ರೋಹಿತ್, ಕೊಹ್ಲಿ ರಾಹುಲ್ ಅಲ್ಲ, ಈ ವಿಕೆಟ್ ಕೀಪರ್ ಗೆ ಆರಂಭಿಕ ಸ್ಥಾನ ನೀಡಿ ಎಂದ ಆರ್ಸಿಬಿ ಕೋಚ್. ಆಯ್ಕೆ ಮಾಡಿದ್ದು ಯಾರನ್ನು ಗೊತ್ತೆ??

ರೋಹಿತ್, ಕೊಹ್ಲಿ ರಾಹುಲ್ ಅಲ್ಲ, ಈ ವಿಕೆಟ್ ಕೀಪರ್ ಗೆ ಆರಂಭಿಕ ಸ್ಥಾನ ನೀಡಿ ಎಂದ ಆರ್ಸಿಬಿ ಕೋಚ್. ಆಯ್ಕೆ ಮಾಡಿದ್ದು ಯಾರನ್ನು ಗೊತ್ತೆ??

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮುಂಬರುವ ಆಸ್ಟ್ರೇಲಿಯಾದ ಟಿ ಟ್ವೆಂಟಿ ವಿಶ್ವಕಪ್ ಹಣ್ಣು ಗೆಲ್ಲುವ ನಿಟ್ಟಿನಲ್ಲಿ ಭಾರತೀಯ ಕ್ರಿಕೆಟ್ ತಂಡ ತಂಡವನ್ನು ಸಿದ್ಧಪಡಿಸುತ್ತಿದೆ ಎಂದು ಹೇಳಬಹುದಾಗಿದೆ. ಭಾರತ ಆರಂಭಿಕ ಆಟಗಾರರ ವಿಚಾರದಲ್ಲಿ ಸಾಕಷ್ಟು ಬೋಲ್ಡ್ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಕೋಚ್ ಆಗಿರುವ ಭಾರತದ ಮಾಜಿ ಆಲ್-ರೌಂಡರ್ ಸಂಜಯ್ ಬಂಗಾರ್ ರವರು ರಿಷಬ್ ಪಂತ್ ರವರ ಕುರಿತಂತೆ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಹೌದು ಗೆಳೆಯರೇ ನಿಮಗೆ ತಿಳಿದಿರುವ ಹಾಗೆ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಅವರು ಅಷ್ಟೊಂದು ಹೇಳಿಕೊಳ್ಳುವಂಥ ಪ್ರದರ್ಶನವನ್ನು ನೀಡಲಿಲ್ಲ ಹಾಗೂ ಇದಕ್ಕೆ ಅವರ ಬ್ಯಾಟಿಂಗ್ ಕ್ರಮಾಂಕ ಕೂಡ ಕಾರಣವಾಗಿತ್ತು ಎಂಬುದಾಗಿ ಸಂಜಯ್ ರವರು ಹೇಳಿದ್ದಾರೆ. ಕೇವಲ ಇಷ್ಟು ಮಾತ್ರವಲ್ಲದೆ ಅವರನ್ನು ಆರಂಭಿಕ ಆಟಗಾರನಾಗಿ ಆಡಿಸುವುದು ಉತ್ತಮ ಆಯ್ಕೆ ಎಂಬುದಾಗಿ ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಅವರು ಹಲವಾರು ವ್ಯಾಲಿಡ್ ಕಾರಣಗಳನ್ನು ಕೂಡ ನೀಡಿದ್ದಾರೆ. ಹೌದು ಗೆಳೆಯರೇ ಅದೇನೆಂದರೆ ಭಾರತ ಮೊದಲಿನಿಂದಲೂ ಕೂಡ ಆರಂಭಿಕ ಜೋಡಿಯನ್ನು ಲೆಫ್ಟ್ ಹಾಗೂ ರೈಟ್ ಕಾಂಬಿನೇಷನ್ನಲ್ಲಿ ಪ್ರಾರಂಭಿಸುತ್ತದೆ. ಹೀಗಾಗಿ ಲೆಫ್ಟ್ ಕಾಂಬಿನೇಷನ್ನಲ್ಲಿ ರಿಷಬ್ ಪಂತ್ ರವರು ದೀರ್ಘಕಾಲದವರೆಗೆ ಭಾರತೀಯ ಕ್ರಿಕೆಟ್ ತಂಡಕ್ಕೆ ನೆರವಾಗಲಿದ್ದಾರೆ ಎಂಬುದಾಗಿ ಹೇಳಿದ್ದಾರೆ. ಸಚಿನ್ ತೆಂಡೂಲ್ಕರ್ ಅವರು ಕೂಡ ಮೊದಲು ರನ್ ಗಳಿಸಲು ಪರದಾಡುತ್ತಿದ್ದರು ನಂತರ ಅವರನ್ನು ಆರಂಭಿಕ ಆಟಗಾರನಾಗಿ ಆಯ್ಕೆ ಮಾಡಿದ ನಂತರ ದಾಖಲೆಗಳ ಮೇಲೆ ದಾಖಲೆ ಮಾಡಿದ್ದಾರೆ ಎಂಬುದಾಗಿ ಸಂಜಯ್ ಬಂಗಾರ್ ಹೇಳಿದ್ದಾರೆ.

ಆಸ್ಟ್ರೇಲಿಯಾದ ಆಡಮ್ ಗಿಲ್ಕ್ರಿಸ್ಟ್ ಕೂಡ ಇದೇ ರೀತಿ ಮಾಡಿ ಯಶಸ್ಸನ್ನು ಕಂಡಿದ್ದರು. ಹೀಗಾಗಿ ರಿಷಬ್ ಪಂತ್ ರವರನ್ನು ಆರಂಭಿಕ ಆಟಗಾರನಾಗಿ ಆಯ್ಕೆ ಮಾಡಿದರೆ ಪವರ್ ಪ್ಲೇ ಓವರ್ ನಲ್ಲಿ ಅವರು ನಿಸ್ಸಂಕೋಚವಾಗಿ ಅಗ್ರೆಸ್ಸಿವ್ ಬ್ಯಾಟಿಂಗ್ ಮಾಡಬಹುದು ಎಂಬುದಾಗಿ ಸಂಜಯ್ ಬಂಗಾರ್ ರವರ ಮಾತಿಗೆ ಇರ್ಫಾನ್ ಪಠಾಣ್ ಕೂಡ ಒಪ್ಪಿಗೆ ನೀಡಿದ್ದಾರೆ. ರಿಷಬ್ ಪಂತ್ ಅವರು ಹಲವಾರು ಸಮಯಗಳಿಂದ ಮಧ್ಯಮ ಕ್ರಮಾಂಕದಲ್ಲಿ ವಿಫಲರಾಗುತ್ತಿರುವುದು ಈ ಬದಲಾವಣೆ ಅವರಲ್ಲಿ ಖಂಡಿತವಾಗಿ ಸಕರಾತ್ಮಕ ನಿಲುವನ್ನು ತರಲಿದೆ ಎಂಬುದಾಗಿ ಎಲ್ಲರೂ ನಂಬಿದ್ದಾರೆ.