ಮುಂದಿನ ವಿಶ್ವಕಪ್ ನಲ್ಲಿ ಉತ್ತಮ ಬ್ಯಾಕ್ ಅಪ್ ಆರಂಭಿಕ ಆಟಗಾರರನ್ನು ಆಯ್ಕೆ ಮಾಡಿದ ವಾಸಿಂ ಜಾಫ್ರ್, ಆಯ್ಕೆಯಾದ ಆಟಗಾರ ಯಾರು ಗೊತ್ತೇ??

ಮುಂದಿನ ವಿಶ್ವಕಪ್ ನಲ್ಲಿ ಉತ್ತಮ ಬ್ಯಾಕ್ ಅಪ್ ಆರಂಭಿಕ ಆಟಗಾರರನ್ನು ಆಯ್ಕೆ ಮಾಡಿದ ವಾಸಿಂ ಜಾಫ್ರ್, ಆಯ್ಕೆಯಾದ ಆಟಗಾರ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇನ್ನೇನು ಈ ವರ್ಷದ ಅಕ್ಟೋಬರ್ ನವೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-ಟ್ವೆಂಟಿ ವಿಶ್ವಕಪ್ ಭಾರತೀಯ ಕ್ರಿಕೆಟ್ ತಂಡಕ್ಕೆ ಸಾಕಷ್ಟು ಮಹತ್ವದ್ದಾಗಿ. ಕಳೆದ ವರ್ಷ ನಡೆದಿರುವ ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ಭಾರತೀಯ ಕ್ರಿಕೆಟ್ ತಂಡದ ಕಳಪೆ ಪ್ರದರ್ಶನದ ನಂತರ ಈ ಬಾರಿಯಾದರೂ ಕಪ್ ಗೆಲ್ಲಲೇಬೇಕು ಎನ್ನುವ ಕಾರಣಕ್ಕಾಗಿ ಕೋಚ್ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ ಸಿದ್ಧವಾಗುತ್ತಿದೆ. ಅದಕ್ಕಾಗಿ ಭಾರತೀಯ ಕ್ರಿಕೆಟ್ ತಂಡ ಮುಂಬರುವ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ ಆಸ್ಟ್ರೇಲಿಯಾದಲ್ಲಿ ಚೆನ್ನಾಗಿ ಆಡಬಲ್ಲ ಅಂತಹ ಆಟಗಾರರ ಪರೀಕ್ಷೆಯನ್ನು ಅವರನ್ನು ತಂಡದಲ್ಲಿ ಆಯ್ಕೆ ಮಾಡುವ ಮೂಲಕ ಪಡೆದುಕೊಳ್ಳುತ್ತಿದೆ ಎಂದು ಹೇಳಬಹುದಾಗಿದೆ. ಆರಂಭಿಕ ಆಟಗಾರರ ರೇಸ್ ನಲ್ಲಿ ಹಲವಾರು ಆಯ್ಕೆಗಳು ಸೆಲೆಕ್ಟರ್ಸ್ ಬಳಿಯಿದೆ.

ಅದರಲ್ಲೂ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಆಗಿರುವ ವಾಸಿಂ ಜಾಫರ್ ರವರು ಆರಂಭಿಕ ಆಟಗಾರರ ಬ್ಯಾಕಪ್ ವಿಚಾರದಲ್ಲಿ ಒಬ್ಬ ಆಟಗಾರ ಎಲ್ಲರಿಗಿಂತ ಅತ್ಯುತ್ತಮ ಆಯ್ಕೆ ಎಂಬುದಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಹೌದು ಗೆಳೆಯರೇ ಭಾರತೀಯ ಕ್ರಿಕೆಟ್ ತಂಡದ ಆರಂಭಿಕ ಬ್ಯಾಕಪ್ ಆಟಗಾರನಾಗಿ ಇಶಾನ್ ಕಿಶನ್ ರವರನ್ನು ಆಯ್ಕೆ ಮಾಡಬೇಕು ಎಂಬುದಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಬಾರಿಯ ಐಪಿಎಲ್ ನಲ್ಲಿ ಅತ್ಯಂತ ದುಬಾರಿ ವೆಚ್ಚಕ್ಕೆ ಮಾರಾಟವಾಗಿರುವ ಇಶಾನ್ ಸತತವಾಗಿ ಸಂತುಳಿತ ಬ್ಯಾಟಿಂಗ್ ಪ್ರದರ್ಶನ ಮಾಡುವಲ್ಲಿ ವಿಫಲರಾದರೂ ಕೂಡ 14 ಪಂದ್ಯಗಳಿಂದ 418 ರನ್ನುಗಳನ್ನು ಬಾರಿಸಿದ್ದರು. ಕೇವಲ ಇದನ್ನು ಮಾತ್ರವಲ್ಲದೆ ಇತ್ತೀಚಿಗೆ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಅತ್ಯಧಿಕ ರನ್ ಬಾರಿಸಿರುವ ಆಟಗಾರನಾಗಿ ಕೂಡ ಕಾಣಿಸಿಕೊಂಡಿದ್ದಾರೆ.

ಇನ್ನೂ ಮುಂದುವರೆದು ಹೇಳುವುದಾದರೆ ತಮ್ಮ ನಿಕಟ ಸ್ಪರ್ಧಿ ಆಗಿರುವ ಋತುರಾಜ್ ಗಾಯಕ್ವಾಡ್ ಅವರಿಗಿಂತ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ಐಪಿಎಲ್ ಸೇರಿದಂತೆ ಇತ್ತೀಚೆಗೆ ನಡೆದಿರುವ ಸೌತ್ ಆಫ್ರಿಕಾದ ವಿರುದ್ಧದ ಸರಣಿಯಲ್ಲಿ ಕೂಡ ತೋರಿಸಿದ್ದಾರೆ. ಅತ್ಯಂತ ಯುವ ಆಟಗಾರರಾಗಿರುವ ಇಶಾನ್ ಕಿಶನ್ ಸ್ಟ್ರೈಕ್ ರೇಟ್ ವಿಚಾರದಲ್ಲಿ ಕೂಡ ಎಲ್ಲರನ್ನೂ ಹಿಂದಿಕ್ಕುತ್ತಾರೆ. ಹೀಗಾಗಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವಕಪ್ ತಂಡಕ್ಕೆ ಇವರನ್ನು ಬ್ಯಾಕಪ್ ಆರಂಭಿಕ ಆಟಗಾರನಾಗಿ ಆಯ್ಕೆ ಮಾಡುವುದು ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವನ್ನು ವಹಿಸಬಹುದಾಗಿದೆ ಎಂಬುದಾಗಿ ವಾಸಿಂ ಜಾಫರ್ ರವರು ಅಭಿಪ್ರಾಯಪಟ್ಟಿದ್ದಾರೆ.