ವಿರಾಟ್ ಕೊಹ್ಲಿ ಗೆ ಮತ್ತೊಂದು ಆಫರ್: ಫಾರ್ಮ್ ಕಂಡು ಕೊಳ್ಳಲು ಸುಲಭದ ಹಾದಿ ನೀಡಿದ ಬಿಸಿಸಿಐ. ಇಲ್ಲಾದ್ರೂ ಕಿಂಗ್ ಆಗ್ತಾರಾ ಕೊಹ್ಲಿ??

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ಭಾರತೀಯ ಕ್ರಿಕೆಟ್ ತಂಡ ಆಂಗ್ಲರ ನೆಲದಲ್ಲಿ ಟಿ-ಟ್ವೆಂಟಿ ಹಾಗೂ ಏಕದಿನ ಸರಣಿಯನ್ನು ಗೆದ್ದುಕೊಂಡು ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ನಡೆಯಲಿರುವ ವಿಶ್ವಕಪ್ ಗೆ ಅತ್ಯುತ್ತಮ ತಯಾರಿಯನ್ನು ಮಾಡಿಕೊಂಡಂತಿದೆ ಎಂದು ಹೇಳಬಹುದಾಗಿದೆ. ಆದರೆ ವಿಶೇಷವಾಗಿ ವಿರಾಟ್ ಕೊಹ್ಲಿ ರವರು ಹಲವಾರು ದಿನಗಳಿಂದ ಕಳಪೆ ಫಾರ್ಮ್ ನಲ್ಲಿ ಇದ್ದರು. ಇವೆರಡು ಸರಣಿಗಳಲ್ಲಿ ಅವರನ್ನು ಆಡಿಸಿದರು ಕೂಡ ಸಿಕ್ಕಂತಹ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವ ಹಾಗೂ ತಮ್ಮ ಅಸಲಿ ಫಾರ್ಮಿಗೆ ಮರಳು ಅಲ್ಲಿ ವಿರಾಟ್ ಕೊಹ್ಲಿ ಅವರು ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎಂದು ಹೇಳಬಹುದಾಗಿದೆ.

ವಿರಾಟ್ ಕೊಹ್ಲಿ ರವರ ಫಾರ್ಮ್ ತಂಡಕ್ಕೆ ತುಂಬಾನೇ ಚಿಂತೆ ಯಾಗಿದ್ದು ವಿಶ್ವಕಪ್ ಗೂ ಮುನ್ನ ಭಾರತೀಯ ಕ್ರಿಕೆಟ್ ತಂಡ ವಿಶ್ವಕಪ್ ಅನ್ನು ಆಡಲಿದೆ. ಇನ್ನು ವಿರಾಟ್ ಕೊಹ್ಲಿ ರವರಿಗೆ ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಇಂದ ವಿಶ್ರಾಂತಿ ನೀಡಲಾಗಿದೆ. ಇನ್ನು ಕೇಳಿಬರುತ್ತಿರುವ ಮಾಹಿತಿಗಳ ಪ್ರಕಾರ ಏಷ್ಯಾಕಪ್ ನಲ್ಲಿ ಆಡುವ ತಂಡವೇ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ ಟ್ವೆಂಟಿ ವಿಶ್ವಕಪ್ ಆಡಳಿದೆ ಎಂಬುದಾಗಿ ಕೇಳಿಬಂದಿದೆ. ಹೀಗಾಗಿ ಇದಕ್ಕೂ ಮುನ್ನವೇ ವಿರಾಟ್ ಕೊಹ್ಲಿ ರವರಿಗೆ ಒಂದು ಕೊನೆಯ ಅವಕಾಶ ವನ್ನು ನೀಡಲು ಬಿಸಿಸಿಐ ನಿರ್ಧರಿಸಿದೆ ಎಂದು ಹೇಳಬಹುದಾಗಿದೆ.

ಹೌದು ಗೆಳೆಯರೆ ವೆಸ್ಟ್ ಇಂಡೀಸ್ ಶರಣ್ಯ ನಂತರ ಭಾರತೀಯ ಕ್ರಿಕೆಟ್ ತಂಡ ಅಂದರೆ ಹಿರಿಯ ಆಟಗಾರರಲ್ಲ ಬದಲಾಗಿ ಮೀಸಲು ಆಟಗಾರರ ತಂಡ ಆಗಸ್ಟ್ 18ರಿಂದ ಜಿಂಬಾಬ್ವೆ ವಿರುದ್ಧ ಮೂರು ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ. ಇದರಲ್ಲಿ ವಿರಾಟ್ ಕೊಹ್ಲಿಗೆ ರವರಿಗೆ ಅವಕಾಶ ನೀಡಲಾಗಿದೆ. ಇದರಲ್ಲಿ ಉತ್ತಮ ಪ್ರದರ್ಶನ ತೋರಿ ಪಡಿಸಿದರೆ ಅವರಿಗೆ ಏಷ್ಯಾಕಪ್ ನಲ್ಲಿ ಆಯ್ಕೆ ಮಾಡಲು ಯಾವುದೇ ಅಪಸ್ವರಗಳು ಮೂಡಿಬರುವುದಿಲ್ಲ ಎಂಬುದು ಬಿಸಿಸಿಐ ಆಲೋಚನೆ. ಭಾರತೀಯ ಕ್ರಿಕೆಟ್ ತಂಡಕ್ಕೆ ಹೋಲಿಸಿದರೆ ಕಳಪೆ ತಂಡವಾಗಿರುವ ಜಿಂಬಾಬ್ವೆ ವಿರುದ್ಧ ವಿರಾಟ್ ಕೊಹ್ಲಿ ಅವರು ಅತ್ಯುತ್ತಮ ಪ್ರದರ್ಶನವನ್ನು ನೀಡಲೇಬೇಕಾಗಿದೆ. ಸಿಕ್ಕಿರುವ ಅವಕಾಶವನ್ನು ಕಿಂಗ್ ಕೊಹ್ಲಿ ಯಾವ ರೀತಿ ಸದುಪಯೋಗ ಪಡಿಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.