ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಒಂದು ಕಡೆ ಹೀನಾಯ ಸೋಲು ಮತ್ತೊಂದು ಕಡೆ ಭಾರತ ತಂಡಕ್ಕೆ ಮತ್ತೊಂದು ಶಾಕ್: ಭಾರತಕ್ಕೆ ಬಾರಿ ಹಿನ್ನೆಡೆ?? ಏನು ಗೊತ್ತೇ?

79

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ರೋಹಿತ್ ಶರ್ಮ ನಾಯಕತ್ವದ ಭಾರತೀಯ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯವನ್ನು 10 ವಿಕೆಟ್ ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿತು. ಆದರೆ ಅದೇ ಬಲಿಷ್ಠ ಭಾರತೀಯ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಬರೋಬ್ಬರಿ 100 ರನ್ನುಗಳ ಅಂತರದಿಂದ ಸೋತಿದೆ.

ಮೊದಲು ಬ್ಯಾಟಿಂಗ್ ಗೆ ಇಳಿದ ಇಂಗ್ಲೆಂಡ್ ತಂಡವನ್ನು ಭಾರತೀಯ ಬೌಲರ್ ಗಳು ಕೊಂಚಮಟ್ಟಿಗೆ ಕಟ್ಟಿಹಾಕಿದರು ಕೂಡ ಸಿಕ್ಕಿರುವ ಗುರಿಯನ್ನು ಭಾರತೀಯ ಬ್ಯಾಟ್ಸ್ಮನ್ಗಳು ತಲುಪಲು ಸಂಪೂರ್ಣವಾಗಿ ವಿಫಲರಾದರು. ಅದರಲ್ಲೂ ಭಾರತೀಯ ಕ್ರಿಕೆಟ್ ತಂಡದ ನಾಯಕ ಆಗಿರುವ ರೋಹಿತ್ ಶರ್ಮಾ ಹಾಗೂ ವಿಕೆಟ್ ಕೀಪರ್ ರಿಷಬ್ ಪಂತ್ ಇಬ್ಬರೂ ಕೂಡ ಶೂನ್ಯಕ್ಕೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರು. ಆದರೆ ಈ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಮುಂದಿನ ಪಂದ್ಯದಲ್ಲಿ ಶಾ’ಕ್ ಸಿಗುವಂತಹ ಘಟನೆಯೊಂದು ನಡೆದಿದೆ‌. ನಾಯಕ ರೋಹಿತ್ ಶರ್ಮಾ ಫೀಲ್ಡಿಂಗ್ ಮಾಡುವ ಸಂದರ್ಭದಲ್ಲಿ ಬೌಲ್ ಬೌನ್ಸ್ ಆಗಿ ಅವರ ಮೊಣಕೈಗೆ ಬಡಿಯಿತು. ಇದರಿಂದಾಗಿ ಕೆಲ ಹೊತ್ತು ರೋಹಿತ್ ಶರ್ಮ ನೋ’ವಿನಿಂದ ಕೈಯನ್ನು ಹಿಡಿದು ಕೊಂಡಿದ್ದು ಕೂಡ ಕಂಡುಬಂದಿತು.

ಇದಾದ ಮೇಲೂ ಕೂಡ ಕ್ಷೇತ್ರರಕ್ಷಣೆ ಹಾಗೂ ಬ್ಯಾಟಿಂಗ್ನಲ್ಲಿ ಕೂಡ ರೋಹಿತ್ ಶರ್ಮಾ ಕಂಡುಬಂದಿದ್ದರು. ಈ ಇಂಜುರಿ ಅಷ್ಟೊಂದು ಗಂಭೀರವಾಗಿಲ್ಲ ಎಂಬುದಾಗಿ ಮೇಲ್ನೋಟಕ್ಕೆ ತಿಳಿದುಬಂದಿದೆ. ಒಂದು ವೇಳೆ ಇದು ಗಂಭೀರವಾಗಿದ್ದರೆ ಮುಂದಿನ ಪಂದ್ಯವನ್ನು ರಿಷಬ್ ಪಂತ್ ನಾಯಕನಾಗಿ ಮುನ್ನಡೆಸ ಬಹುದಾಗಿದೆ. ಎಲ್ಲಾ ಸಾಧ್ಯತೆಗಳಿಗೆ ಮುಂದಿನ ಪಂದ್ಯವೇ ಉತ್ತರವನ್ನು ನೀಡಲಿದೆ ಎಂದು ಹೇಳಬಹುದಾಗಿದೆ. ಕೊನೆಯ ಪಂದ್ಯವನ್ನು ಭಾರತೀಯ ಕ್ರಿಕೆಟ್ ತಂಡ ಗೆದ್ದು ಸರಣಿಯನ್ನು ಗೆಲ್ಲಬಹುದಾ ಎಂಬುದನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.

Get real time updates directly on you device, subscribe now.