ಭಾರತ ತಂಡದಲ್ಲಿ ಆ ಒಬ್ಬ ಬೌಲರ್ ಇದ್ದಿದ್ದರೆ, ಕೊಹ್ಲಿ ಮೂರು ವಿಶ್ವಕಪ್ ಗೆದ್ದಿರುತ್ತಿದ್ದರು ಅಂತೇ. ಯಾರು ಅಂತೇ ಗೊತ್ತೇ??
ಭಾರತ ತಂಡದಲ್ಲಿ ಆ ಒಬ್ಬ ಬೌಲರ್ ಇದ್ದಿದ್ದರೆ, ಕೊಹ್ಲಿ ಮೂರು ವಿಶ್ವಕಪ್ ಗೆದ್ದಿರುತ್ತಿದ್ದರು ಅಂತೇ. ಯಾರು ಅಂತೇ ಗೊತ್ತೇ??
ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ 2007 ರಲ್ಲಿ ನಡೆದಿರುವ ಚೊಚ್ಚಲ ಟಿ-ಟ್ವೆಂಟಿ ವಿಶ್ವಕಪ್ ಅನ್ನು ಭಾರತೀಯ ಕ್ರಿಕೆಟ್ ತಂಡ ಮಹೇಂದ್ರ ಸಿಂಗ್ ಧೋನಿ ಅವರ ಚೊಚ್ಚಲ ವಿಶ್ವಕಪ್ ನಾಯಕತ್ವದಲ್ಲಿ ಗೆದ್ದಿತ್ತು. ಅದಾದ ನಂತರ ಮಹೇಂದ್ರ ಸಿಂಗ್ ಧೋನಿ ರವರ ನಾಯಕತ್ವದಲ್ಲಿ 2011 ರಲ್ಲಿ ಏಕದಿನ ವಿಶ್ವಕಪ್ ಅನ್ನು ಕೂಡ ಭಾರತೀಯ ಕ್ರಿಕೆಟ್ ತಂಡ ಗೆದ್ದುಕೊಂಡು ಇತಿಹಾಸ ನಿರ್ಮಿಸಿತ್ತು.
ಮಹೇಂದ್ರ ಸಿಂಗ್ ಧೋನಿ ರವರ ನಂತರ ನಾಯಕತ್ವದ ಚುಕ್ಕಾಣಿಯನ್ನು ಹಿಡಿದ ವಿರಾಟ್ ಕೊಹ್ಲಿ ಅವರು ಇದುವರೆಗೂ ಯಾವುದೇ ಪ್ರಮುಖ ಐಸಿಸಿ ಕಪ್ ಗಳನ್ನು ಗೆದ್ದಿಲ್ಲ. ಅದರಲ್ಲೂ ನಾಯಕತ್ವದಲ್ಲಿ ಸಂಪೂರ್ಣವಾಗಿ ವಿರಾಟ್ ಕೊಹ್ಲಿ ರವರು ವಿಫಲವಾಗಿದ್ದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ. ಹೀಗಾಗಿಯೇ ಕಳೆದ ಬಾರಿ ನಡೆದ ಟ್ವೆಂಟಿ ವಿಶ್ವಕಪ್ ನಂತರ ವಿರಾಟ್ ಕೊಹ್ಲಿ ರವರು ನಾಯಕತ್ವದ ಕೆಳಗಿಳಿದಿದ್ದರು. ಆದರೆ ಈಗ ಒಬ್ಬ ಭಾರತೀಯ ಕ್ರಿಕೆಟ್ ತಂಡದ ಬೌಲರ್ ನಾನು ಇದ್ದಿದ್ದರೆ ಖಂಡಿತವಾಗಿ ವಿರಾಟ್ ಕೊಹ್ಲಿ ಮೂರು ವಿಶ್ವಕಪ್ ಅನ್ನು ಗೆಲ್ಲುತ್ತಿದ್ದರು ಎಂಬುದಾಗಿ ಹೇಳಿದ್ದಾರೆ. ಆ ಬೌಲರ್ ಇನ್ಯಾರೂ ಅಲ್ಲ 2007 ರ ಟಿ-ಟ್ವೆಂಟಿ ವಿಶ್ವಕಪ್ ಗೆಲ್ಲಲು ಕಾರಣರಾದ ಹಾಗೂ 2011 ವಿಶ್ವಕಪ್ನಲ್ಲಿ ತಂಡದಲ್ಲಿ ಕಾಣಿಸಿಕೊಂಡಿದ್ದ ಪ್ರಸಿದ್ಧ ಬೌಲರ್ ಶ್ರೀಶಾಂತ್.
ಶ್ರೀಶಾಂತ್ ಪರವರು ಇದಾದನಂತರ ಐಪಿಎಲ್ ನಲ್ಲಿ ನಡೆದ ಫಿಕ್ಸಿಂಗ್ ಪ್ರಕರಣದಲ್ಲಿ ಆರೋಪಿಯಾಗಿ ಕಾಣಿಸಿಕೊಂಡು ನಿಷೇಧವನ್ನು ಕೂಡ ಪಡೆದುಕೊಂಡಿದ್ದರು. ನಂತರ ಇವರ ಮೇಲಿನ ನಿಷೇಧವನ್ನು ತೆರವುಗೊಳಿಸಿದ್ದನ್ನು ಕೂಡ ನಾವು ಕಂಡಿರುವುದೇ. ನಾನಿದ್ದಿದ್ದರೆ ವಿರಾಟ್ ಕೊಹ್ಲಿ ರವರಿಗೆ 3 ವಿಶ್ವಕಪ್ಪನ್ನು ಗೆಲ್ಲಿಸಿ ಕೊಡುತ್ತಿದ್ದೆ ಎಂಬುದಾಗಿ ಹೇಳಿದ್ದಾರೆ. ನನಗೆ ಯಾರ್ಕರ್ ಸೇರಿ ಎಲ್ಲಾ ವೈವಿಧ್ಯಮಯ ಬೌಲಿಂಗ್ ಟ್ರಿಕ್ ಗಳು ಕೂಡ ವಿಶೇಷವಾಗಿ ಪ್ರಾಕ್ಟಿಸ್ ಮಾಡಿ ಕಲಿತುಕೊಂಡಿದ್ದೇನೆ ಎಂಬುದಾಗಿ ಹೇಳಿದ್ದಾರೆ. ಶ್ರೀಶಾಂತ್ ರವರ ಈ ಹೇಳಿಕೆ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.