ಕೊಹ್ಲಿ ಜೊತೆ ಫುಲ್ ಕಿರಿಕ್ ಮಾಡಿಕೊಂಡ ಇಂಗ್ಲೆಂಡ್ ತಂಡ ಬೈರ್ಸ್ಟೋವ್ , ಮೈದಾನನಿಂದ ಹೊರಬಂದ ಬಳಿಕ ಹೇಳಿದ್ದೇನು ಗೊತ್ತೇ?
ಕೊಹ್ಲಿ ಜೊತೆ ಫುಲ್ ಕಿರಿಕ್ ಮಾಡಿಕೊಂಡ ಇಂಗ್ಲೆಂಡ್ ತಂಡ ಬೈರ್ಸ್ಟೋವ್ , ಮೈದಾನನಿಂದ ಹೊರಬಂದ ಬಳಿಕ ಹೇಳಿದ್ದೇನು ಗೊತ್ತೇ?
ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇಂಗ್ಲೆಂಡ್ನಲ್ಲಿ ನಡೆದಿರುವ ಇಂಗ್ಲೆಂಡ್ ಹಾಗೂ ಭಾರತ ತಂಡಗಳ ನಡುವಿನ ಐದನೇ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ತಂಡ ಆಶ್ಚರ್ಯಕರ ರೀತಿಯಲ್ಲಿ ಗೆದ್ದಿದೆ. ಹೌದು ಗೆಳೆಯರೆ ಮೊದಲ ಇನ್ನಿಂಗ್ಸನ್ನು ನೋಡಿದ ಪ್ರತಿಯೊಬ್ಬರೂ ಕೂಡ ಟೆಸ್ಟ್ ಪಂದ್ಯವನ್ನು ಜಸ್ಪ್ರೀತ್ ಬೂಮ್ರಾ ರವರ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ ಸುಲಭವಾಗಿ ಗೆಲ್ಲಲಿದೆ ಎಂಬುದಾಗಿ ಭಾವಿಸಿದ್ದರು. ಆದರೆ ಇಂಗ್ಲೆಂಡ್ ತಂಡ ಎರಡನೇ ಇನ್ನಿಂಗ್ಸ್ ನಲ್ಲಿ ನಿಜಕ್ಕೂ ಕೂಡ ಅತ್ಯುತ್ತಮವಾಗಿ ಆಟವನ್ನು ಪ್ರದರ್ಶಿಸಿ ಸರಣಿಯನ್ನು ಸಮ ಬಲಗೊಳಿಸಲು ಯಶಸ್ವಿಯಾಯಿತು.
ಇನ್ನು ಈ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ನಡುವಿನ ಇಬ್ಬರು ಆಟಗಾರರ ನಡುವೆ ವಾಗ್ವಾದ ಕೂಡ ಕಂಡು ಬಂದಿತ್ತು. ಹೌದು ನಾವು ಮಾತನಾಡುತ್ತಿರುವುದು ವಿರಾಟ್ ಕೊಹ್ಲಿ ಹಾಗೂ ಜಾನಿ ಬೈರ್ಸ್ಟೋ ಕುರಿತಂತೆ. ಮೂರನೇ ದಿನದಾಟದಲ್ಲಿ ವಿರಾಟ್ ಕೊಹ್ಲಿ ರವರು ಸ್ಲಿಪ್ ನಲ್ಲಿದ್ದರು. ಈ ಸಂದರ್ಭದಲ್ಲಿ ಬೇರ್ಸ್ಟೋ ಅವರು ಬೆನ್ ಸ್ಟೋಕ್ಸ್ ಜೊತೆಗೆ ಅತ್ಯುತ್ತಮವಾದ ಜೊತೆಯಾಟವನ್ನು ಆಡುತ್ತಿದ್ದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಅವರು ಮೊದಲಿಗೆ ನಕ್ಕು ನಂತರ ವಾಗ್ವಾದಕ್ಕೆ ಇಳಿದಿದ್ದರು. ಇದಾದ ನಂತರ ವಿರಾಟ್ ಕೊಹ್ಲಿ ರವರ ಜೊತೆಗೆ ಬೇರ್ಸ್ಟೋ ರವರು ಕೂಡ ಮಾತಿನ ಸಮರಕ್ಕೆ ಇಳಿದಿದ್ದರು. ಈ ಸಂದರ್ಭದಲ್ಲಿ ಬೇರ್ಸ್ಟೋ ರವರಿಗೆ ಶಮಿ ಅವರ ಬೌಲಿಂಗ್ ಸೌಥಿ ಅವರಿಗಿಂತ ಫಾಸ್ಟ್ ಆಗಿದೆಯಲ್ಲವೆ ಎಂಬುದಾಗಿ ಕೂಡ ಸ್ಲೆಡ್ಜಿಂಗ್ ಮಾಡಿದ್ದರು.
ಆದರೆ ನಂತರ ಬೇರ್ಸ್ಟೋ ರವರು ತಮ್ಮ ಬ್ಯಾಟಿಂಗ್ ಮೂಲಕ ಶತಕವನ್ನು ತಿಳಿಸಿ ಉತ್ತಮವಾದ ರಿಪ್ಲೈ ನೀಡಿದ್ದರು.ಅದಾದನಂತರ ಶಮಿ ಅವರ ಬೌಲಿಂಗ್ನಲ್ಲಿ ವಿರಾಟ್ ಕೊಹ್ಲಿ ರವರಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬೇರ್ಸ್ಟೋ ನಾವಿಬ್ಬರು ಹತ್ತು ವರ್ಷಗಳ ಕಾಲ ಪರಸ್ಪರ ವಿರುದ್ಧವಾಗಿ ಆಡುತ್ತಿದ್ದೇವೆ ನಮ್ಮ ನಡುವೆ ಯಾವುದೇ ದ್ವೇಷವಿಲ್ಲ ಕೇವಲ ಹಾಸ್ಯಮಯ ಸಂಭಾಷಣೆ ಮಾತ್ರ ನಡೆದಿದೆ ಎಂಬುದಾಗಿ ಸ್ಲೆಡ್ಜಿಂಗ್ ಪ್ರಕರಣದ ಕುರಿತಂತೆ ಮಾತನಾಡಿದ್ದಾರೆ. ಈ ಕುರಿತಂತೆ ನಿಮ್ಮ ಅಭಿಪ್ರಾಯ ವನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸುವುದನ್ನು ಮಾತ್ರ ಮರೆಯಬೇಡಿ.