ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಒಂದೆರಡು ಪಂದ್ಯ ಗೆಲ್ಲಸಿದ ತಕ್ಷಣ ಆಯ್ಕೆಯಾಗಿಲ್ಲ ಎಂದು ನೇರವಾಗಿ ಅಸಮಾಧಾನ ವ್ಯಕ್ತಪಡಿಸಿದ ಭಾರತದ ಯುವ ಆಲ್ ರೌಂಡರ್ ಗೆ ಗ್ರೇಮ್ ಸ್ಮಿಥ್ ಹೇಳಿದ್ದೇನು ಗೊತ್ತೇ??

2,669

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಸೌತ್ಆಫ್ರಿಕ ವಿರುದ್ಧ ಟಿ-20 ಸರಣಿ ಮುಗಿದಿದ್ದು ಭಾರತೀಯ ಕ್ರಿಕೆಟ್ ತಂಡ ಇನ್ನೇನು ಮತ್ತೊಂದು ಅಂತರಾಷ್ಟ್ರೀಯ ಸರಣಿಗೆ ಸಿದ್ಧವಾಗಿದೆ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೇ ಮುಂಬರುವ ಐರ್ಲೆಂಡ್ ವಿರುದ್ಧದ ಎರಡು ಟಿ20 ಪಂದ್ಯಗಳ ಸರಣಿಗೆ ಭಾರತೀಯ ಕ್ರಿಕೆಟ್ ತಂಡ ಐರ್ಲೆಂಡ್ ಗೆ ಪ್ರಯಾಣ ಬೆಳೆಸಲಿದೆ. ಈ ಸರಣಿಯಲ್ಲಿ ಕೂಡ ಹಿರಿಯ ಆಟಗಾರರಿಗೆ ವಿಶ್ರಾಂತಿಯನ್ನು ನೀಡಲಾಗಿದ್ದು ಯುವ ಆಟಗಾರರ ತಂಡವನ್ನು ಹಾರ್ದಿಕ್ ಪಾಂಡ್ಯ ರವರು ನಾಯಕನಾಗಿ ಮುನ್ನಡೆಸಲಿದ್ದಾರೆ. ಇನ್ನು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈ ಬಾರಿ ಐಪಿಎಲ್ ನಲ್ಲಿ ಗುಜರಾತ್ ಟೈಟನ್ಸ್ ತಂಡದ ಪರವಾಗಿ ರಾಹುಲ್ ತೆವಾಡಿಯ ರವರು ಅತ್ಯದ್ಭುತವಾಗಿ ಪ್ರದರ್ಶನವನ್ನು ನೀಡಿದ್ದರು.

ನಿಮಗೆ ತಿಳಿದಿರುವ ಹಾಗೆ ಕೊನೆಯ 2 ಎಸೆತಗಳಲ್ಲಿ 2 ಸಿಕ್ಸರ್ ಗಳು ಬೇಕಾಗಿದ್ದರು ರಾಹುಲ್ ತೆವಾಟಿಯ ರವರು ತಂಡವನ್ನು ಗೆಲ್ಲಿಸಿದ್ದು ಕೂಡ ನಿಮಗೆ ತಿಳಿದಿದೆ. ಆದರೆ ಐರ್ಲೆಂಡ್ ಸರಣಿಗೆ ರಾಹುಲ್ ತೆವಾಟಿಯ ರವರನ್ನು ತಂಡಕ್ಕೆ ಆಯ್ಕೆ ಮಾಡಿರಲಿಲ್ಲ ಈ ಹಿನ್ನೆಲೆಯಲ್ಲಿ ಅವರು ಟ್ವಿಟರ್ನಲ್ಲಿ ನಿರೀಕ್ಷೆಗಳು ಪ್ರತಿಬಾರಿ ಬೇಸರವನ್ನು ಉಂಟುಮಾಡುತ್ತವೆ ಎಂಬುದಾಗಿ ಈ ವಿಚಾರಕ್ಕೆ ಪರೋಕ್ಷವಾಗಿ ಟ್ವೀಟ್ ಮಾಡುವ ಮೂಲಕ ಅಸಮಾಧಾನವನ್ನು ಹೊರಹಾಕಿದ್ದರು. ಇದರ ಬೆನ್ನಲ್ಲೇ ದಕ್ಷಿಣ ಆಫ್ರಿಕಾದ ಮಾಜಿ ಕಪ್ತಾನ ಆಗಿರುವ ಗ್ರೇಮ್ ಸ್ಮಿತ್ ರವರು ರಿಪ್ಲೈ ನೀಡುತ್ತಾ ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಹಾಗೂ ಕ್ಯಾಪ್ಟನ್ ರೋಹಿತ್ ಶರ್ಮ ಇಬ್ಬರೂ ಕೂಡ ಆಸ್ಟ್ರೇಲಿಯಾದ ವಿಶ್ವಕಪ್ ಗೆ ತಯಾರಿ ನಡೆಸುವಂತಹ ತಂಡವನ್ನು ಆಯ್ಕೆ ಮಾಡುತ್ತಿದ್ದಾರೆ.

