ವಿಕೆಟ್ ತೆಗೆದು ಪಂದ್ಯಗೆಲ್ಲಿಸಿಟ್ಟಿರುವ ಎಲ್ಲಾ ರಹಸ್ಯ ಬಿಚ್ಚಿಟ್ಟ ಹಾರ್ಧಿಕ್ ಪಾಂಡ್ಯ: ತಾನು ವಿಕೆಟ್ ಪಡೆಯುವುದು ಹೇಗೆ ಎಂದು ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇಂಗ್ಲೆಂಡ್ ವಿರುದ್ಧದ ಕೊನೆಯ ಏಕದಿನ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ತಂಡ ಕೊನೆಗೂ ಏಕದಿನ ಸರಣಿಯಲ್ಲಿ ಜಯಗಳಿಸಿದೆ. ಈ ಮೂಲಕ ಸರಣಿಯನ್ನು 2-1 ರಿಂದ ವಶಪಡಿಸಿಕೊಂಡಿದೆ. ಎಂದಿನಂತೆ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಇಂಗ್ಲೆಂಡ್ ಒಂದು ಹಂತದಲ್ಲಿ 300ಕ್ಕೂ ಅಧಿಕ ರನ್ ಗಳಿಸಿ ಭಾರತವನ್ನು ಗೆಲುವಿನಿಂದ ದೂರ ಇಡುತ್ತದೆ ಎಂದು ಊಹಿಸಲಾಗಿತ್ತು. ಆದರೇ ಭಾರತದ ಬೌಲರ್ ಗಳ ಕರಾರುವಕ್ಕು ದಾಳಿಯಿಂದ ಇನ್ನು ಐದು ಓವರ್ ಬಾಕಿ ಇರುವ ಮೊದಲೇ 259 ರನ್ ಗಳಿಗೆ ಆಲೌಟ್ ಆಯಿತು.

ಭಾರತದ ಪರ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ನಾಲ್ಕು ವಿಕೇಟ್, ಮಹಮದ್ ಸಿರಾಜ್ ಎರಡು ವಿಕೇಟ್ ಹಾಗೂ ಯುಜವೇಂದ್ರ ಚಾಹಲ್ ಮೂರು ವಿಕೇಟ್ ಮತ್ತು ರವೀಂದ್ರ ಜಡೇಜಾ ಒಂದು ವಿಕೇಟ್ ಪಡೆದರು. ಅದರಲ್ಲಿಯೂ ಹಾರ್ದಿಕ್ ಪಾಂಡ್ಯ ಒಂದೇ ಓವರ್ ನಲ್ಲಿ ಎರೆಡೆರೆಡು ವಿಕೇಟ್ ಗಳನ್ನು ಎರಡು ಭಾರಿ ಕಬಳಿಸುವ ಮೂಲಕ ಇಂಗ್ಲೆಂಡ್ ತಂಡಕ್ಕೆ ದೊಡ್ಡ ಆಘಾತ ನೀಡಿದರು.
ಇನ್ನು ಬ್ಯಾಟಿಂಗ್ ನಲ್ಲಿ ಸಹ ಭಾರತ ತಂಡ ಒಂದು ಹಂತದಲ್ಲಿ 72 ರನ್ ಗಳಿಗೆ ನಾಲ್ಕು ವಿಕೇಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೇ ಐದನೇ ವಿಕೇಟ್ ಗೆ ಜೊತೆಯಾದ ಹಾರ್ದಿಕ್ ಪಾಂಡ್ಯ ಹಾಗೂ ರಿಷಭ್ ಪಂತ್ ಅದ್ಭುತ ಇನ್ನಿಂಗ್ಸ್ ಆಡಿ ಭಾರತವನ್ನು ಗೆಲುವಿನ ದಡ ಮುಟ್ಟಿಸಿದರು.

ರಿಷಭ್ ಪಂತ್ ತಮ್ಮ ಅಂತಾರಾಷ್ಟ್ರೀಯ ಏಕದಿನದ ಚೊಚ್ಚಲ ಶತಕ ಸಿಡಿಸಿದರು. ಇನ್ನು ಈ ನಡುವೆ ತಾವು ಹೇಗೆ ವಿಕೆಟ್ ಪಡೆದುಕೊಂಡೆ ಎಂಬ ರಹಸ್ಯವನ್ನು ಹಾರ್ದಿಕ್ ಪಾಂಡ್ಯ ಬಿಚ್ಚಿಟ್ಟಿದ್ದಾರೆ. ಇಂಗ್ಲೆಂಡ್ ಪಿಚ್ ಗಳಲ್ಲಿ ನನ್ನ ನೆಚ್ಚಿನ ಫುಲ್ ಲೆಂಗ್ತ್ ಬೌಲ್ ಮಾಡಲು ಯತ್ನಿಸಿದೆ. ಆದರೇ ಅದು ಇಲ್ಲಿ ವರ್ಕೌಟ್ ಆಗುವುದಿಲ್ಲ ಎಂದು ತಿಳಿದು ನನ್ನ ಲೆಂಗ್ತ್ ಬದಲಾಯಿಸಿಕೊಂಡೆ. ಫುಲ್ ಲೆಂಗ್ತ್ ಬದಲು ಶಾರ್ಟ್ ಪಿಚ್ ಬೌಲಿಂಗ್ ಮಾಡಿದೆ. ಅದು ನನಗೆ ಯಶಸ್ಸು ನೀಡಿತು ಎಂದು ಹೇಳಿದರು. ಹಾರ್ದಿಕ್ ಪಾಂಡ್ಯ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.