ಮೂರು ಆಟಗಾರರ ಬೆನ್ನುಬಿದ್ದ ಆಯ್ಕೆ ಸಮಿತಿ. ಈ ಮೂವರಿಗೆ ಇರುವುದು ನಿವೃತ್ತಿ ಆಯ್ಕೆ ಮಾತ್ರ. ಲಿಸ್ಟ್ ನಲ್ಲಿ ಯಾರೆಲ್ಲ ಇದ್ದಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ಭಾರತೀಯ ಕ್ರಿಕೆಟ್ ತಂಡವನ್ನು ಸರಿಯಾಗಿ ಗಮನಿಸಿದರೆ ಕಳೆದ ಒಂದು ವರ್ಷದಿಂದ ಸಾಕಷ್ಟು ಬದಲಾವಣೆಗಳನ್ನು ನಾವು ಕಂಡಿದ್ದೇವೆ. ಅದು ಆಟಗಾರರು ಅಥವಾ ನಾಯಕ ಇಲ್ಲವೇ ಕೋಚ್ ಆಗಿರಲಿ ಎಲ್ಲಾ ವಿಭಾಗದಲ್ಲಿ ಕೂಡ ಸಾಕಷ್ಟು ಬದಲಾವಣೆಗಳು ಕಂಡು ಬಂದಿದೆ. ಇದೇ ಬದಲಾವಣೆಯ ಅಂಚಿನಲ್ಲಿ ಮೂರು ಕ್ರಿಕೆಟಿಗರ ಭವಿಷ್ಯದ ಹಿಂದೆ ಆಯ್ಕೆಗಾರರು ಬಿದ್ದಿದ್ದು ಅವರು ಮುಂದಿನ ದಿನಗಳಲ್ಲಿ ಅತಿಶೀಘ್ರವಾಗಿ ನಿವೃತ್ತಿಯನ್ನು ನೀಡುವ ಅಥವಾ ತಂಡದಿಂದ ಶಾಶ್ವತವಾಗಿ ಹೊರ ಹೋಗುವ ಸಾಧ್ಯತೆ ಹೆಚ್ಚಾಗಿದೆ.

ಮೊದಲಿಗೆ ನಾವು ಮಾತನಾಡುವುದಾದರೆ ಅಜಿಂಕ್ಯ ರಹಾನೆ ಕಂಡುಬರುತ್ತಾರೆ. ಅಜಿಂಕ್ಯ ರಹಾನೆ ವಿದೇಶದಲ್ಲಿ ಸಾಕಷ್ಟು ಅತ್ಯುತ್ತಮ ಪ್ರದರ್ಶನವನ್ನು ಒಂದು ತಂಡದ ನಾಯಕನಾಗಿ ನೀಡಿದ್ದಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಆದರೆ ಪದೇ ಪದೇ ಅವರು ಹಿಂಜರಿಕೆ ಒಳಗಾಗುತ್ತಿರುವುದು ಹಾಗೂ ಅವರ ಬ್ಯಾಟಿಂಗ್ ನಿಂದ ಯಾವುದೇ ಮಹತ್ವದ ರನ್ನುಗಳು ಹರಿದು ಬರುತ್ತಿಲ್ಲ. ಸದ್ಯದ ಮಟ್ಟಿಗೆ ಅವರ ಸ್ಥಾನಕ್ಕೆ ರಿಪ್ಲೇಸ್ಮೆಂಟ್ ಆಗಿ ಶ್ರೇಯಸ್ ಅಯ್ಯರ್ ಹಾಗೂ ಹನುಮ ವಿಹಾರಿ ಕಾಣಿಸಿಕೊಳ್ಳುತ್ತಾರೆ.

ಎರಡನೆಯದಾಗಿ ವೃದ್ಧಿಮಾನ್ ಸಾಹಾ. ಪ್ರಮುಖವಾಗಿ ವೃದ್ದಿಮಾನ್ ಸಹ ನಮಗೆ ಕಂಡುಬರುತ್ತಿದ್ದು ಟೆಸ್ಟ್ ಕ್ರಿಕೆಟ್ ತಂಡದಲ್ಲಿ. ಆದರೆ ಸದ್ಯದ ಮಟ್ಟಿಗೆ ರಿಷಬ್ ಪಂತ್ ರವರು ಮೂರು ಫಾರ್ಮೇಟ್ ಗಳಲ್ಲಿ ತಂಡ ಸದಾಕಾಲ ನಂಬುವಂತಹ ಬ್ಯಾಟ್ಸ್ಮನ್ ಆಗಿ ವಿಕೆಟ್ ಕೀಪರ್ ಆಗಿ ಹಾಗೂ ಭವಿಷ್ಯದ ನಾಯಕರಾಗಿ ಕೂಡ ಬಿಂಬಿಸಲಾಗುತ್ತಿದ್ದು ಅವರು ಖಂಡಿತವಾಗಿ ವೃದ್ಧಿಮಾನ್ ಸಾಹಾ ರವರ ಸ್ಥಾನವನ್ನು ತಮ್ಮ ಪ್ರತಿಭೆಯ ಬಲದಿಂದ ಬಲವಂತವಾಗಿ ಪಡೆದುಕೊಳ್ಳಲಿದ್ದಾರೆ. ಯಾಕೆಂದರೆ ಈಗಾಗಲೇ ಅವರು ಹಲವಾರು ಪಂದ್ಯಗಳ ಮ್ಯಾಚ್ ವಿನ್ನರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಹಾಗೂ ಅವರ ವಯಸ್ಸು ಕೂಡ ಕಡಿಮೆ.

ಇನ್ನು ಕೊನೆಯದಾಗಿ ಇಶಾಂತ್ ಶರ್ಮ. ಕೇವಲ ಟೆಸ್ಟ್ ಸರಣಿ ಗಳಿಗೆ ಮಾತ್ರ ಸೀಮಿತರಾಗಿದ್ದ ಇಶಾಂತ್ ಶರ್ಮ ಮೊಹಮ್ಮದ್ ಸಿರಾಜ್ ಹಾಗೂ ಪ್ರಸಿದ್ಧ ಕೃಷ್ಣ ರವರ ಆಗಮನದ ನಂತರ ತಂಡದಿಂದ ಹೊರ ಹೋಗುವ ಭೀತಿಯನ್ನು ಎದುರಿಸುತ್ತಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಮುನ್ನೂರಕ್ಕೂ ಅಧಿಕ ವಿಕೆಟ್ಗಳನ್ನು ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಕಬಳಿಸಿರುವ ಇಶಾಂತ್ ಶರ್ಮ ಕೂಡ ಇದೇ ಲಿಸ್ಟಿಗೆ ಸೇರುತ್ತಿರುವುದು ಬೇಸರದ ವಿಚಾರ.

ಮೂರು