ವಿಶ್ವಕಪ್ ಗೆ ಹಲವು ದಿನಗಳು ಇರುವಾಗಲೇ ಬಹುತೇಕ ಟಿ 20 ವಿಶ್ವಕಪ್ ತಂಡದಲ್ಲಿ ಸ್ಥಾನ ಕಳೆದುಕೊಂಡ ಟಾಪ್ 5 ಆಟಗಾರರು ಯಾರು ಗೊತ್ತೇ??
ವಿಶ್ವಕಪ್ ಗೆ ಹಲವು ದಿನಗಳು ಇರುವಾಗಲೇ ಬಹುತೇಕ ಟಿ 20 ವಿಶ್ವಕಪ್ ತಂಡದಲ್ಲಿ ಸ್ಥಾನ ಕಳೆದುಕೊಂಡ ಟಾಪ್ 5 ಆಟಗಾರರು ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಟಿ 20 ವಿಶ್ವಕಪ್ ಇದೇ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಈ ಭಾರಿ ಶತಾಯಗತಾಯ ಗೆಲ್ಲಲೇಬೇಕೆಂದು ನಿರ್ಧರಿಸಿರುವ ಬಿಸಿಸಿಐ ಕೋಚ್ ರಾಹುಲ್ ದ್ರಾವಿಡ್ ರವರಿಗೆ ಖಡಕ್ ತಂಡವನ್ನು ರಚಿಸಲು ಆದೇಶಿಸಿದೆ. ಫಾರ್ಮ್ ನಲ್ಲಿರುವ ಆಟಗಾರರು ಮಾತ್ರ ತಂಡದ ಅಂತಿಮ ಹದಿನೈದರೊಳಗೆ ಸ್ಥಾನ ಪಡೆಯುವ ಸಾಧ್ಯತೆ ಇದೆ. ಸದ್ಯ ಟಿ 20 ತಂಡ ಘೋಷಣೆಯಾದರೇ, ತಂಡದಿಂದ ಕೋಕ್ ಪಡೆಯುವ ಐವರು ಆಟಗಾರರು ಯಾರು ಎಂಬುದನ್ನು ತಿಳಿಯೋಣ ಬನ್ನಿ.
1.ವಿರಾಟ್ ಕೊಹ್ಲಿ – ದಶಕಗಳ ಕಾಲ ಕಿಂಗ್ ಕೊಹ್ಲಿಯಾಗಿ ಮೆರೆದಿದ್ದ ವಿರಾಟ್ ಕೊಹ್ಲಿ ನಾಯಕತ್ವದಿಂದ ಇಳಿದ ಮೇಲೆ ಅವರ ಬ್ಯಾಟ್ ಸಂಪೂರ್ಣವಾಗಿ ರನ್ ಗಳಿಸುವುದನ್ನು ನಿಲ್ಲಿಸಿದೆ. ಹಾಗಾಗಿ ಸದ್ಯ ವಿರಾಟ್ ಕೊಹ್ಲಿ ಗೆ ತಂಡದಿಂದ ವಿಶ್ರಾಂತಿ ನೀಡಿ ಅವರ ಬದಲಿಗೆ ಇನ್ ಫಾರ್ಮ್ ಆಟಗಾರರಾದ ದೀಪಕ್ ಹೂಡಾ, ಸೂರ್ಯ ಕುಮಾರ್ ಯಾದವ್ ಸ್ಥಾನ ಪಡೆಯಬಹುದು. 2.ಶ್ರೇಯಸ್ ಅಯ್ಯರ್ – ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಆದ ಶ್ರೇಯಸ್ ಅಯ್ಯರ್ ಬ್ಯಾಟ್ ಸಹ ರನ್ ಗಳಿಸುತ್ತಿಲ್ಲ. ಶಾರ್ಟ್ ಬಾಲ್ ಗಳನ್ನು ಎದುರಿಸುವಲ್ಲಿ ತಿಣುಕಾಡುತ್ತಿದ್ದಾರೆ. ಹೀಗಾಗಿ ಟಿ 20 ವಿಶ್ವಕಪ್ ಗೆ ಶ್ರೇಯಸ್ ಅಯ್ಯರ್ ಗೆ ಬಾಗಿಲು ಸಂಪೂರ್ಣ ಮುಚ್ಚಿದಂತೆ. 3.ಅಕ್ಷರ್ ಪಟೇಲ್ – ಏಡಗೈ ಸ್ಪಿನ್ನರ್ ಹಾಗೂ ಆಲ್ ರೌಂಡರ್ ಆಗಿರುವ ರವೀಂದ್ರ ಜಡೇಜಾ ಅವರು ಆಯ್ಕೆಗೆ ಲಭ್ಯವಿಲ್ಲದಾಗ ಮಾತ್ರ ತಂಡಕ್ಕೆ ಆಯ್ಕೆಯಾಗುತ್ತಾರೆ. ರವೀಂದ್ರ ಜಡೇಜಾ ಟಿ 20 ಕ್ರಿಕೆಟ್ ಗೆ ಫಿಟ್ ಆಗಿರುವ ಅಕ್ಷರ್ ಪಟೇಲ್ ಗೆ ಸ್ಥಾನ ಸಿಗುವುದು ಅನುಮಾನ.
4.ರುತುರಾಜ್ ಗಾಯಕ್ವಾಡ್ – ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸಮನ್ ಗಳಾಗಿ ರೋಹಿತ್ ಶರ್ಮಾ, ಕೆ.ಎಲ್,ರಾಹುಲ್ ಇದ್ದಾರೆ. ಮೀಸಲು ಆರಂಭಿಕರಾಗಿ ವಿಕೇಟ್ ಕೀಪರ್ ಬ್ಯಾಟ್ಸಮನ್ ಇಶಾನ್ ಕಿಶನ್ ಇದ್ದಾರೆ. ಹೀಗಾಗಿ ಆರಂಭಿಕ ಬ್ಯಾಟ್ಸ್ ಮನ್ ಆದ ರುತುರಾಜ್ ಗಾಯಕ್ವಾಡ್ ಗೆ ಟಿ 20 ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗುವುದು ಅನುಮಾನ. 5.ಉಮ್ರಾನ್ ಮಲೀಕ್ – ಅತ್ಯಂತ ವೇಗದ ಎಸೆತಗಳಿಂದ ಫೇಮಸ್ ಆಗಿರುವ ಉಮ್ರಾನ್ ಮಲೀಕ್ ಟಿ 20 ಕ್ರಿಕೆಟ್ ನಲ್ಲಿ ಅತ್ಯಂತ ದುಬಾರಿಯಾಗಿದ್ದಾರೆ. ಹೀಗಾಗಿ ಅವರು ಟಿ 20 ವಿಶ್ವಕಪ್ ತಂಡಕ್ಕೆ ಆಯ್ಕೆಯಾಗುವುದು ಅನುಮಾನ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.