ಮತ್ತೊಮ್ಮೆ ಕೊಹ್ಲಿ ರವರನ್ನು ಕುಟುಕಿದ ವೀರೇಂದ್ರ ಸೆಹ್ವಾಗ್, ಅದ್ಯಾಕೆ ಸೆಹ್ವಾಗ್ ಗೆ ಕೊಹ್ಲಿ ಮೇಲೆ ಕಣ್ಣು?? ಹೇಳಿದ್ದೇನು ಗೊತ್ತೇ?

ನಮಸ್ಕಾರ ಸ್ನೇಹಿತರೆ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ವಿರಾಟ್ ಕೊಹ್ಲಿ ಅವರದು ವಿಶೇಷವಾದ ಅಧ್ಯಾಯ ಎಂದರೆ ತಪ್ಪಾಗಲಾರದು. 2019 ಕಿಂತ ಮುಂಚೆ ಅವರನ್ನು ಕ್ರಿಕೆಟ್ ದುನಿಯಾದ ರನ್ ಮಷೀನ್ ಕಿಂಗ್ ಕೊಹ್ಲಿ ಎನ್ನುವುದಾಗಿ ಕರೆಯಲಾಗುತ್ತಿತ್ತು. ಪ್ರತಿಯೊಂದು ಪಂದ್ಯಗಳಲ್ಲಿ ಕೂಡ ಸತತವಾಗಿ ರನ್ ಗಳಿಕೆಯನ್ನು ಹೆಚ್ಚಿಸಿಕೊಂಡು ತಂಡದ ಗೆಲುವಿಗೆ ಪ್ರಮುಖ ಕಾರಣವಾಗಿ ಕಾಣಿಸಿ ಕೊಳ್ಳುತ್ತಿದ್ದರು. ಆದರೆ 2019 ರ ನಂತರ ವಿರಾಟ್ ಕೊಹ್ಲಿ ಅವರು ಕಳಪೆ ಮಟ್ಟದ ಪ್ರದರ್ಶನವನ್ನು ಅವರ ನಿಜವಾದ ಕ್ಷಮತೆಗೆ ಹೋಲಿಸಿದರೆ ನೀಡುತ್ತಿದ್ದಾರೆ ಎಂದು ಹೇಳಬಹುದಾಗಿದೆ.

ಐಪಿಎಲ್ ನಲ್ಲಾದರೂ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡುವ ಮೂಲಕ ತಮ್ಮ ಹಳೆಯ ಲಯಕ್ಕೆ ಮತ್ತೆ ಮರಳಿ ಬರುತ್ತಾರೆ ಎನ್ನುವುದಾಗಿ ಎಲ್ಲರೂ ಭಾವಿಸಿದರು ಆದರೆ ಐಪಿಎಲ್ ನಲ್ಲಿ ಕೇವಲ ಕಳಪೆ ಪ್ರದರ್ಶನವನ್ನು ನೀಡುವುದು ಮಾತ್ರವಲ್ಲದೆ ಮೂರುಬಾರಿ 0 ರನ್ನಿಗೆ ಕೂಡ ಔಟ್ ಆಗಿದ್ದರು. ಹೇಗಾಗಿ ಅಭಿಮಾನಿಗಳ ನಿರೀಕ್ಷೆಯನ್ನು ಮತ್ತೊಮ್ಮೆ ವಿರಾಟ್ ಕೊಹ್ಲಿ ರವರು ಹುಸಿಗೊಳಿಸಿದರು. ಆದರೆ ಲೀಸಿಸ್ಟರ್ ಶೈರ್ ತಂಡದ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡುತ್ತಿರುವ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಅವರು ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿ ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಉತ್ತಮ ರನ್ ಸಿ’ಡಿಸುವ ಭರವಸೆಯನ್ನು ಮೂಡಿಸಿದ್ದಾರೆ. ಆದರೆ ಇದರ ನಡುವಲ್ಲಿ ಭಾರತೀಯ ಮಾಜಿ ಕ್ರಿಕೆಟಿಗ ಆಗಿರುವ ವೀರೇಂದ್ರ ಸೆಹವಾಗ್ ರವರು ವಿರಾಟ್ ಕೊಹ್ಲಿ ರವರ ಕುರಿತಂತೆ ಕೆಲವೊಂದು ವಿಚಾರವನ್ನು ಮಾತನಾಡಿ ಪರೋಕ್ಷವಾಗಿಯೇ ವಿರಾಟ್ ಕೊಹ್ಲಿ ರವರನ್ನು ಟೀಕಿಸಿರುವಂತೆ ಮಾಡಿದೆ.

ಹೌದು ಗೆಳೆಯರೇ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ವಿರಾಟ್ ಕೊಹ್ಲಿ ಅವರು ಕೊನೆಯ ಬಾರಿಗೆ ಯಾವಾಗ ಶತಕ ಸಿ’ಡಿಸಿದ್ದಾರೆ ಎನ್ನುವುದು ನನಗೆ ನೆನಪಿಲ್ಲ ಅತಿಶೀಘ್ರದಲ್ಲೇ ಅವರು ಶತಕವನ್ನು ಬಾರಿಸಲಿ ಎಂಬುದಾಗಿ ಹಾರೈಸುತ್ತೇನೆ ಎಂಬುದಾಗಿ ಅವರು ಹೇಳಿಕೊಂಡಿದ್ದರು. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅವರು ದೊಡ್ಡ ಮೊತ್ತವನ್ನು ಗಳಿಸಲು ಪ್ರೀತಿಸುತ್ತಾರೆ ಅದರಲ್ಲಿ ಅವರು ಶತಕವನ್ನು ಬಾರಿಸಲು ಎಂಬುದಾಗಿ ನಾನು ಹಾರೈಸುತ್ತೇನೆ ಎಂದು ವೀರು ಹೇಳಿದ್ದಾರೆ.