ಈ ಕಾರಣಕ್ಕಾಗಿ ಯಾವುದಾದರೂ ಆಟಗಾರರು ಆಯ್ಕೆ ಆಗಿಲ್ಲ ಅಂದ್ರೆ ಮತ್ತಷ್ಟು ಅಭ್ಯಾಸವನ್ನು ಬಲಗೊಳಿಸಿ ಅದನ್ನು ಬಿಟ್ಟು ಟ್ವಿಟರ್ನಲ್ಲಿ ತಮ್ಮ ದುಃಖವನ್ನು ತೋಡಿಕೊಳ್ಳಬೇಡಿ ಎಂಬುದಾಗಿ ಹೇಳಿದ್ದಾರೆ. ಹೌದು ಗೆಳೆಯರೆ ಸ್ಮಿತ್ ಟ್ವಿಟರ್ ಬಿಟ್ಟು ಆಟದ ಕಡೆಗೆ ಗಮನ ಕೊಡಿ ಎಂಬುದಾಗಿ ರಾಹುಲ್ ತೆವಾಟಿಯ ಹಲವರಿಗೆ ಪರೋಕ್ಷವಾಗಿಯೇ ಕುಟುಕಿದ್ದಾರೆ. ಭಾರತ ದೇಶದಲ್ಲಿ ಹಲವಾರು ಪ್ರತಿಭಾನ್ವಿತ ಆಟಗಾರರಿದ್ದಾರೆ ಆದರೆ ಅವರನ್ನು ಆಯ್ಕೆ ಮಾಡುವುದಕ್ಕೆ ಅವರಿಗೆ ಎಲ್ಲರಿಗಿಂತ ವಿಶೇಷವಾದ ಸ್ಕಿಲ್ಸ್ ಇರಬೇಕಾಗುತ್ತದೆ ಈಗ ನೀವು ಆಯ್ಕೆಯಾಗುತ್ತಿದ್ದರು ಮುಂದೊಂದು ದಿನ ನಿಮ್ಮನ್ನು ಆಯ್ಕೆ ಮಾಡದೇ ಇರುವುದಕ್ಕೆ ಕಾರಣವನ್ನು ನೀಡಲೇ ಬೇಡಿ ಅಂತಹ ಪರಿಸ್ಥಿತಿ ನಿರ್ಮಾಣ ಮಾಡಿಕೊಳ್ಳಿ ಎಂಬುದಾಗಿ ಹೇಳಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಬಹು ಸಮಯಗಳ ನಂತರ ರಾಹುಲ್ ತ್ರಿಪಾಠಿ ಕೂಡ ಐರ್ಲೆಂಡ್ ವಿರುದ್ಧದ ಭಾರತೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ.

Get real time updates directly on you device, subscribe now.