ರಿಷಬ್ ಪಂತ್ ಬದಲು ಟಿ೨೦ ವಿಶ್ವಕಪ್ ಗೆ ಈತನನ್ನು ಆಯ್ಕೆ ಮಾಡಿ ಎಂದ ಡೇಲ್ ಸ್ಟೈನ್. ಯಾರಂತೆ ಗೊತ್ತೇ?? ಆರ್ಸಿಬಿ ಫ್ಯಾನ್ಸ್ ಫುಲ್ ಖುಶ್ ಆಗಿದ್ದು ಯಾಕೆ ಗೊತ್ತೇ?

ರಿಷಬ್ ಪಂತ್ ಬದಲು ಟಿ೨೦ ವಿಶ್ವಕಪ್ ಗೆ ಈತನನ್ನು ಆಯ್ಕೆ ಮಾಡಿ ಎಂದ ಡೇಲ್ ಸ್ಟೈನ್. ಯಾರಂತೆ ಗೊತ್ತೇ?? ಆರ್ಸಿಬಿ ಫ್ಯಾನ್ಸ್ ಫುಲ್ ಖುಶ್ ಆಗಿದ್ದು ಯಾಕೆ ಗೊತ್ತೇ?

ನಮಸ್ಕಾರ ಸ್ನೇಹಿತರೆ ರಿಷಬ್ ಪಂತ್ ರವರ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ ಮೊದಲ ಎರಡು ಪಂದ್ಯಗಳನ್ನು ಸೋಲುವ ಮೂಲಕ ಹಿನ್ನಡೆಯನ್ನು ಅನುಭವಿಸಿತು. ಆದರೆ ನಂತರದ ಎರಡು ಪಂದ್ಯಗಳನ್ನು ಈಗ ಗೆಲ್ಲುವ ಮೂಲಕ ಮತ್ತೆ ಸರಣಿಯನ್ನು ಗೆಲ್ಲುವ ಭರವಸೆಯನ್ನು ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳಲ್ಲಿ ಮೂಡಿಸಿದೆ. ಇನ್ನು ಈಗಾಗಲೇ ಈ ಬಾರಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20ವಿಶ್ವಕಪ್ ಗೆ ಭಾರತೀಯ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡುವ ಪ್ರಕ್ರಿಯೆ ತೆರೆಮರೆಯಲ್ಲಿ ನಡೆಯುತ್ತಿದೆ.

ಸೌತ್ ಆಫ್ರಿಕಾ ತಂಡದ ಮಾಜಿ ಆಟಗಾರ ಆಗಿರುವ ಡೇಲ್ ಸ್ಟೈನ್ ರವರು ರಿಷಬ್ ಪಂತ್ ರವರ ಬದಲು ಈ ಭಾರತೀಯ ಆಟಗಾರನನ್ನು ತಂಡದಲ್ಲಿ ಆಯ್ಕೆ ಮಾಡುವುದು ಉತ್ತಮ ಎನ್ನುವುದಾಗಿ ಅವರ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಹೌದು ಗೆಳೆಯರೇ ಈ ಬಾರಿಯ ಸೌತ್ ಆಫ್ರಿಕಾ ವಿರುದ್ಧದ ಟಿ-ಟ್ವೆಂಟಿ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕ ಹಾಗೂ ಬ್ಯಾಟ್ಸ್ಮನ್ ಆಗಿ ರಿಷಬ್ ಪಂತ್ ರವರು ಬಹುತೇಕ ವಿಫಲರಾಗಿದ್ದಾರೆ ಎಂಬುದಾಗಿ ಡೇಲ್ ಸ್ಟೇನ್ ಹೇಳಿದ್ದಾರೆ. ಕೇವಲ ಇಷ್ಟು ಮಾತ್ರವಲ್ಲದೆ ಬ್ಯಾಟಿಂಗ್ನಲ್ಲಿ ಕೂಡ ಕಳಪೆ ಪ್ರದರ್ಶನವನ್ನು ತೋರಿಸುತ್ತಿರುವ ರಿಶಭ್ ಮತ್ತೆ ಮತ್ತೆ ಅದೇ ತಪ್ಪನ್ನು ಮಾಡುತ್ತಿರುವುದು ತಂಡಕ್ಕೆ ಹಿನ್ನಡೆಯನ್ನು ತರಲಿದೆ.

ಎಂಬುದಾಗಿ ಹೇಳಿರುವ ಡೇಲ್ ಸ್ಟೈನ್ ಅವರ ಬದಲು ದಿನೇಶ್ ಕಾರ್ತಿಕ್ ರವರನ್ನು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡುವುದು ಉತ್ತಮ ಎಂಬುದಾಗಿ ಹೇಳಿದ್ದಾರೆ. ಆರ್ಸಿಬಿ ತಂಡದಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತು ಪಡಿಸುವ ಮೂಲಕ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವ ದಿನೇಶ್ ಕಾರ್ತಿಕ್ ರವರು ಈಗಾಗಲೇ ತನಗೆ ಸಿಕ್ಕಿರುವ ಅವಕಾಶಗಳನ್ನು ಸಂಪೂರ್ಣವಾಗಿ ಯಶಸ್ವಿಯಾಗಿ ಉಪಯೋಗಿಸಿ ಕೊಂಡಿದ್ದಾರೆ. ಅದರಲ್ಲೂ ಕೊನೆಯ ಪಂದ್ಯದಲ್ಲಿ 27 ಎಸೆತಗಳಲ್ಲಿ ಬರೋಬ್ಬರಿ 55 ರನ್ನುಗಳನ್ನು ಬಾರಿಸುವ ಮೂಲಕ ತಾವು ಯಾವ ಕ್ರಮಾಂಕದಲ್ಲಿ ಕೂಡ ಬ್ಯಾಟಿಂಗ್ ಮಾಡಬಲ್ಲೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಹೀಗಾಗಿ ಅವರನ್ನು ಭಾರತೀಯ ಕ್ರಿಕೆಟ್ ತಂಡದಲ್ಲಿ ಆಯ್ಕೆ ಮಾಡುವುದು ಉತ್ತಮ ಎಂಬುದಾಗಿ ಡೇಲ್ ಸ್ಟೈನ್ ಹೇಳಿದ್ದಾರೆ.