ಲೇಡಿ ಸೆಹ್ವಾಗ್ ಎಂದೇ ಖ್ಯಾತಿ ಪಡೆದಿದ್ದ ಶೆಫಾಲಿ, ಇದೀಗ ಎಬಿಡಿ ರವರಂತೆ ಶಾಟ್ ಹೊಡೆದಿದ್ದು ಹೇಗೆ ಗೊತ್ತೇ?? ವಿಡಿಯೋ ಹೇಗಿದೆ ಗೊತ್ತೇ?

ಲೇಡಿ ಸೆಹ್ವಾಗ್ ಎಂದೇ ಖ್ಯಾತಿ ಪಡೆದಿದ್ದ ಶೆಫಾಲಿ, ಇದೀಗ ಎಬಿಡಿ ರವರಂತೆ ಶಾಟ್ ಹೊಡೆದಿದ್ದು ಹೇಗೆ ಗೊತ್ತೇ?? ವಿಡಿಯೋ ಹೇಗಿದೆ ಗೊತ್ತೇ?

ನಮಸ್ಕಾರ ಸ್ನೇಹಿತರೇ ಇತ್ತೀಚಿನ ವರ್ಷಗಳಲ್ಲಿ ಪುರುಷರ ಕ್ರಿಕೆಟ್ ಜೊತೆಗೆ ಮಹಿಳೆಯರ ಕ್ರಿಕೆಟ್ ಕೂಡ ಸಾಕಷ್ಟು ಜನಪ್ರಿಯತೆ ಹಾಗೂ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಎಂದರೆ ತಪ್ಪಾಗಲಾರದು. ಮಹಿಳೆಯರಿಗಾಗಿಯೇ ವಿಶೇಷ ಐಪಿಎಲ್ ಅನ್ನು ಕೂಡ ಮುಂದಿನ ವರ್ಷದಿಂದ ಬಿಸಿಸಿಐ ಆಯೋಜಿಸಲಿದೆ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ. ಸದ್ಯಕ್ಕೆ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಈಗಾಗಲೇ ಮೇಲುಗೈ ಸಾಧಿಸಿದೆ. ಸರಣಿಯ ಮೊದಲ ಪಂದ್ಯದಲ್ಲಿ ಈಗಾಗಲೇ 4 ವಿಕೆಟ್ ಗಳಿಂದ ಭರ್ಜರಿ ಗೆಲುವನ್ನು ಸಾಧಿಸಿರುವ ಹರ್ಮನ್ ಪ್ರೀತ್ ನೇತೃತ್ವದ ಭಾರತೀಯ ಮಹಿಳಾ ಕ್ರಿಕೆಟ್ ತಂಡ 2ನೇ ಪಂದ್ಯದಲ್ಲಿ ಬರೋಬ್ಬರಿ 10 ವಿಕೆಟ್ ಗಳ ಗೆಲುವನ್ನು ಸಾಧಿಸಿ ಬೀಗುತ್ತಿದೆ.

ಶ್ರೀಲಂಕಾ ನೀಡಿದ್ದ 173 ರನ್ನುಗಳ ಟಾರ್ಗೆಟ್ ಅನ್ನು ಯಾವುದೇ ವಿಕೆಟ್ ನಷ್ಟ ಇಲ್ಲದೇ ಭಾರತೀಯ ಮಹಿಳೆಯರು ಪೂರ್ತಿಗೊಳಿಸಿದ್ದಾರೆ. ಶೆಫಾಲಿ ವರ್ಮ ಹಾಗೂ ಸ್ಮೃತಿ ಮಂದನ ರವರ ಅದ್ಭುತ ಜೊತೆಯಾಟದ ಕಾರಣದಿಂದ ನೋ ಲಾಸ್ ನಲ್ಲಿ ಪಂದ್ಯವನ್ನು ಗೆದ್ದು ಮುಗಿಸಿದ್ದಾರೆ. ಅದರಲ್ಲೂ ಈ ಸಂದರ್ಭದಲ್ಲಿ ಶೆಫಾಲಿ ವರ್ಮ ರವರ ಒಂದು ಶಾಟ್ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಹೌದು ಗೆಳೆಯರೆ 71 ಎಸೆತಗಳಲ್ಲಿ ಭರ್ಜರಿ 71 ರನ್ನುಗಳನ್ನು ಬಾರಿಸಿರುವ ಶೆಫಾಲಿ 7 ಓವರ್ ನಲ್ಲಿ ಅಚಿನಿ ಕುಲಸೂರ್ಯ ರವರ ಓವರ್ ನಲ್ಲಿ ಅತ್ಯದ್ಭುತ ಹೊಡೆತದ ಮೂಲಕ ಈಗ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಆಗಿದ್ದಾರೆ.

ಹೌದು ಆ ಎಸೆತದಲ್ಲಿ ಶೆಫಾಲಿ ರವರು ಆಫ್ ಸೈಡ್ ನಿಂದ ಹೊರಗೆ ಬಂದು ದಕ್ಷಿಣ ಆಫ್ರಿಕಾ ದ ಎಬಿಡಿ ವಿಲಿಯರ್ಸ್ ರವರಂತೆ ಹಿಂದಕ್ಕೆ ಸ್ಕೂಪ್ ಶಾಟ್ ಹೊಡೆದು ಫೈನ್ ಲೆಗ್ ನಲ್ಲಿ ಚೆಂಡು ಬೌಂಡರಿ ಗೆರೆ ದಾಟುವಂತೆ ಮಾಡಿದ್ದಾರೆ. ಈ ವಿಡಿಯೋ ಈಗಾಗಲೇ ವೈರಲ್ ಆಗಿದ್ದು ಎಲ್ಲರೂ ಶೆಫಾಲಿ ರವರನ್ನು ಲೇಡಿ ಎಬಿಡಿ ಎನ್ನುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.