ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಭಾರತ ತಂಡಕ್ಕೆ ಗ್ರಿಲ್ ಕ್ರಿಸ್ಟ್ ಸಿಕ್ಕಿದ್ದಾನೆ, ಆ ಸಮರ್ಥ ಆತನಿಗಿದೆ ಎಂದ ಎಂದ ಸುನಿಲ್ ಗವಾಸ್ಕರ್: ಯಾರಂತೆ ಗೊತ್ತೇ?

ಭಾರತ ತಂಡಕ್ಕೆ ಗ್ರಿಲ್ ಕ್ರಿಸ್ಟ್ ಸಿಕ್ಕಿದ್ದಾನೆ, ಆ ಸಮರ್ಥ ಆತನಿಗಿದೆ ಎಂದ ಎಂದ ಸುನಿಲ್ ಗವಾಸ್ಕರ್: ಯಾರಂತೆ ಗೊತ್ತೇ?

4,298

ನಮಸ್ಕಾರ ಸ್ನೇಹಿತರೆ ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ಸೋತಿರಬಹುದು ಆದರೆ ಈ ಪಂದ್ಯದಲ್ಲಿ ಎಲ್ಲರೂ ಮನ ಸೋಲುವಂತೆ ತಮ್ಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿಸಿರುವ ರಿಷಬ್ ಪಂತ್ ರವರ ಸಾಧನೆಯನ್ನು ನಾವು ಮೆಚ್ಚಲೇಬೇಕು. ಹೌದು ಗೆಳೆಯರೇ ಭಾರತ ಆರಂಭಿಕ ಆಟಗಾರರನ್ನು ಅತ್ಯಂತ ವೇಗವಾಗಿ ಕಳೆದುಕೊಂಡಾಗ ತಂಡಕ್ಕೆ ಆಧಾರವಾಗಿ ನಿಂತವರು ರಿಷಬ್ ಪಂತ್. ರಿಷಬ್ ಪಂತ್ ರವರ ಕುರಿತಂತೆ ಮಾಜಿ ಕ್ರಿಕೆಟಿಗ ಆಗಿರುವ ಸುನಿಲ್ ಗಾವಸ್ಕರ್ ರವರು ಹೊಗಳಿಕೆಯ ಸುರಿಮಳೆಯನ್ನೇ ಸುರಿಸಿದ್ದಾರೆ.

Follow us on Google News

ಸುನಿಲ್ ಗಾವಸ್ಕರ್ ರವರು ರಿಷಬ್ ಪಂತ್ ರವರ ಬ್ಯಾಟಿಂಗ್ ಕುರಿತಂತೆ ಗುಣಗಾನ ಮಾಡುತ್ತಾ ಅವರನ್ನು ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ಆಗಿರುವ ಆಡಮ್ ಗಿಲ್ ಕ್ರಿಸ್ಟ್ ರವರಿಗೆ ಹೋಲಿಸಿದ್ದಾರೆ. ಹೌದು ಗೆಳೆಯರೇ ಆಡಂ ಗಿಲ್ ಕ್ರಿಸ್ಟ್ ರವರು ಮೊದಲಿಗೆ ಆರು ಹಾಗೂ 7ನೇ ಕ್ರಮಾಂಕದಲ್ಲಿ ಅವರ ತಂಡದ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದರು ಆದರೆ ಹೆಚ್ಚಿನ ಕೊಡುಗೆಯನ್ನು ತಂಡಕ್ಕಾಗಿ ನೀಡಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ನಂತರ ಆರಂಭಿಕ ಆಟಗಾರನಾಗಿ ಆಯ್ಕೆಯಾದ ಮೇಲೆ ಅವರು ತಂಡದ ಪರವಾಗಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ಮಾಡಿ ದಾಖಲೆಯನ್ನು ನಿರ್ಮಿಸಿದ್ದಾರೆ. ಅದೇ ರೀತಿ ರಿಷಬ್ ಪಂತ್ ರವರನ್ನು ಮುಂದಿನ ವೈಟ್ ಬಾಲ್ ಸೀಮಿತ ಓವರ್ಗಳ ಪಂದ್ಯಗಳಲ್ಲಿ ಆರಂಭಿಕ ಆಟಗಾರನಾಗಿ ತಂಡ ಪ್ರಯತ್ನಿಸಬೇಕು ಎಂಬುದಾಗಿ ಹೇಳಿದ್ದಾರೆ.

ಒಂದು ವೇಳೆ ಈ ರೀತಿಯಲ್ಲಿ ರಿಷಬ್ ಪಂತ್ ರವರನ್ನು ಪ್ರಯತ್ನಿಸಿದ್ದೆ ಹೌದಾದರೆ ಖಂಡಿತವಾಗಿ ತಂಡದ ಪರವಾಗಿ ರಿಷಬ್ ಪಂತ್ ಅತ್ಯುತ್ತಮವಾದ ಬ್ಯಾಟಿಂಗ್ ಪ್ರದರ್ಶನವನ್ನು ನೀಡಲಿದ್ದಾರೆ ಹಾಗೂ ಇದು ವಿಶ್ವಕಪ್ ಗೆ ಪೂರ್ವತಯಾರಿಯಾಗಿ ಫಲಿಸಲಿದೆ ಎಂಬುದಾಗಿ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ರಿಷಬ್ ಪಂತ್ ರವರನ್ನು ಆರಂಭಿಕ ಆಟಗಾರನಾಗಿ ಆಯ್ಕೆ ಮಾಡಿರುವ ಸುನಿಲ್ ಗಾವಸ್ಕರ್ ಅವರ ನಿರ್ಧಾರದ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ತಪ್ಪದೇ ಗೊತ್ತುಪಡಿಸಿ.