ಕಡಿಮೆ ಬೆಲೆ ಭರ್ಜರಿ ಆಫರ್ ನೀಡಿದ ಜಿಯೋ: ಪ್ರತಿ ನಿತ್ಯ 3 ಜಿಬಿ ಡೇಟಾ ಪಡೆಯಲು ನೀವು ಏನು ಮಾಡಬೇಕು ಗೊತ್ತೇ??

ನಮಸ್ಕಾರ ಸ್ನೇಹಿತರೆ ಕಡಿಮೆ ಬೆಲೆಯಲ್ಲಿ ಅತ್ಯಂತ ಅತ್ಯುತ್ತಮ ಆಫರ್ ಗಳನ್ನು ನೀಡುವ ಟೆಲಿಕಾಂ ಸಂಸ್ಥೆಗಳಲ್ಲಿ ಜಿಯೋ ಸಂಸ್ಥೆ ನಂಬರ್1 ಸಂಸ್ಥೆ ಆಗಿದೆ ಎಂದರೆ ತಪ್ಪಾಗಲಾರದು. ಇದಕ್ಕಾಗಿ ಇಂದು ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಜಿಯೋ ಸಂಸ್ಥೆ ಮೊದಲ ಸ್ಥಾನದಲ್ಲಿ ಮಿಂಚುತ್ತಿದೆ. ಅದರಲ್ಲೂ ಇಂದು ನಾವು ಜಿಯೋ ಸಂಸ್ಥೆ ಪರಿಚಯಿಸಿರುವ ದೈನಂದಿನ 3gb ಇಂಟರ್ನೆಟ್ ಡೇಟಾ ನೀಡುವ ರಿಚಾರ್ಜ್ ಪ್ಲಾನ್ ಕುರಿತಂತೆ ಹೇಳಲು ಹೊರಟಿದ್ದೇವೆ.

ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರ ನಡುವೆ ಇಂಟರ್ನೆಟ್ ಬಳಕೆ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ ಇದಕ್ಕಾಗಿ ದೈನಂದಿನ ಇಂಟರ್ನೆಟ್ ನಲ್ಲಿ ಕೊಡ ಅವರಿಗೆ ಹೆಚ್ಚಿನ ಇಂಟರ್ನೆಟ್ ಬೇಕಾಗುತ್ತದೆ. ಇದಕ್ಕಾಗಿಯೇ ಜಿಯೋ ಸಂಸ್ಥೆ ಪರಿಚಯಿಸಿರುವ 3gb ಇಂಟರ್ನೆಟ್ ಡೇಟಾ ರಿಚಾರ್ಜ್ ಪ್ಲಾನ್ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಇದು ನಿಜಕ್ಕೂ ಹೇಳುವುದಾದರೆ ರೂಪಾಯಿ 500 ಗಿಂತಲೂ ಕಡಿಮೆ ಬೆಲೆಯಲ್ಲಿ ಸಿಗುತ್ತದೆ. ಹೌದು ಗೆಳೆಯರೇ ನಾವು ಈಗ ಹೇಳಲು ಹೊರಟಿರುವ 3gb ಇಂಟರ್ನೆಟ್ ಡೇಟ ರಿಚಾರ್ಜ್ ಪ್ಲಾನ್ ಕೇವಲ ಪ್ರತಿ ತಿಂಗಳಿಗೆ 419 ರೂಪಾಯಿಗಳಂತೆ ಸಿಗುತ್ತಿದೆ.

ದೈನಂದಿನ 3gb ಡೇಟಾ ಹಾಗೂ ಅನಿಯಮಿತ ಕರೆಗಳು ಮತ್ತು ಮೆಸೇಜ್ ಗಳನ್ನು ಮಾಡುವ ಸೌಲಭ್ಯವನ್ನು ಕೂಡ ಗ್ರಾಹಕರು ಪಡೆದುಕೊಳ್ಳಲಿದ್ದಾರೆ. 28 ದಿನಗಳ ವ್ಯಾಲಿಡಿಟಿ ಯನ್ನು ಹೊಂದಿರುವ ಈ ರಿಚಾರ್ಜ್ ಪ್ಲಾನ್ ನಲ್ಲಿ ಒಟ್ಟಾರೆಯಾಗಿ ನೀವು 84 ಜಿಬಿ ಇಂಟರ್ನೆಟ್ ಡೇಟಾವನ್ನು ಮುಗಿಯುವುದರೊಳಗೆ ಪಡೆಯಬಹುದಾಗಿದೆ. ಜಿಯೋ ಅಪ್ಲಿಕೇಶನ್ ಗಳಿಗೆ ಉಚಿತ ಚಂದಾದಾರಿಕೆ ಕೂಡ ಸಿಗಲಿದೆ. ಜಿಯೋ ಸಿನಿಮಾ ಅಪ್ಲಿಕೇಶನ್ಗೆ ಕೂಡ ಉಚಿತ ಚಂದಾದಾರಿಕೆ ಸಿಗಲಿದ್ದು ಮನೋರಂಜನೆಯ ಪ್ರಿಯರಿಗೆ ಇದೊಂದು ಅತ್ಯುತ್ತಮ ಆಫರ್ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.