ಕನ್ನಡತಿಯಿಂದ ಅಮ್ಮಮ್ಮ ಅಲ್ಲ, ಮತ್ತೊಬ್ಬರು ಈ ಬಾರಿಯ ಬಿಗ್ ಬಾಸ್ ಗೆ ಫಿಕ್ಸ್: ಯಾರು ಗೊತ್ತೇ??

ಕನ್ನಡತಿಯಿಂದ ಅಮ್ಮಮ್ಮ ಅಲ್ಲ, ಮತ್ತೊಬ್ಬರು ಈ ಬಾರಿಯ ಬಿಗ್ ಬಾಸ್ ಗೆ ಫಿಕ್ಸ್: ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೆ ಕೊನೆಗೂ ಕೂಡ ಕನ್ನಡ ಕಿರುತೆರೆ ಅತ್ಯಂತ ಶ್ರೀಮಂತ ಹಾಗೂ ದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಅತಿಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂಬ ಅಧಿಕೃತ ಸುಳಿವು ಸಿಕ್ಕಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಡೆಸಿಕೊಡುವ ಈ ಕಾರ್ಯಕ್ರಮದಲ್ಲಿ ಈ ಬಾರಿ ಯಾರೆಲ್ಲ ಪಾಲ್ಗೊಳ್ಳಲಿದ್ದಾರೆ ಎಂಬುದಾಗಿ ಪ್ರತಿಯೊಬ್ಬರಲ್ಲೂ ಕೂಡ ಕುತೂಹಲ ಮನೆಮಾಡಿದೆ. ಇನ್ನು ಈ ಬಾರಿಯ ಬಿಗ್ ಬಾಸ್ ಗೆ ಕಲರ್ಸ್ ಕನ್ನಡ ವಾಹಿನಿಯ ಪ್ರಖ್ಯಾತ ಧಾರವಾಹಿಯ ಕಲಾವಿದರೊಬ್ಬರು ಆಯ್ಕೆಯಾಗಿದ್ದಾರೆ ಎಂಬುದಾಗಿ ಸುದ್ದಿ ಕೇಳಿಬಂದಿತ್ತು. ಹೌದು ಗೆಳೆಯರೇ ನಾವು ಮಾತನಾಡುತ್ತಿರುವುದು ಕಲರ್ಸ್ ಕನ್ನಡ ವಾಹಿನಿಯ ಟಾಪ್ ಧಾರವಾಹಿಗಳಲ್ಲಿ ಒಂದಾಗಿರುವ ಕನ್ನಡತಿ ಧಾರಾವಾಹಿ ಕುರಿತಂತೆ.

ಈ ಧಾರವಾಹಿಯಲ್ಲಿ ರತ್ನಮಾಲ ಪಾತ್ರಧಾರಿ ಅಮೆರಿಕಕ್ಕೆ ಹೋಗುವ ಸನ್ನಿವೇಶ ಈಗ ಪ್ರಸಾರ ಆಗುತ್ತಿದ್ದು ಅದನ್ನು ನಿರ್ವಹಿಸಿರುವ ಚಿತ್ಕಲಾ ಬಿರಾದಾರ್ ಧಾರವಾಹಿ ಯಿಂದ ಹೊರಬಂದಿದ್ದಾರೆ ಹೀಗಾಗಿ ಅವರು ಬಿಗ್ ಬಾಸ್ ಗೆ ಕಾಲಿಡುತ್ತಾರೆ ಎಂಬುದಾಗಿ ಎಲ್ಲರೂ ಭಾವಿಸಿದ್ದರು. ಆದರೆ ಅದೇ ಸಂದರ್ಭದಲ್ಲಿ ಹರ್ಷನ ಸಹೋದರ ಆದಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಕ್ಷಿತ್ ಕೂಡ ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ.

ತಾನು ವೈಯಕ್ತಿಕ ಕಾರಣಗಳಿಂದಾಗಿ ಧಾರವಾಹಿಯಿಂದ ಹೊರಬಂದಿದ್ದೇನೆ ನನಗೆ ಈ ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು ಅತಿ ಶೀಘ್ರದಲ್ಲೇ ಮತ್ತೆ ಮರಳಿ ಬರುತ್ತೇನೆ ಎಂಬುದಾಗಿ ರಕ್ಷಿತ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಎಲ್ಲರೂ ಕೂಡ ರಕ್ಷಿತ್ ಬಾರಿ ಪ್ರಸಾರ ಕಾಣುವ ಬಿಗ್ ಬಾಸ್ ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬುದಾಗಿ ಎಲ್ಲರೂ ಕಾಮೆಂಟ್ ಮಾಡಿದ್ದಾರೆ. ಅಧಿಕೃತ ಮಾಹಿತಿಗಾಗಿ ಕಲರ್ಸ್ ಕನ್ನಡ ವಾಹಿನಿಯ ಪ್ರಕಟಣೆಯನ್ನು ಕಾಯ್ದು ನೋಡಬೇಕಾಗಿದೆ. ಈ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.