ಶುರುವಾಗುತ್ತಿದೆ ಟಿ 20 ಸರಣಿ, ಇಂಗ್ಲೆಂಡ್ ವಿರುದ್ಧ ಕಣ್ಣಕ್ಕೆ ಇಳಿಯುತ್ತಿರುವ ಭಾರತ ತಂಡಕ್ಕೆ ತಲೆನೋವಾಗಿರುವ ಮೂರು ಸಂಗತಿಗಳು ಯಾವ್ಯಾವು ಗೊತ್ತೇ?

ಶುರುವಾಗುತ್ತಿದೆ ಟಿ 20 ಸರಣಿ, ಇಂಗ್ಲೆಂಡ್ ವಿರುದ್ಧ ಕಣ್ಣಕ್ಕೆ ಇಳಿಯುತ್ತಿರುವ ಭಾರತ ತಂಡಕ್ಕೆ ತಲೆನೋವಾಗಿರುವ ಮೂರು ಸಂಗತಿಗಳು ಯಾವ್ಯಾವು ಗೊತ್ತೇ?

ನಮಸ್ಕಾರ ಸ್ನೇಹಿತರೇ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತೀಯ ಕ್ರಿಕೆಟ್ ತಂಡ ಇಂಗ್ಲೆಂಡ್ ತಂಡದ ವಿರುದ್ಧ 5ನೇ ಟೆಸ್ಟ್ ಪಂದ್ಯವನ್ನು ಸೋಲುವ ಮೂಲಕ ಈಗಾಗಲೇ ಗೆಲ್ಲುವ ಸರಣಿಯನ್ನು ಸಮ ಬಲಗೊಳಿಸಿತು ಎಂಬುದು ತಿಳಿದಿದೆ. ಇನ್ನು ಭಾರತೀಯ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧ ನಿಯಮಿತ ಓವರ್ಗಳ ಸರಣಿಯನ್ನು ಆಡಲಿದೆ. ಮೊದಲಿಗೆ ರೋಹಿತ್ ಶರ್ಮಾ ರವರ ನೇತೃತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ ಇಂಗ್ಲೆಂಡ್ ತಂಡದ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದ್ದು ಮೊದಲ ಪಂದ್ಯವನ್ನು ಸೌತಾಂಪ್ಟನ್ ನಲ್ಲಿ ಆಡಲಿದೆ.

ಮೊದಲ ಟಿ-ಟ್ವೆಂಟಿ ಪಂದ್ಯದಲ್ಲಿ ಯಾವುದೇ ಅನುಭವ ಹೊಂದಿರುವ ಆಟಗಾರರು ಭಾಗವಹಿಸುತ್ತಿಲ್ಲ ಬದಲಾಗಿ ಎರಡನೇ ಪದದಿಂದ ವಿರಾಟ್ ಕೊಹ್ಲಿ ಜಸ್ಪ್ರೀತ್ ಬುಮ್ರಾ ಸೇರಿದಂತೆ ಎಲ್ಲಾ ಅನುಭವಿ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಮೊದಲ ಟಿ-ಟ್ವೆಂಟಿ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡ ಯುವ ಆಟಗಾರರೊಂದಿಗೆ ಕಣಕ್ಕಿಳಿಯಲಿದೆ. ಇದಕ್ಕೂ ಮುನ್ನವೇ ಭಾರತೀಯ ಕ್ರಿಕೆಟ್ ತಂಡ ಮೂರು ಸಮಸ್ಯೆಗಳನ್ನು ಎದುರಿಸುತ್ತಿವೆ ಆದರೆ ಕುರಿತಂತೆ ತಿಳಿಯೋಣ ಬನ್ನಿ. ಮೊದಲನೇದಾಗಿ ನಾಯಕ ರೋಹಿತ್ ಶರ್ಮ ಹಾಗೂ ಮಾಜಿ ಕಪ್ತಾನ ವಿರಾಟ್ ಕೊಹ್ಲಿ ರವರ ಫಾರ್ಮ್. ಇಬ್ಬರೂ ಕೂಡ ಐಪಿಎಲ್ ನಿಂದ ಪ್ರಾರಂಭಿಸಿ ಇಲ್ಲಿಯವರೆಗೂ ಕಳಪೆ ಫಾರ್ಮ್ ನಲ್ಲಿ ಇದ್ದಾರೆ. ಹೀಗಾಗಿ ಇವರಿಬ್ಬರು ಲಯಕ್ಕೆ ಮರಳಿ ಬರಬೇಕಾಗಿರುವುದು ಅತಿ ಮುಖ್ಯವಾಗಿದೆ. ಇಂಗ್ಲೆಂಡ್ ನೆಲದಲ್ಲಿ ಇವರಿಗಿರುವ ಅನುಭವವನ್ನು ಟಿ20 ಸರಣಿಯಲ್ಲಿ ಧಾರೆ ಎರೆಯಬೇಕಾಗಿದೆ. ಇನ್ನು ಸೌತ್ ಆಫ್ರಿಕಾದ ವಿರುದ್ಧ ನಿಯಮಿತ ಓವರ್ಗಳ ಪಂದ್ಯದಲ್ಲಿ ರಿಷಬ್ ಪಂತ್ ರವರು ಅಷ್ಟೊಂದು ಚೆನ್ನಾಗಿ ಆಡಿರಲಿಲ್ಲ ಟೆಸ್ಟ್ನಲ್ಲಿ ಅವರು ಇಂಗ್ಲೆಂಡ್ ವಿರುದ್ಧ ಅತ್ಯುತ್ತಮ ಬಾಟಿಕ್ ಪ್ರದರ್ಶನವನ್ನು ನೀಡಿದ್ದಾರೆ.

