ನಮಸ್ಕಾರ ಸ್ನೇಹಿತರೆ ನಿಮಗೆಲ್ಲ ಗೊತ್ತಿರುವ ಹಾಗೆ ಇಂಗ್ಲೆಂಡ್ ತಂಡ ರೋಹಿತ್ ಶರ್ಮಾ ಆಘಾತದ ಭಾರತೀಯ ಕ್ರಿಕೆಟ್ ತಂಡದ ಎದುರು ಏಕದಿನ ಸರಣಿಯನ್ನು ಸೋತಿದೆ. ಈ ಸರಣಿಯಲ್ಲಿ ಮತ್ತೊಂದು ಆ’ಘಾತ ಕೂಡ ಇಂಗ್ಲೆಂಡ್ ತಂಡಕ್ಕೆ ಸಿಕ್ಕಿದೆ. ಹೌದು ಇಂಗ್ಲೆಂಡ್ ಕ್ರಿಕೆಟ್ ತಂಡ ಕಂಡಂತಹ ಸರ್ವಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ಬೆನ್ ಸ್ಟೋಕ್ಸ್ ಏಕದಿನ ಕ್ರಿಕೆಟ್ ನಿಂದ ನಿವೃತ್ತಿಯನ್ನು ಹೊಂದಲಿದ್ದಾರೆ.
ಭಾರತ ಕ್ರಿಕೆಟ್ ತಂಡದ ವಿರುದ್ಧ ಕೊನೆಯ ಏಕದಿನ ಬಂದಿದ್ದಲ್ಲಿ ಕೂಡ ಅವರಿಗೆ ಹೆಚ್ಚಿನದೇನೂ ಮಾಡಲು ಸಾಧ್ಯವಾಗಲಿಲ್ಲ. ಇನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯ ಅವರ ಕೊನೆಯ ಏಕದಿನ ಪಂದ್ಯ ಆಗಿರಲಿದೆ. ಏನೇ ಆಗಲಿ ಬೆನ್ ಸ್ಟೋಕ್ಸ್ ರವರ ಈ ನಿರ್ಧಾರ ಎನ್ನುವುದು ಪ್ರತಿಯೊಬ್ಬರಿಗೂ ಕೂಡ ಆಶ್ಚರ್ಯವನ್ನು ತಂದಿತ್ತು. ಇದಕ್ಕೆ ಕಾರಣ ನೀಡುತ್ತಾ ಬೆನ್ ಸ್ಟೋಕ್ಸ್ ಅವರು ನಾನು 3 ಫಾರ್ಮೆಟ್ ಗಳ ಕ್ರಿಕೆಟ್ಗೆ ಇನ್ನು ಮುಂದೆ ಸಿದ್ದನಾಗಿಲ್ಲ ಎಂಬುದಾಗಿ ಹೇಳಿಕೆ ನೀಡಿದ್ದಾರೆ. 2019 ರ ವರ್ಲ್ಡ್ ಕಪ್ ವಿನ್ನರ್ ಆಟಗಾರನಾಗಿ ಬೆನ್ ಸ್ಟೋಕ್ಸ್ ಕಾಣಿಸಿಕೊಂಡಿದ್ದರು. ಇದೇ ಓಲ್ಡ್ ಕಪ್ಪನ್ನು ಹಿಡಿದುಕೊಂಡಿರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ತಮ್ಮ ಅಧಿಕೃತ ನಿವೃತ್ತಿಯ ಗೋಷಣೆ ಯನ್ನು ಏಕದಿನ ಕ್ರಿಕೆಟ್ ನಿಂದ ಮಾಡಿದ್ದಾರೆ.
ಈ ಫೋಟೋ ಕೆಳಗೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಆಗಿರುವ ವಿರಾಟ್ ಕೊಹ್ಲಿ ರವರು ಕೂಡ ಕಾಮೆಂಟ್ ಮಾಡಿದ್ದಾರೆ.
ಏಕದಿನ ಕ್ರಿಕೆಟ್ನಲ್ಲಿ ಕಂಡಂತಹ ಅತ್ಯಂತ ಸ್ಪರ್ಧಾತ್ಮಕ ಆಟಗಾರ ನೀವು ಎನ್ನುವುದಾಗಿ ವಿರಾಟ್ ಕೊಹ್ಲಿ ರವರು ಕಾಮೆಂಟ್ ಮಾಡಿದ್ದಾರೆ. ಒಟ್ಟಾರೆಯಾಗಿ ಇಂಗ್ಲೆಂಡ್ ತಂಡ ಏಕದಿನ ಕ್ರಿಕೆಟ್ ಕಂಡಂತಹ ಅತ್ಯಂತ ನುರಿತ ಆಟಗಾರರಲ್ಲಿ ಒಬ್ಬರಾಗಿರುವ ಬೆನ್ ಸ್ಟೋಕ್ಸ್ ರವರ ನಿವೃತ್ತಿಯನ್ನು ವುದು ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ ನಲ್ಲಿ ಇಂಗ್ಲೆಂಡ್ ತಂಡಕ್ಕೆ ಹಿನ್ನಡೆ ನೀಡಿದರೂ ಕೂಡ ನೀಡಬಹುದು ಎಂಬುದಾಗಿ ನೆಟ್ಟಿಗರು ಮಾತನಾಡಿಕೊಂಡಿದ್ದಾರೆ.