ಮೊದಲು ನಟಿಯರ ಬಗ್ಗೆ, ಈಗ ನನ್ನ ಸಿನಿಮಾದಲ್ಲಿ ಆ ರೀತಿಯ ನಟರು ಬೇಡ, ರಾಜಮೌಳಿ ಗೆ ಮತ್ತೊಂದು ಕಂಡೀಶನ್ ಹಾಕಿದ ಮಹೇಶ್.

ಮೊದಲು ನಟಿಯರ ಬಗ್ಗೆ, ಈಗ ನನ್ನ ಸಿನಿಮಾದಲ್ಲಿ ಆ ರೀತಿಯ ನಟರು ಬೇಡ, ರಾಜಮೌಳಿ ಗೆ ಮತ್ತೊಂದು ಕಂಡೀಶನ್ ಹಾಕಿದ ಮಹೇಶ್.

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರಾಜಮೌಳಿಯವರು ಭಾರತ ಕಂಡಂತಹ ಶ್ರೇಷ್ಠ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ. ಸದ್ಯದ ಮಟ್ಟಿಗೆ ಅವರಿಂದಾಗಿ ಬಾಹುಬಲಿ ಚಿತ್ರದ ಮೂಲಕ ರಾಣಾ ದಗ್ಗುಬಾಟಿ ಹಾಗೂ ಪ್ರಭಾಸ್ ಆರ್ ಆರ್ ಆರ್ ಚಿತ್ರದ ಮೂಲಕ ಜೂನಿಯರ್ ಎನ್ಟಿಆರ್ ಹಾಗೂ ರಾಮಚರಣ್ ರವರು ಚಿತ್ರರಂಗದಲ್ಲಿ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ. ರಾಜಮೌಳಿ ಅವರ ನಿರ್ದೇಶನದ ಸಿನಿಮಾ ಎಂದರೆ ನಟಿಸುವುದಕ್ಕಾಗಿ ಪ್ರತಿಯೊಬ್ಬರು ಕೂಡ ಹಾತೊರೆಯುತ್ತಾರೆ. ಇನ್ನು ರಾಜಮೌಳಿ ತಮ್ಮ ಮುಂದಿನ ಸಿನಿಮಾವನ್ನು ಟಾಲಿವುಡ್ ಚಿತ್ರರಂಗದ ಸೂಪರ್ ಸ್ಟಾರ್ ಮಹೇಶ್ ಬಾಬು ರವರ ಜೊತೆಗೆ ಮಾಡಲಿದ್ದಾರೆ.

ಚಿತ್ರ ಘೋಷಣೆ ಆದ ದಿನದಿಂದಲೂ ಕೂಡ ಹಲವಾರು ವಿಚಾರಗಳಿಗಾಗಿ ಸುದ್ದಿಯಾಗುತ್ತಿದೆ. ಹೌದು ಗೆಳೆಯರೇ ಮೊದಲಿಗೆ ಮಹೇಶ್ ಬಾಬು ರವರು ತಮ್ಮ ಸಿನಿಮಾದಲ್ಲಿ ಬಾಲಿವುಡ್ ಚಿತ್ರರಂಗದ ಹೀರೋಯಿನ್ಗಳು ಬೇಡ ನಮ್ಮ ದಕ್ಷಿಣ ಭಾರತ ಚಿತ್ರರಂಗದ ಹೀರೋಯಿನ್ಗಳೇ ಸಾಕು ಎಂಬುದಾಗಿ ಹೇಳಿದರು. ಇದಾದ ನಂತರ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರಾಜಮೌಳಿ ಅವರ ಸಿನಿಮಾದಲ್ಲಿ ನಟಿಸಬೇಕೆಂದರೇ ಒಬ್ಬ ಕಲಾವಿದರು ಹಲವಾರು ತಿರುವುಗಳನ್ನು ಕೂಡ ಮಾಡಬೇಕಾಗುತ್ತದೆ ಆದರೆ ಅವರಿಗೆ ಅದರ ಪ್ರತಿಫಲ ಖಂಡಿತವಾಗಿ ಸಿಕ್ಕೆ ಸಿಗುತ್ತದೆ. ಹೌದು ಹಲವಾರು ವರ್ಷಗಳ ಕಾಲ ಯಾವುದೇ ಬೇರೆ ಸಿನಿಮಾಗಳನ್ನು ಒಪ್ಪಿಕೊಳ್ಳಬಾರದು ಯಾಕೆಂದರೆ ಆ ಸಿನಿಮಾಗಾಗಿ ವಿಶೇಷ ಗೆಟಪ್ ನಲ್ಲಿ ಇರಬೇಕಾಗುತ್ತದೆ ಇದಕ್ಕಾಗಿ ಬೇರೆ ಸಿನಿಮಾಗಳಿಗಾಗಿ ಆ ಗೆಟಪ್ ನಿಂದ ಹೊರಬರುವುದು ರಾಜಮೌಳಿ ಅವರಿಗೆ ಇಷ್ಟವಿಲ್ಲ.

ಆದರೆ ಈ ಸಿನಿಮಾದಲ್ಲಿ ಮಹೇಶ್ ಬಾಬುರವರೇ ರಾಜಮೌಳಿ ಅವರಿಗೆ ಕಂಡೀಷನ್ ಹಾಕಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ವಿಶೇಷ ಗೆಟಪ್ ನಲ್ಲಿ ಇರಲು ಸಾಧ್ಯವಿಲ್ಲ ಯಾಕೆಂದರೆ ಬೇರೆ ಸಿನಿಮಾಗಳಲ್ಲಿ ಕೂಡ ಅದೇ ಸಂದರ್ಭದಲ್ಲಿ ನಟಿಸಬೇಕು ಎನ್ನುವುದು ಮಹೇಶ್ ಬಾಬುರವರ ಇರಾದೆ. ಹೀಗಾಗಿ 2, 3 ವರ್ಷಗಳ ಚಿತ್ರೀಕರಣದಲ್ಲಿ ಭಾಗಿಯಾಗುವುದು ಕೂಡ ಅವರಿಂದ ಸಾಧ್ಯವಿಲ್ಲ. ಇದಕ್ಕಾಗಿ ಅತ್ಯಂತ ಬ್ಯುಸಿ ಇರುವ ಪೋಷಕ ಕಲಾವಿದರನ್ನು ಆಯ್ಕೆ ಮಾಡುವುದು ಬೇಡ ನಮ್ಮ ಡೇಟ್ಸ್ ಗೆ ಸರಿಹೊಂದುವ ಕಲಾವಿದರನ್ನು ಮಾತ್ರ ಆಯ್ಕೆ ಮಾಡಿ ಎಂಬುದಾಗಿ ರಾಜಮೌಳಿ ಅವರಿಗೆ ಮಹೇಶ್ ಬಾಬು ಹೇಳಿದ್ದಾರಂತೆ.