ನಮಸ್ಕಾರ ಸ್ನೇಹಿತರೆ ಸದ್ಯದ ಮಟ್ಟಿಗೆ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ರಿಲಯನ್ಸ್ ಒಡೆತನದ ಜಿಯೋ ಸಂಸ್ಥೆ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ ಎಂದರೆ ತಪ್ಪಾಗಲಾರದು. ಯಾಕೆಂದರೆ ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಅತ್ಯಂತ ಉತ್ತಮ ಲಾಭವನ್ನು ನೀಡುವಂತಹ ಯೋಜನೆಯನ್ನು ಪರಿಚಯಿಸುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಅದರಲ್ಲೂ ಇಂದಿನ ಲೇಖನಿಯಲ್ಲಿ ನಾವು ದಿನಕ್ಕೆ 2.5 ಜಿಬಿ ಇಂಟರ್ನೆಟ್ ಡೇಟಾವನ್ನು ನೀಡುವಂತಹ ಅತ್ಯುತ್ತಮ ಗುಣಮಟ್ಟದ ಯೋಜನೆಯನ್ನು ಪರಿಚಯಿಸಲು ಹೊರಟಿದ್ದೇವೆ.
ಹೌದು ನಾವು ಮಾತನಾಡುತ್ತಿರುವುದು 2999 ರೂಪಾಯಿಗಳ ಯೋಜನೆ ಕುರಿತಂತೆ. ಹಾಗಿದ್ದರೆ ಈ ಯೋಜನೆಯ ಎಲ್ಲಾ ವಿವರಣೆಗಳನ್ನು ಸಂಪೂರ್ಣ ವಿವರವಾಗಿ ನೋಡೋಣ ಬನ್ನಿ. ಮೊದಲಿಗೆ ಇದರ ವ್ಯಾಲಿಡಿಟಿ ಕುರಿತಂತೆ ಮಾತನಾಡುವುದಾದರೆ 365 ದಿನಗಳ ಅಂದರೆ ಒಂದು ವರ್ಷದ ವ್ಯಾಲಿಡಿಟಿ ಇರುತ್ತದೆ. ಪ್ರತಿದಿನ 2.5 ಜಿಬಿ ಇಂಟರ್ನೆಟ್ ವ್ಯಾಲಿಡಿಟಿ ಮುಗಿಯುವ ತನಕ ಪ್ರತಿದಿನ ದೊರೆಯುತ್ತದೆ. ಅನ್ಲಿಮಿಟೆಡ್ ಫೋನ್ ಕಾಲ್ ಗಳು ಹಾಗೂ ದೈನಂದಿನ 100 ಉಚಿತ ಎಸ್ಎಂಎಸ್ ಗಳು ಕೂಡ ಸಿಗುತ್ತದೆ. ವಾರ್ಷಿಕ ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಕೂಡ ಇದರಲ್ಲಿ ಉಚಿತವಾಗಿ ಚಂದಾದಾರರಿಗೆ ದೊರೆಯಲಿದೆ.
ತಿಂಗಳ ಲೆಕ್ಕಾಚಾರದಲ್ಲಿ ನೋಡುವುದಾದರೆ ಇದು ವಾರ್ಷಿಕವಾಗಿ ಅತ್ಯಂತ ಕಡಿಮೆಯಲ್ಲಿ ಅತ್ಯುನ್ನತ ಸೇವೆಗಳನ್ನು ನೀಡುವ ಅಗ್ಗದ ಬೆಲೆಯ ಯೋಜನೆಯಾಗಿದೆ ಎಂದರೆ ತಪ್ಪಾಗಲಾರದು. Rs.499 ಮೌಲ್ಯದ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನಿಮಗೆ ಈ ಪ್ಯಾಕೇಜ್ನಲ್ಲಿ ಉಚಿತವಾಗಿ ದೊರೆತಿರುವುದು ನಿಜಕ್ಕೂ ಕೂಡ ಸಂತೋಷಕರ ವಿಚಾರ. ಕೇವಲ ಇಷ್ಟು ಮಾತ್ರವಲ್ಲದೆ ಜಿಯೋ ಸಂಸ್ಥೆಯ ಹಲವಾರು ಡಿಜಿಟಲ್ ಅಪ್ಲಿಕೇಶನ್ಗಳ ಉಚಿತ ಚಂದಾದಾರಿಕೆ ಉಚಿತವಾಗಿ ವರ್ಷಗಳ ಕಾಲ ದೊರೆಯಲಿದೆ. ಒಂದು ವೇಳೆ ನೀವು ಕೂಡ ಜಿಯೋ ಗ್ರಾಹಕರಾಗಿದ್ದರೆ ತಪ್ಪದೇ ಈ ರಿಚಾರ್ಜ್ ಪ್ಲಾನ್ ಅನ್ನು ಉಪಯೋಗಿಸಿ.