ಭಾರತದ ಆ ಒಬ್ಬ ಆಟಗಾರನಿಗೆ ಬೌಲಿಂಗ್ ಮಾಡುವುದು ಕಷ್ಟ ಎಂದು ಒಪ್ಪಿಕೊಂಡ ಸೌತ್ ಆಫ್ರಿಕಾ ನಾಯಕ: ಆಯ್ಕೆ ಮಾಡಿದ ಘಟಾನುಘಟಿ ಬ್ಯಾಟ್ಸಮನ್ ಯಾರು ಗೊತ್ತೇ?

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಐಪಿಎಲ್ ಮುಗಿದ ನಂತರ ಈಗಾಗಲೇ ಸೌತ್ ಆಫ್ರಿಕಾ ವಿರುದ್ಧದ ಐದು ಟಿ20 ಪಂದ್ಯಗಳ ಸರಣಿಯನ್ನು ಹಾಡುವ ಮೂಲಕ ಅಂತಾರಾಷ್ಟ್ರೀಯ ಪಂದ್ಯಗಳ ಮುಖಮಾಡಿರುವ ಭಾರತೀಯ ಕ್ರಿಕೆಟ್ ತಂಡ ಸಮಾಧಾನಕರ ಪ್ರದರ್ಶನವನ್ನು ಅನುಭವಿ ಆಟಗಾರರು ಅನುಪಸ್ಥಿತಿಯ ನಡುವೆಯೂ ಕೂಡ ನೀಡಿದೆ ಎಂದು ಹೇಳಬಹುದಾಗಿದೆ. ಇನ್ನು ತೆಂಬ ಬವುಮ ನಾಯಕತ್ವದಲ್ಲಿ ಸೌತ್ ಆಫ್ರಿಕಾ ತಂಡ ಈ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳನ್ನು ಗೆದ್ದರೆ ರಿಷಬ್ ಪಂತ್ ರವರ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ ಉಳಿದ ಎರಡು ಪಂದ್ಯಗಳನ್ನು ಗೆದ್ದುಕೊಂಡಿತ್ತು.

ಕೊನೆಯ ಪಂದ್ಯ ನಿರ್ಣಾಯಕ ಪಂದ್ಯವಾಗಿತ್ತು ಆದರೆ ನಿನ್ನೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಳೆಬಂದ ಕಾರಣದಿಂದಾಗಿ ಪಂದ್ಯ ರದ್ದಾಗಿ ಸರಣಿ ಸಮಬಲ ಗೊಂಡು ಪ್ರಶಸ್ತಿಯನ್ನು ಎರಡು ತಂಡದವರು ಕೂಡ ಹಂಚಿಕೊಂಡಿದ್ದಾರೆ. ಈ ಸರಣಿಯಲ್ಲಿ ಬಹುತೇಕ ಎರಡು ತಂಡದವರು ಕೂಡ ಅತ್ಯುತ್ತಮ ಪ್ರದರ್ಶನವನ್ನು ಎರಡು ವಿಭಾಗದಲ್ಲಿ ನೀಡಿದ್ದಾರೆ ಹಾಗೂ ಸಾಕಷ್ಟು ತಪ್ಪುಗಳಿಂದ ಪಾಠವನ್ನು ಕೂಡ ಕಲಿತುಕೊಂಡಿದ್ದಾರೆ ಎಂದು ಹೇಳಬಹುದು. ಅದರಲ್ಲಿಯೂ ಸೌತ್ ಆಫ್ರಿಕಾದ ಸ್ಪಿನ್ ಬೌಲರ್ ಆಗಿರುವ ಕೇಶವ ಮಹಾರಾಜರು ಭಾರತೀಯ ಕ್ರಿಕೆಟ್ ತಂಡದ ಈ ಒಬ್ಬ ಬ್ಯಾಟ್ಸ್ಮನ್ ಗೆ ಬೌಲಿಂಗ್ ಮಾಡುವುದು ತುಂಬಾನೇ ಕಷ್ಟ ಎಂಬುದಾಗಿ ಬ್ಯಾಟ್ಸ್ಮನ್ ಕುರಿತಂತೆ ಹೊಗಳಿದ್ದಾರೆ. ಹಾಗಿದ್ದರೆ ಬ್ಯಾಟ್ಸ್ಮನ್ ಯಾರು ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಗೆಳೆಯರೇ ಆ ಬ್ಯಾಟ್ಸ್ಮನ್ ಇನ್ಯಾರು ಅಲ್ಲ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಬ್ಯಾಟ್ಸ್ಮನ್ ಆಗಿ ಮೂರು ವರ್ಷಗಳ ನಂತರ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವ ತಮಿಳುನಾಡು ಮೂಲದ ದಿನೇಶ್ ಕಾರ್ತಿಕ್ ರವರು. ಹೌದು ಗೆಳೆಯರೇ ಅದರಲ್ಲೂ ನಾಲ್ಕನೇ ಪಂದ್ಯದಲ್ಲಿ ಅವರು ಬಾರಿಸಿರುವ ಅರ್ಧಶತಕವಂತೂ ಅವರೊಬ್ಬ ಅತ್ಯುತ್ತಮ ಫಿನಿಶರ್ ಎನ್ನುವುದನ್ನು ಸಾಬೀತು ಪಡಿಸಿದೆ ಎಂಬುದಾಗಿ ಕೇಶವ್ ಮಹಾರಾಜ್ ರವರು ಹೇಳಿದ್ದಾರೆ. ಅವರಿಗೆ ಬೌಲಿಂಗ್ ಮಾಡುವುದು ಅತ್ಯಂತ ಕಠಿಣ ಎಂಬುದಾಗಿ ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೇ ಹೆಚ್ಚಿಕೊಳ್ಳಿ.