ನಿಸ್ವಾರ್ಥ ಸಮಾಜ ಸೇವಕಿ ಸುಮನಾ ಫೌಂಡೇಶನ್ ಸಂಸ್ಥಾಪಕಿ ಸುನೀತಾ ಮಂಜುನಾಥ್. ಜನರ ಒಳಿತಿಗಾಗಿ ಬದುಕುವುದೇ ಇವರ ಜೀವನದ ಉದ್ದೇಶ.

ನಿಸ್ವಾರ್ಥ ಸಮಾಜ ಸೇವಕಿ ಸುಮನಾ ಫೌಂಡೇಶನ್ ಸಂಸ್ಥಾಪಕಿ ಸುನೀತಾ ಮಂಜುನಾಥ್. ಜನರ ಒಳಿತಿಗಾಗಿ ಬದುಕುವುದೇ ಇವರ ಜೀವನದ ಉದ್ದೇಶ.

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರಿಗೂ ತಮ್ಮದೇ ಆದ ಜೀವನವಿರುತ್ತದೆ. ಚೆನ್ನಾಗಿ ಸಂಪಾದನೆ ಮಾಡಬೇಕು ಮನೆ ಕಟ್ಟಿಸಬೇಕು ನಮ್ಮ‌ ಸಂಸಾರವನ್ನು ತಾವು ನೋಡಿಕೊಳ್ಳ‌ಬೇಕು ಎಂಬುದು ಎಲ್ಲರ ಆಸೆಯಾಗಿರುತ್ತದೆ. ತಾವಾಯಿತು ತಮ್ಮ ಕೆಲಸವಾಯಿತು ಎಂದು ಜೀವಿಸುವವರೆ ಹೆಚ್ಚು. ಹೀಗಿರುವಾಗ ಇಲ್ಲೊಬ್ಬ ದಿಟ್ಟ ಮಹಿಳೆ ತಾನು ಈ ಸಮಾಜಕ್ಕೆ ಏನಾದರೂ ಒಳಿತು ಮಾಡಬೇಕು ಎಂಬ ನಿರ್ಧಾರ ಮಾಡಿ ಅದೆಷ್ಟೋ ಜನರ ಬಾಳಿಗೆ ದಾರಿ ದೀಪವಾಗಿದ್ದಾರೆ.

ಇವರು ಮಾಡುತ್ತಿರುವ ಸಾಮಾಜಿಕ‌ ಕೆಲಸಗಳು ಸಮಾಜಕ್ಕೆ ಇವರು ನೀಡಿರುವ ಹಾಗೂ ನೀಡುತ್ತಿರುವ ಕೊಡುಗೆಗಳು ಅಷ್ಟಿಷ್ಟಲ್ಲ. ಹೌದು ಹೆಣ್ಣು ಮನಸ್ಸು ಮಾಡಿದರೆ ಏನಾದರೂ ಸಾಧಿಸಬಲ್ಲಳು ಎಂಬುದಕ್ಕೆ ಇವರೇ ಉದಾಹರಣೆ. ಇಷ್ಟಕ್ಕೂ ಈ ಮಹಿಳೆ ಯಾರು ? ಇವರು ಮಾಡಿರುವ ಕೆಲಸಗಳೇನು ಎಂದು ನೀವು ಯೋಚಿಸುತ್ತಿರಬಹುದು. ಅದಕ್ಕೆ ಉತ್ತರ ಇವರು ಬೇರಾರೂ ಅಲ್ಲ ಸುಮನಾ ಫೌಂಡೇಶನ್ ನ ಸಂಸ್ಥಾಪಕಿ ಸುನೀತಾ ಮಂಜುನಾಥ್.

