ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಗಂಭೀರ್ ರವರನ್ನು ದಿನೇಶ್ ಕಾರ್ತಿಕ್ ರವರು ಕುರಿತು ಮಾತನಾಡಿದಾದ ಸುನಿಲ್ ಗವಾಸ್ಕರ್ ರವರು ದಿನೇಶ್ ಬೆಂಬಲಕ್ಕೆ ನಿಂತು ಹೇಳಿದ್ದೇನು ಗೊತ್ತೇ?

64

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗು ತಿಳಿದಿರಬಹುದು ಐಪಿಎಲ್ ನಲ್ಲಿ ಅತ್ಯುತ್ತಮವಾಗಿ ಪ್ರದರ್ಶನ ನೀಡುತ್ತಿರುವ ಸಂದರ್ಭದಲ್ಲಿ ದಿನೇಶ್ ಕಾರ್ತಿಕ್ ರವರು ಇದು ನನ್ನ ಗುರಿಯಲ್ಲ ನನ್ನ ಗುರಿ ಭಾರತೀಯ ಕ್ರಿಕೆಟ್ ತಂಡಕ್ಕೆ ಜಾಗತಿಕವಾಗಿ ಅತ್ಯುತ್ತಮ ಪ್ರದರ್ಶನ ನೀಡಿ ಕಪ್ ಗೆಲ್ಲಲು ಸಹಕರಿಸುವುದು ಎಂಬುದಾಗಿ ಹೇಳಿದ್ದರು. ಅಂದರೆ ಇದೇ ವರ್ಷದ ಅಂತ್ಯದಲ್ಲಿ ಬರುವ ಆಸ್ಟ್ರೇಲಿಯದಲ್ಲಿ ನಡೆಯಲಿರುವ ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗುವ ಕನಸನ್ನು ದಿನೇಶ್ ಕಾರ್ತಿಕ್ ರವರು ವ್ಯಕ್ತಪಡಿಸಿದ್ದರು. ಇದೇ ಹಿನ್ನೆಲೆಯಲ್ಲಿ ದಿನೇಶ್ ಕಾರ್ತಿಕ್ ರವರು ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ನೀಡಿರುವ ಉತ್ತಮ ಪ್ರದರ್ಶನವನ್ನು ಪರಿಗಣಿಸಿ 3 ವರ್ಷಗಳ ನಂತರ ದಿನೇಶ್ ಕಾರ್ತಿಕ್ ರವರನ್ನು ಸೌತ್ ಆಫ್ರಿಕಾ ವಿರುದ್ಧದ ಸರಣಿಯ ಭಾರತೀಯ ಕ್ರಿಕೆಟ್ ತಂಡದಲ್ಲಿ ಭಾರತೀಯ ಸೆಲೆಕ್ಟ್ ಅರಗಳು ಆಯ್ಕೆ ಮಾಡಿದ್ದರು.

ಇನ್ನು ಕೆಲವು ಪಂದ್ಯಗಳಲ್ಲಿ ಮುಗ್ಗರಿಸಿದರು ಕೂಡ ಸಿಕ್ಕಿರುವ ಅವಕಾಶವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಂಡು ನಾಲ್ಕನೆ ಟಿ-ಟ್ವೆಂಟಿ ಪಂದ್ಯದಲ್ಲಿ ಕೇವಲ 27 ಎಸೆತಗಳಲ್ಲಿ ಬರೋಬ್ಬರಿ 55 ರನ್ನುಗಳನ್ನು ಬಾರಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದರು. ಆದರೆ ಗಂಭೀರ್ ಅವರು ಮಾತ್ರ ದಿನೇಶ್ ಕಾರ್ತಿಕ್ ರವರನ್ನು ವಿಶ್ವ ಕಪ್ ತಂಡಕ್ಕೆ ಆಯ್ಕೆ ಮಾಡುವುದು ಅಷ್ಟೊಂದು ಸಮಂಜಸವಲ್ಲ. ಅವರು ಹೆಚ್ಚಾಗಿ ಬ್ಯಾಟಿಂಗ್ ಕೂಡ ಮಾಡಿಲ್ಲ ಮತ್ತು ವಿಶ್ವಕಪ್ ಆರಂಭವಾಗುವವರೆಗೂ ಕೂಡ ಕನ್ಸಿಸ್ಟೆಂಟ್ ಆಗಿ ಬ್ಯಾಟ್ ಮಾಡಬೇಕು ಇಲ್ಲದಿದ್ದರೆ ಅವರ ಸ್ಥಾನಕ್ಕೆ ರಿಷಬ್ ಪಂತ್ ದೀಪಕ್ ಕೂಡ ಹಾಗೂ ರಾಹುಲ್ ರವರಂತಹ ಸ್ಪರ್ಧಿಗಳು ಇದ್ದಾರೆ. ನಾನು ಅವರ ಬದಲಿಗೆ 7ನೇ ಕ್ರಮಾಂಕದಲ್ಲಿ ಅಕ್ಷರ ಪಟೇಲ್ ಅವರನ್ನು ತಂಡದಲ್ಲಿ ಆಯ್ಕೆ ಮಾಡುತ್ತೇನೆ ಏಕೆಂದರೆ ಕೇವಲ ಬ್ಯಾಟಿಂಗ್ ಮಾತ್ರವಲ್ಲದೆ ಬೌಲಿಂಗ್ನಲ್ಲಿ ಕೂಡ ಅವರು ಆಪ್ಷನ್ ನೀಡುತ್ತಾರೆ ಎಂಬುದಾಗಿ ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಕ್ರಿಕೆಟಿಗ ಲಿಟಲ್ ಮಾಸ್ಟರ್ ಸುನೀಲ್ ಗಾವಸ್ಕರ್ ಅವರು ಗೌತಮ್ ಗಂಭೀರ್ ಅವರ ಹೆಸರನ್ನು ಎಲ್ಲಿಯೂ ಕೂಡ ಮೆನ್ಶನ್ ಮಾಡದೆ ಪರೋಕ್ಷವಾಗಿಯೇ ನೀವು ಹೇಗೆ ಅವರು ವಿಶ್ವಕಪ್ ತಂಡದಲ್ಲಿ ಆಡುವುದಿಲ್ಲ ಎಂಬುದಾಗಿ ಮುಂಚೆಯೇ ಲೆಕ್ಕಚಾರ ಮಾಡುತ್ತೀರಿ. ತಂಡಕ್ಕಾಗಿ ಈಗ ಅವರು ಆಡುತ್ತಿರುವ ಆಟವನ್ನು ನೋಡಿದರೆ ನಿಜಕ್ಕೂ ಕೂಡ ಅವರು ವಿಶ್ವಕಪ್ ತಂಡದಲ್ಲಿ ಆಯ್ಕೆಯಾಗಲು ಅತ್ಯಂತ ಅರ್ಹರು ಎಂಬುದಾಗಿ ಹೇಳಿದ್ದಾರೆ. ಇಲ್ಲಿ ಆಟವನ್ನು ನೋಡಿ ಆಯ್ಕೆ ಮಾಡಬೇಕು ಬದಲಾಗಿ ಅವರ ರೆಪ್ಯುಟೇಶನ್ ನೋಡಿ ಅಲ್ಲ ಎಂಬುದಾಗಿ ಹೇಳಿದ್ದಾರೆ.

Get real time updates directly on you device, subscribe now.