ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಅಗತ್ಯವಿಲ್ಲದೆ ವಿಶ್ರಾಂತಿ ನೀಡುತ್ತಿರುವ ಬಗ್ಗೆ ಕಿಡಿ ಕಾರಿದ ಆಕಾಶ್ ಚೋಪ್ರಾ: ವೆಸ್ಟ್ ಇಂಡೀಸ್ ವಿರುದ್ಧ ಆತ ಇರಲೇ ಬೇಕಿತ್ತು ಎಂದು ಹೇಳಿದ್ದು ಯಾರಿಗೆ ಗೊತ್ತೇ??

118

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಮುಗಿದ ನಂತರ ಇಂಗ್ಲೆಂಡ್ ನಿಂದ ಸೀದಾ ವೆಸ್ಟ್ ಇಂಡೀಸ್ ಗೆ ತೆರಳಲಿದೆ. ಅಲ್ಲಿ ಕೆರಿಬಿಯನ್ ದೊರೆಗಳ ವಿರುದ್ಧ ಐದು ಟಿ 20 ಪಂದ್ಯಗಳು ಹಾಗೂ ಮೂರು ಏಕದಿನ ಪಂದ್ಯಗಳ ಸರಣಿ ಆಡಲಿದೆ. ಈ ಸರಣಿಯಲ್ಲಿ ಟಿ 20 ತಂಡದ ನಾಯಕತ್ವವನ್ನು ರೋಹಿತ್ ಶರ್ಮಾ ನಿರ್ವಹಿಸಿದರೇ, ಏಕದಿನ ಸರಣಿಯಲ್ಲಿ ತಂಡದ ನಾಯಕತ್ವವನ್ನು ಶಿಖರ್ ಧವನ್ ನಿರ್ವಹಿಸಲಿದ್ದಾರೆ.

ಆದರೇ ಈ ಮಹತ್ವದ ಸರಣಿಗೆ ವಿರಾಟ್ ಕೊಹ್ಲಿ, ಜಸಪ್ರಿತ್ ಬುಮ್ರಾ ಹಾಗೂ ಲೆಗ್ ಸ್ಪಿನ್ನರ್ ಯುಜವೇಂದ್ರ ಚಾಹಲ್ ಗೆ ವಿಶ್ರಾಂತಿ ನೀಡಲಾಗಿದೆ. ಈ ಬಗ್ಗೆ ಭಾರತ ತಂಡದ ಮಾಜಿ ಆಟಗಾರ ಹಾಗೂ ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ತಮ್ಮ ಯೂ ಟ್ಯೂಬ್ ಚಾನೆಲ್ ನಲ್ಲಿ ಕಿಡಿಕಾರಿದ್ದು ಚಾಹಲ್ ಗೆ ಯಾವ ಕಾರಣಕ್ಕೆ ವಿಶ್ರಾಂತಿ ನೀಡಿದ್ದಿರಿ ಎಂದು ಪ್ರಶ್ನಿಸಿದ್ದಾರೆ. ಯುಜವೇಂದ್ರ ಚಾಹಲ್ ವಿಶ್ರಾಂತಿ ಬಯಸುವುದಿಲ್ಲ. ಅವರು ಭಾರತ ತಂಡಕ್ಕೆ ವಿಕೇಟ್ ಟೇಕಿಂಗ್ ಬೌಲರ್ ಆಗಿದ್ದಾರೆ. ಅವರಿಗೆ ನೀವು ಒಂದು ಪಂದ್ಯ ಆಡಿಸಿದರೇ ಮತ್ತೊಂದು ಪಂದ್ಯ ಆಡಿಸುವುದಿಲ್ಲ ಇದು ತಪ್ಪು.

ಅವರಿಗೆ ಹೆಚ್ಚು ಅವಕಾಶ ನೀಡಿದಾಗ ಮಾತ್ರ ಅವರುಗಳು ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಮತ್ತಷ್ಟು ಪರಿಪಕ್ವಗೊಳ್ಳುತ್ತಾರೆ. ಅದನ್ನು ನೀವು ಈ ರೀತಿ ವಿಶ್ರಾಂತಿ ನೀಡುತ್ತಾ ಹೋದರೇ ಅದು ಆಟಗಾರರ ಮೇಲೆ ನಕಾರಾತ್ಮಕ ಪರಿಣಾಮ ಭೀರಿ ಪ್ರದರ್ಶನ ಕಳಪೆಯಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ವೆಸ್ಟ್ ಇಂಡೀಸ್ ಸರಣಿಗೆ ಸ್ಪಿನ್ನರ್ ಗಳಾಗಿ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯಿ ಹಾಗೂ ಚೈನಾಮನ್ ಸ್ಪಿನ್ ಬೌಲರ್ ಕುಲದೀಪ್ ಯಾದವ್ ಸ್ಥಾನ ಪಡೆದಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.