ಇವರ ಬಗ್ಗೆ ಬಹಳ ಜನರಿಗೆ ಈಗಾಗಲೇ‌ ತಿಳಿದಿರಬಹುದು. ಚಿಕ್ಕಂದಿನಿಂದಲೇ ಮುಗ್ಧ ಮನಸ್ಸಿನವರಾದ ಸುನೀತಾ ಮಂಜುನಾಥ್ ಅವರು ಸಮಾಜಕ್ಕೆ ತಾನು ಏನಾದರೂ ಕೊಡುಗೆಯನ್ನು ನೀಡಬೇಕು ಎಲ್ಲರಿಗು ಒಳಿತು ಮಾಡಬೇಕು ಎಂದು‌ ಕನಸು ಕಂಡವರು. ಅವರ ಕನಸಿನಂತೆಯೇ ಶುರುವಾದ ಸಂಸ್ಥೆಯೇ ಸುಮನಾ ಫೌಂಡೇಶನ್.

ಈ ಫೌಂಡೇಶನ್ ಮೂಲಕ ಇವರು ಮಾಡುತ್ತಿರುವ ಒಳ್ಳೆಯ ಕೆಲಸಗಳು ಅಷ್ಟಿಷ್ಟಲ್ಲ. ಈ ಸಂಸ್ಥೆಯ ಮೂಲಕ ‘ಹಸಿದವರಿಗೆ ಗೊತ್ತು ಅನ್ನದ ಬೆಲೆ‌’ ಎಂಬ ಹೆಸರಿನಲ್ಲಿ ಪ್ರತಿದಿನ ಹಸಿದ ಜನರಿಗೆ ಅನ್ನದಾಸೋಹ ಸಹ‌ ನಡೆಸುತ್ತಿದ್ದಾರೆ. ಸಮಾಜಿಕ ಕಾರ್ಯಗಳಲ್ಲಿ ಅಲ್ಲದೆ ರಾಜಕೀಯದಲ್ಲೂ ಸಹ ಸಕ್ರಿಯರಾಗಿರುವ ಸುನೀತಾ ಮಂಜುನಾಥ್ ಅವರು ಅಲ್ಲಿಯೂ ಸಹ ಯೋಚಿಸುತ್ತಿರುವುದು ಸಮಾಜದ ಬಗ್ಗೆಯೇ.

ತನ್ನಿಂದಾದಷ್ಟು ಒಳ್ಳೆಯ ಕಾರ್ಯಗಳನ್ನು ಮಾಡಬೇಕು ಎಂದು ನಿರ್ಧರಿಸಿರುವ ಸುನೀತಾ ಅವರು ಸುಮನಾ ಫೌಂಡೇಶನ್ ತಂಡದ ಮೂಲಕ ಇನ್ನೂ ಹೆಚ್ಚೆಚ್ಚು ಕೆಲಸಗಳನ್ನು ಮಾಡುತ್ತಿದ್ದಾರೆ. ಅನ್ನದಾಸೋಹ ಅಷ್ಟೇ ಅಲ್ಲದೆ ಕನ್ನಡ ಉಳಿಸಿ ಕನ್ನಡ ಬೆಳೆಸಿ ಎಂಬುದರ ಅಡಿಯಲ್ಲಿ ಕನ್ನಡ ಶಾಲೆಗಳ ನವೀಕರಣಗೊಳಿಸಿ ಕನ್ನಡ ಶಾಲೆಗಳ ಉದ್ಧಾರಕ್ಕೆ ನಿಂತಿದ್ದಾರೆ.

ಸರ್ಕಾರ ಮಾಡಬೇಕಾದ ಕೆಲಸವನ್ನು ಸುನೀತಾ ಅವರು ಮಾಡುತ್ತಿರುವುದು ಪ್ರಶಂಸಾರ್ಹ. ಇಷ್ಟೇ ಅಲ್ಲದೆ ಕಷ್ಟ ಎಂದು ಬಂದವರಿಗೆ ನೆರವಿನ ಹಸ್ತ ಚಾಚುವುದರಲ್ಲಿ ಎರಡು ಮಾತಿಲ್ಲ. ಅದೆಷ್ಟೋ ರುದ್ರಭೂಮಿಗಳ ಉದ್ಧಾರಕ್ಕೂ ಕಾರಣವಾಗಿರುವ ಇವರು ಮಾಡಿರುವ ರಕ್ತ ದಾನ ಶಿಬಿರ, ನೇತ್ರ ತಪಾಸಣಾ ಶಿಬಿರಗಳಿಗೆ ಲೆಕ್ಕವಿಲ್ಲ.