ಹೀಗಾಗಿ ಈಗ ನಡೆಯಲಿರುವ ವೈಟ್ ಬಾಲ್ ಪಂದ್ಯದಲ್ಲಿ ಮಿಂಚಲಿ ಎನ್ನುವ ನಿರೀಕ್ಷೆ ಸಾಕಷ್ಟಿದೆ. ವಿಶ್ವಕಪ್ ಕೂಡ ಸನಿಹದಲ್ಲಿ ಇರುವ ಕಾರಣ ರಿಷಬ್ ಪಂತ್ ನೇಮಿತ ಓವರ್ಗಳಲ್ಲಿ ತಮ್ಮ ಅದ್ಭುತ ಫಾರ್ಮಿಗೆ ಮರಳಿ ಬರಬೇಕಾಗಿರುವುದು ಅಗತ್ಯವಾಗಿದೆ. ಮೂರನೇದಾಗಿ ಐಪಿಎಲ್ ಮೂಲಕ ಹಾರ್ದಿಕ್ ಪಾಂಡ್ಯ ರವರು ಬ್ಯಾಟಿಂಗ್ ವಿಭಾಗದಲ್ಲಿ ತಮ್ಮ ಜಲ್ವಾ ತೋರಿಸಿದ್ದಾರೆ ಆದರೆ ಒಬ್ಬ ಬ್ಯಾಟಿಂಗ್ ಆಲ್ರೌಂಡರ್ ಆಗಿ ಬೌಲಿಂಗ್ ಜವಾಬ್ದಾರಿಯನ್ನು ಕೂಡ ಅವರು ನಿರ್ವಹಿಸಬೇಕಾಗಿರುತ್ತದೆ. ಹೀಗಾಗಿ ಈ ವಿಭಾಗದಲ್ಲಿಯೂ ಕೂಡ ಅವರು ಅತ್ಯುತ್ತಮವಾಗಿ ಮಿಂಚ ಬೇಕಾಗಿರುವುದು ಮತ್ತೊಂದು ಸಮಸ್ಯೆಯ ವಿಚಾರವಾಗಿದೆ. ಈ ಸಮಸ್ಯೆಯನ್ನು ನಿವಾರಿಸುತ್ತದೆ ಖಂಡಿತವಾಗಿ ಭಾರತೀಯ ಕ್ರಿಕೆಟ್ ತಂಡ ವಿಶ್ವಕಪ್ ಗೆ ಸಂಪೂರ್ಣ ತಯಾರಿ ಮಾಡಿಕೊಂಡಂತಾಗುತ್ತದೆ.