ಭಾರತ ತಂಡದಲ್ಲಿ ಫಾರ್ಮ್ ಕಳೆದುಕೊಂಡಿರುವ ವಿರಾಟ್ ರವರ ಸ್ಥಾನ ತುಂಬಲು ಮೂವರ ನಡುವೆ ಪೈಪೋಟಿ. ನಿಮ್ಮ ಪ್ರಕಾರ ಇವರಲ್ಲಿ ಯಾರು ತುಂಬಬಹುದು??
ಭಾರತ ತಂಡದಲ್ಲಿ ಫಾರ್ಮ್ ಕಳೆದುಕೊಂಡಿರುವ ವಿರಾಟ್ ರವರ ಸ್ಥಾನ ತುಂಬಲು ಮೂವರ ನಡುವೆ ಪೈಪೋಟಿ. ನಿಮ್ಮ ಪ್ರಕಾರ ಇವರಲ್ಲಿ ಯಾರು ತುಂಬಬಹುದು??
ನಮಸ್ಕಾರ ಸ್ನೇಹಿತರೆ ಒಂದು ಕಾಲದಲ್ಲಿ ಭಾರತೀಯ ಕ್ರಿಕೆಟ್ ತಂಡದ ಅತ್ಯುನ್ನತ ಹಾಗೂ ಸರ್ವ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದ ವಿರಾಟ್ ಕೊಹ್ಲಿ ರವರು ಸದ್ಯದ ಮಟ್ಟಿಗೆ ಅತ್ಯಂತ ಕಳಪೆ ಫಾರ್ಮ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್ ಆಗಿರಲಿ ಅಥವಾ ಐಪಿಎಲ್ನಲ್ಲಿ ಆಗಲಿ ಎಲ್ಲೂ ಕೂಡ ವಿರಾಟ್ ಕೊಹ್ಲಿ ಅವರು ತಂಡಕ್ಕೆ ಬೇಕಾಗಿರುವ ಪ್ರದರ್ಶನವನ್ನು ನೀಡುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ನಡೆದಿರುವ ಎಲ್ಲಾ ಸರಣಿಗಳಲ್ಲಿ ಕೂಡ ವಿರಾಟ್ ಕೊಹ್ಲಿ ಅವರು ಕಳಪೆ ಪ್ರದರ್ಶನ ನೀಡುತ್ತಿದ್ದರು ಕೂಡ ತಂಡದಲ್ಲಿ ಅವರಿಗೆ ಸ್ಥಾನವನ್ನು ನೀಡಲಾಗಿತ್ತು.
ಆದರೆ ಸಿಕ್ಕಿರುವ ಎಲ್ಲಾ ಅವಕಾಶಗಳನ್ನು ಕೂಡ ವಿರಾಟ್ ಕೊಹ್ಲಿ ರವರು ವ್ಯರ್ಥ ಆಗುವಂತೆ ಮಾಡಿದ್ದಾರೆ. ಅತಿಶೀಘ್ರದಲ್ಲೇ ಏಷ್ಯಾಕಪ್ ಹಾಗೂ ವಿಶ್ವಕಪ್ ಕೂಡ ಪ್ರಾರಂಭವಾಗಲಿದ್ದು ಅದಕ್ಕಾಗಿ ವಿರಾಟ್ ಕೊಹ್ಲಿ ಅವರು ತಂಡಕ್ಕೆ ಆಯ್ಕೆ ಆಗುವುದು ಸಂಪೂರ್ಣ ಅನುಮಾನವಾಗಿದೆ. ಹಾಗಿದ್ದರೆ ಮುಂದಿನ ದಿನಗಳಲ್ಲಿ ವಿರಾಟ್ ಕೊಹ್ಲಿ ರವರ ಸ್ಥಾನವನ್ನು ತುಂಬಬಲ್ಲ ಆಟಗಾರರು ಯಾರೆಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಹೌದು ಗೆಳೆಯರೆ ವೆಸ್ಟ್ ಇಂಡೀಸ್ ಸರಣಿಗೆ ವಿರಾಟ್ ಕೊಹ್ಲಿ ರವರು ತಂಡದಿಂದ ಹೊರಗುಳಿದಿದ್ದು ಅವರ ಮೂರನೇ ಕ್ರಮಾಂಕಕ್ಕಾಗಿ ಮೊದಲನೇ ಆಯ್ಕೆಯಾಗಿ ಸೂರ್ಯಕುಮಾರ್ ಯಾದವ್ ಕಾಣಿಸಿಕೊಳ್ಳುತ್ತಾರೆ. ಈಗಾಗಲೇ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಸೂರ್ಯ ಕುಮಾರ್ ಯಾದವ್ ಆಡಿರುವ ಪರಿ ನೋಡಿದರೆ ಇದಕ್ಕೆ ಯಾವುದೇ ಅನುಮಾನವಿಲ್ಲ.
ಎರಡನೆಯದಾಗಿ ದೀಪಕ್ ಹೂಡ. ಸಿಕ್ಕ ಅವಕಾಶದಲ್ಲಿ ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಶತಕವನ್ನು ಬಾರಿಸಿ ಭಾರತೀಯ ಕ್ರಿಕೆಟ್ ತಂಡದ ನೆರವಿಗೆ ಧಾವಿಸಿದ್ದರು. ಇವರು ಕೂಡ ಮೂರನೇ ಕ್ರಮಾಂಕಕ್ಕೆ ಹೇಳಿಮಾಡಿಸಿದ ಆಟಗಾರ ಎಂದರೆ ತಪ್ಪಾಗಲಾರದು. ಕೊನೆಯದಾಗಿ ಶುಭಮನ್ ಗಿಲ್. ಯುವ ಆಟಗಾರ ಫ್ಯೂಚರ್ ಸ್ಟಾರ್ ಆಟಗಾರ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದು ವಿರಾಟ್ ಕೊಹ್ಲಿ ಅವರ ಸ್ಥಾನವನ್ನು ಮೂರನೇ ಕ್ರಮಾಂಕದಲ್ಲಿ ತುಂಬಲು ಅತ್ಯುತ್ತಮ ಆಯ್ಕೆಯಾಗಿದ್ದಾರೆ. ಈ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.