ಹೊಸ ಆಟಗಾರನಿಗೆ ವಿಶ್ವಕಪ್ ನಲ್ಲಿ ಚಾನ್ಸ್ ನೀಡಿ ಎಂದ ಸೆಹ್ವಾಗ್: ರಾಹುಲ್, ಸೂರ್ಯ ಇರುವಾದ ಇವನ್ಯಾಕೆ ಎಂದ ನೆಟ್ಟಿಗರು, ಯಾರಂತೆ ಗೊತ್ತೇ?

ಹೊಸ ಆಟಗಾರನಿಗೆ ವಿಶ್ವಕಪ್ ನಲ್ಲಿ ಚಾನ್ಸ್ ನೀಡಿ ಎಂದ ಸೆಹ್ವಾಗ್: ರಾಹುಲ್, ಸೂರ್ಯ ಇರುವಾದ ಇವನ್ಯಾಕೆ ಎಂದ ನೆಟ್ಟಿಗರು, ಯಾರಂತೆ ಗೊತ್ತೇ?

ನಮಸ್ಕಾರ ಸ್ನೇಹಿತರೆ ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಭಾರತೀಯ ಕ್ರಿಕೆಟ್ ತಂಡ ಅಂತರಾಷ್ಟ್ರೀಯ ಸರಣಿ ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು ಇದೇ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವಕಪ್ ಗೆ ತಯಾರಿಯನ್ನು ಮಾಡಿಕೊಳ್ಳುತ್ತಿದೆ ಎಂದು ಹೇಳಬಹುದಾಗಿದೆ. ಈಗ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ನಡೆಯಲಿರುವ ಪ್ರತಿಯೊಂದು ಸರಣಿಗಳಲ್ಲಿ ಕೂಡ ಯಾವೆಲ್ಲಾ ಆಟಗಾರ ಅತ್ಯುತ್ತಮವಾಗಿ ಪ್ರದರ್ಶನ ನೀಡುತ್ತಾರೋ ಅವರನ್ನು ಭಾರತೀಯ ವಿಶ್ವಕಪ್ ತಂಡದಲ್ಲಿ ಸೇರಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ ಎಂಬುದಾಗಿ ತಿಳಿದುಬಂದಿದ್ದು ಪ್ರತಿಯೊಬ್ಬರು ಕೂಡ ತಮ್ಮ ನೆಚ್ಚಿನ ಆಟಗಾರರನ್ನು ಸಜೆಸ್ಟ್ ಮಾಡುತ್ತಿದ್ದಾರೆ.

ಇನ್ನು ಸದ್ಯಕ್ಕೆ ಭಾರತ ಕಂಡಂತಹ ಅತ್ಯಂತ ಆಕ್ರಮಕ ಓಪನಿಂಗ್ ಬ್ಯಾಟ್ಸ್ಮನ್ ಆಗಿರುವ ವೀರೇಂದ್ರ ಸೆಹ್ವಾಗ್ ರವರು ದೀಪಕ್ ಕೂಡಾ ರವರನ್ನು ವಿಶ್ವಕಪ್ ತಂಡದಲ್ಲಿ ಸೇರಿಸಿಕೊಳ್ಳುವುದು ಉತ್ತಮ ಎಂಬುದಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಐರ್ಲೆಂಡ್ ವಿರುದ್ಧದ ಮೊದಲ ಟ್ವೆಂಟಿ-20 ಮಳೆ ಬಂದ ಕಾರಣಕ್ಕಾಗಿ ಕೇವಲ 12 ಓವರ್ ಗಳಿಗೆ ಸೀಮಿತಗೊಳಿಸಲಾಗಿತ್ತು. 109 ರನ್ನುಗಳ ಗುರಿಯನ್ನು ನೀಡಿದ್ದಾರೆ ಲೈಟ್ ತಂಡದ ಸವಾಲನ್ನು ಬೆನ್ನತ್ತಿದ ಭಾರತೀಯ ಕ್ರಿಕೆಟ್ ತಂಡ 2 ಓವರುಗಳು ಉಳಿದಿರುವಂತೆ ಪಂದ್ಯವನ್ನು ಗೆದ್ದು ಬೀಗಿತು. ಇನ್ನು ಭಾರತೀಯ ಕ್ರಿಕೆಟ್ ತಂಡದ ಗೆಲುವಿನಲ್ಲಿ ದೀಪಕ್ ಹೂಡ ರವರು ಬ್ಯಾಟಿಂಗ್ ವಿಭಾಗದಲ್ಲಿ ಕೇವಲ 29 ಎಸೆತಗಳಲ್ಲಿ ಬರೋಬ್ಬರಿ 47 ರನ್ ಗಳನ್ನು ಬಾರಿಸಿದ್ದರು.

ಇದರಲ್ಲಿ ಎರಡು ಸಿಕ್ಸರ್ ಹಾಗೂ ಆರು ಬೌಂಡರಿ ಕೂಡ ಶಾಮೀಲಾಗಿತ್ತು. ಆದರೆ ನೆಟ್ಟಿಗರು ಮಾತ್ರ ಕೆ ಎಲ್ ರಾಹುಲ್ ಹಾಗೂ ಸೂರ್ಯಕುಮಾರ್ ಯಾದವ್ ತಂಡದಲ್ಲಿ ಇರಬೇಕಾದರೆ ಇವರ ಅವಶ್ಯಕತೆ ಯಾಕೆ ಎಂಬುದಾಗಿ ಸೋಶಿಯಲ್ ಮೀಡಿಯಾದಲ್ಲಿ ಬರೆದು ಕೊಳ್ಳುತ್ತಿದ್ದಾರೆ. ಇನ್ನು ಕೂಡ ವಿಶ್ವಕಪ್ ತಂಡದಲ್ಲಿ ಯಾರೆಲ್ಲ ಆಯ್ಕೆಯಾಗಲಿದ್ದಾರೆ ಎನ್ನುವ ಊಹಾಪೋಹ ಸುದ್ದಿಗಳು ದೊಡ್ಡಮಟ್ಟದಲ್ಲಿ ಓಡಾಡುತ್ತಿರುವುದಂತೂ ಸುಳ್ಳಲ್ಲ.