ಇನ್ನು ಸಮಾಜದ ಉದ್ಧಾರಕ್ಕೆ ಪಣ ತೊಟ್ಟಿರುವ ಇವರು ಮಹಿಳಾ ಸಬಲೀಕರಣದ ಅಡಿಯಲ್ಲಿ ಮಹಿಳೆಯರಿಗೆ ಕರಕುಶಲ ತರಬೇತಿ ನೀಡಿ ಉಚಿತ ಹೊಲಿಗೆ ಯಂತ್ರಗಳನ್ನೂ ಸಹ‌ ನೀಡಿ ಅವರ ಬಾಳಿಗೆ ಬೆಳಕಾಗಿದ್ದಾರೆ. ಇವರ ಕಾರ್ಯಗಳು ಇಲ್ಲಿಗೇ ನಿಂತಿಲ್ಲ. ಸುಮನಾ ಸೂರು ಎಂಬುದರ ಅಡಿಯಲ್ಲಿ‌ ಹಲವರ ಸಹಾಯ ಪಡೆದು ಅದೆಷ್ಟೋ ಅವಶ್ಯಕತೆ ಇರುವ ಜನರಿಗೆ ಮನೆಗಳನ್ನೂ ಸಹ ಕಟ್ಟಿಸಿ ಅವರಿಗೆ ಸೂರುಗಳನ್ನು ಮಾಡಿಕೊಟ್ಟಿದ್ದಾರೆ.

ಬಸ್ ತಂಗುದಾಣಗಳ‌ ನವೀಕರಣ, ಅಂಗನವಾಡಿಗಳ ಉದ್ಧಾರ‌‌ ಹೀಗೆ ‌ಇವರ‌ ಕಾರ್ಯಗಳ ಪಟ್ಟು‌ ನಿಲ್ಲುವುದೇ ಇಲ್ಲ. ತಾವಾಯಿತು ತಮ್ಮ‌ ಕೆಲಸವಾಯಿತು ಎಂದಿರುವ ಇಂತಹ ಕಾಲದಲ್ಲಿ ಸಮಾಜಕ್ಕೆ ಎಷ್ಟೋ ಒಳ್ಳೆಯ ಕೆಲಸಗಳನ್ನು ಮಾಡಿರುವ ಹಾಗೂ ಮಾಡುತ್ತಿರುವ ಇವರ ಸಾಧನೆ‌ ಬಹಳ ದೊಡ್ಡದು.

ತಮಗೇ ಎಂತಹ ಸ್ಥಿತಿ ಇದ್ದರೂ ಸಹ ಕಷ್ಟ ಎಂದರೆ ಸಾಕು ಅಲ್ಲಿ ಸುನೀತಾ ಅವರು ಇರುತ್ತಾರೆ. ಇಂತಹ ಜನಸ್ನೇಹಿ ಸಾಮಾಜಿಕ ಕಾರ್ಯಕರ್ತೆಗೆ ಮನಸೋಲದವರಿಲ್ಲ ಎಲ್ಲರ‌ ಮನೆ‌ ಮಗಳಾಗಿ ಎಲ್ಲರ ಕಷ್ಟಗಳನ್ನು ಪರಿಹರಿಸಿ ಅದೆಷ್ಟೋ ಜನರ ಪಾಲಿಗೆ ದಾರಿ ದೀಪವಾಗಿರುವ ಸುನೀತಾ ಅವರು ಉತ್ತಮ ನಾಯಕಿ ಎಂಬುದರಲ್ಲಿ‌ ಅನುಮಾನವೇ ಇಲ್ಲ. ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಡಾ ಸುನಿತಾ ಮಂಜುನಾಥ್ ಅವರು ಇನ್ನು ದೊಡ್ಡ ಮಟ್ಟಿಗೆ ಬೆಳೆಯಲಿ ಎಂದು ಆಶೀಸೋಣ.