ರವರು ಪ್ರಸ್ತಕ ವರ್ಷದಲ್ಲಿ ಕಳಪೆ ಪ್ರದರ್ಶನವನ್ನು ಮುಂದುವರಿಸಿರುವ ಕಾರಣದಿಂದಾಗಿ ನಿಜಕ್ಕೂ ಕೂಡ ಅವರ ಸ್ಥಾನ ಡೋಲಾಯಮಾನವಾಗಿದೆ. ಹೀಗಾಗಿ ಈ ಮೂರು ಆಟಗಾರರ ಭವಿಷ್ಯ ಜಿಂಬಾಬ್ವೆ ಸರಣಿಯಲ್ಲಿ ಇದೆ ಎಂದರೆ ತಪ್ಪಾಗಲ್ಲ.

Get real time updates directly on you device, subscribe now.