ಅಂದು ಹಾರ್ದಿಕ್ ಜೊತೆ ಬ್ಯಾಟಿಂಗ್ ಮಾಡುವಾಗ ನಿಜಕ್ಕೂ ನಡೆದದ್ದು ಏನು ಗೊತ್ತೇ?? ಸತ್ಯ ಬಿಚ್ಚಿಟ್ಟ ದಿನೇಶ್ ಹೇಳಿದ್ದೇನು ಗೊತ್ತೇ?

ಅಂದು ಹಾರ್ದಿಕ್ ಜೊತೆ ಬ್ಯಾಟಿಂಗ್ ಮಾಡುವಾಗ ನಿಜಕ್ಕೂ ನಡೆದದ್ದು ಏನು ಗೊತ್ತೇ?? ಸತ್ಯ ಬಿಚ್ಚಿಟ್ಟ ದಿನೇಶ್ ಹೇಳಿದ್ದೇನು ಗೊತ್ತೇ?

ನಮಸ್ಕಾರ ಸ್ನೇಹಿತರೆ ಸೌರಾಷ್ಟ್ರದ ಕ್ರೀಡಾಂಗಣದಲ್ಲಿ ನಡೆದಿರುವ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡದ ಆರಂಭಿಕ ಆಟಗಾರರ ವೈಫಲ್ಯದ ನಂತರವೂ ಕೂಡ ದಿನೇಶ್ ಕಾರ್ತಿಕ್ ಹಾಗೂ ಹಾರ್ದಿಕ್ ಪಾಂಡ್ಯ ರವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಭಾರತೀಯ ಕ್ರಿಕೆಟ್ ತಂಡ ಎರಡನೇ ಗೆಲುವನ್ನು ಸಾಧಿಸಲು ಯಶಸ್ವಿಯಾಗಿದೆ. ಈಗಾಗಲೇ ಸೌತ್ ಆಫ್ರಿಕಾ ವಿರುದ್ಧದ ಟಿ20 ಪಂದ್ಯಗಳ ಸರಣಿಯಲ್ಲಿ ಸೌತ್ ಆಫ್ರಿಕಾ ಮೊದಲ ಎರಡು ಪಂದ್ಯಗಳನ್ನು ಗೆದ್ದರೆ ಭಾರತೀಯ ಕ್ರಿಕೆಟ್ ತಂಡ ನಂತರದ ಎರಡು ಪಂದ್ಯಗಳನ್ನು ಗೆದ್ದುಕೊಂಡಿದೆ.

ಕೊನೆಯ ನಿರ್ಣಾಯಕ ಪಂದ್ಯವನ್ನು ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಈಗಾಗಲೇ ಕ್ರಿಕೆಟ್ ಅಭಿಮಾನಿಗಳಲ್ಲಿ ಗರಿಗೆದರಿದೆ. ನಿಜಕ್ಕೂ ಭಾರತೀಯ ಕ್ರಿಕೆಟ್ ತಂಡದ ಈ ಕಂಬ್ಯಾಕ್ ಎನ್ನುವುದು ಸಾಕಷ್ಟು ಮಹತ್ವದ ಸಂದರ್ಭದಲ್ಲಿ ಬಂದಿರುವುದು ಸಂತೋಷದಾಯಕವಾಗಿದೆ. ಅದರಲ್ಲೂ ಕೊನೆಯ ಪಂದ್ಯದಲ್ಲಿ ಅತಿವೇಗವಾಗಿ ಅರ್ಧ ಶತಕ ಬಾರಿಸುವ ಮೂಲಕ ವಯಸ್ಸಿನದು ಕೇವಲ ಸಂಖ್ಯೆ ಮಾತ್ರ ಎನ್ನುವುದನ್ನು ದಿನೇಶ್ ಕಾರ್ತಿಕ್ ರವರು ನಿರೂಪಿಸಿದ್ದಾರೆ. ಈ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ದಿನೇಶ್ ಕಾರ್ತಿಕ್ ರವರು ಪಡೆದುಕೊಂಡಿದ್ದು, ಈ ಪಂದ್ಯದಲ್ಲಿ ಆವೇಶ್ ಖಾನ್ ಹಾಗೂ ಯಜುವೇಂದ್ರ ಚಹಾಲ್ ಅವರ ಬೌಲಿಂಗ್ ಮ್ಯಾಜಿಕ್ಕನ್ನು ಮರೆಯುವ ಹಾಗಿಲ್ಲ.

ಇನ್ನು ಪಂದ್ಯ ಮುಗಿದ ಬಳಿಕ ತನ್ನ ಬ್ಯಾಟಿಂಗ್ ಶ್ರೇಯವನ್ನು ರಾಹುಲ್ ದ್ರಾವಿಡ್ ರವರಿಗೆ ಅರ್ಪಿಸಿರುವ ದಿನೇಶ್ ಕಾರ್ತಿಕ್ ಅವರು ನಾನು ಪ್ರೀತಿಗೆ ಬಂದಾಗ ಹಾರ್ದಿಕ್ ಪಾಂಡ್ಯ ಅವರು ನಿಮ್ಮ ಸಮಯವನ್ನು ತೆಗೆದುಕೊಂಡು ಆಟವಾಡಿ ಎಂಬುದಾಗಿ ಧೈರ್ಯ ತುಂಬಿದ್ದನ್ನು ಕೂಡ ಈ ಸಂದರ್ಭದಲ್ಲಿ ದಿನೇಶ್ ಕಾರ್ತಿಕ್ ನೆನಪಿಸಿಕೊಳ್ಳುತ್ತಾರೆ. ಕೇವಲ ಇಷ್ಟು ಮಾತ್ರವಲ್ಲದೆ ಕೊನೆಯ ನಿರ್ಣಾಯಕ ಟಿ-ಟ್ವೆಂಟಿ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಸ್ಟೇಡಿಯಂನಲ್ಲಿ ನಡೆಯುವ ಹಿನ್ನೆಲೆಯಲ್ಲಿ ಇದು ನನ್ನ ಹೋಂ ಗ್ರೌಂಡ್ ಐಪಿಎಲ್ನಲ್ಲಿ ನಾನು ಇಲ್ಲಿ ಆಡದೇ ಇರಬಹುದು ಆದರೆ ಹಲವಾರು ಬಾರಿ ಈ ಹಿಂದೆ ಹಾಡಿದ್ದೇನೆ ಕೊನೆಯ ಪಂದ್ಯದಲ್ಲಿ ಎಲ್ಲಿ ಮಿಂಚುವ ನಿರೀಕ್ಷೆಯಲ್ಲಿದ್ದೇನೆ ಎಂಬುದಾಗಿ ಹೇಳಿದ್ದಾರೆ.