ಫಾರ್ಮ್ ಕಳೆದುಕೊಂಡು ಟೀಮ್ ಇಂಡಿಯಾ ಗೆ ಹೊರೆಯಾಗಿರುವ ಆಟಗಾರರಿಗೆ ಸದ್ಯದಲ್ಲೇ ನಿವೃತ್ತಿ?? ಹೇಗಿದೆ ಗೊತ್ತೇ ಹೊಸ ಲೆಕ್ಕಾಚಾರ??

ಫಾರ್ಮ್ ಕಳೆದುಕೊಂಡು ಟೀಮ್ ಇಂಡಿಯಾ ಗೆ ಹೊರೆಯಾಗಿರುವ ಆಟಗಾರರಿಗೆ ಸದ್ಯದಲ್ಲೇ ನಿವೃತ್ತಿ?? ಹೇಗಿದೆ ಗೊತ್ತೇ ಹೊಸ ಲೆಕ್ಕಾಚಾರ??

ನಮಸ್ಕಾರ ಸ್ನೇಹಿತರೆ ಪ್ರತಿಯೊಂದು ವಸ್ತುವಿಗೂ ಕೂಡ ಅದರ ಕೊನೆಯ ಗಳಿಗೆ ಬಂದೇ ಬರುತ್ತದೆ. ಅದು ಆರಂಭದಲ್ಲಿ ಎಷ್ಟೇ ಮೌಲ್ಯವನ್ನು ನೀಡಿದರೂ ಕೂಡ ಅದರಿಂದ ಇನ್ನು ಉತ್ಕೃಷ್ಟವಾದ ಉಪಯೋಗ ದೊರೆಯುವುದಿಲ್ಲ ಎಂದರೆ ಅದು ಖಂಡಿತವಾಗಿ ಬೇರೆ ಉತ್ತಮ ವಸ್ತುಗಳಿಗೆ ರಿಪ್ಲೇಸ್ ಆಗುತ್ತದೆ. ಭಾರತೀಯ ಕ್ರಿಕೆಟ್ ತಂಡದಲ್ಲಿ ಕೂಡ ಒಬ್ಬ ಆಟಗಾರ ಇದೇ ರೀತಿಯ ಹೋಲಿಕೆಗೆ ಒಳಗಾಗುತ್ತಿದ್ದಾರೆ. ಹೌದು ಗೆಳೆಯರೇ ಈ ಒಬ್ಬ ಆಟಗಾರ ಇತ್ತೀಚಿನ ದಿನಗಳಲ್ಲಿ ಕಳಪೆ ಫಾರ್ಮ್ ನಲ್ಲಿ ಇದ್ದಾರೆ ಹಾಗೂ ಫಿಟ್ನೆಸ್ ಕಾಯ್ದುಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಇಬ್ಬರು ಕೂಡ ನಾಯಕರಾಗಿದ್ದಾಗ ಇವರನ್ನು ಹಲವಾರು ಬಾರಿ ತಂಡದಿಂದ ಬೆಂಚ್ ಮಾಡಲಾಗಿತ್ತು ಎಂಬುದನ್ನು ಕೂಡ ಈ ಸಂದರ್ಭದಲ್ಲಿ ತಿಳಿದುಕೊಳ್ಳಬೇಕಾಗಿದೆ. ನಿಮ್ಮ ಇವರು ಕೊನೆಯ ಪಂದ್ಯ ಭಾರತ ತಂಡಕ್ಕೆ ಆಗಿ ಹಾಗೂ ಐಪಿಎಲ್ ಗಾಗಿ ಆಡಿದ್ದು ಕಳೆದ ವರ್ಷದಲ್ಲಿ. ಈ ಬಾರಿ ಐಪಿಎಲ್ಗೆ ಕೂಡ ಸೆಲೆಕ್ಟ್ ಆಗಿಲ್ಲ. ಹೀಗಾಗಿ ಖಂಡಿತವಾಗಿ ಆಟಗಾರ ಮುಂದಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಆಡುವುದು ಸಂಪೂರ್ಣವಾಗಿ ಅನುಮಾನವೇ ಎಂಬುದಾಗಿ ಹೇಳಬಹುದು. ಹೌದು ಗೆಳೆಯರೇ ನಾವು ಮಾತನಾಡುತ್ತಿರುವುದು ಭಾರತೀಯ ಕ್ರಿಕೆಟ್ ತಂಡದ ವೇಗಿಯಾಗಿರುವ ಇಶಾಂತ್ ಶರ್ಮಾ ರವರ ಕುರಿತಂತೆ. ಇವರು ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಕೊನೆಯ ಪಂದ್ಯ ಆಡಿದ್ದು ಕಳೆದ ವರ್ಷ ನಡೆದಿರುವ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ.

ಇನ್ನು ಇವರು ಖಾಯಂ ಟೆಸ್ಟ್ ವೇಗಿ ಆಗಿದ್ದರೂ ಕೂಡ ಈ ಜುಲೈ ತಿಂಗಳ ಆರಂಭದಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ತಂಡದಲ್ಲಿ ಆಯ್ಕೆಯಾಗಿಲ್ಲ. ಈಗಾಗಲೇ ತಂಡದಲ್ಲಿ ವೇಗಿಗಳ ಲಿಸ್ಟಿನಲ್ಲಿ ಜಸ್ಪ್ರೀತ್ ಬುಮ್ರಾ ಮಹಮ್ಮದ್ ಶಮಿ ಸಿರಾಜ್ ಉಮೇಶ್ ಯಾದವ್ ಹಾಗೂ ಶಾರ್ದುಲ್ ಠಾಕೂರ್ ರವರು ತಮ್ಮ ಸ್ಥಾನವನ್ನು ಕಾಯ್ದಿರಿಸಿಕೊಳ್ಳಲು ಪ್ರಬಲವಾದ ಪೈಪೋಟಿ ನೀಡುತ್ತಿದ್ದಾರೆ. ಹೀಗಾಗಿ ಬಿಸಿಸಿಐ ಮೂಲಗಳ ಪ್ರಕಾರ ಮುಂದಿನ ದಿನಗಳಲ್ಲಿ ಇಶಾಂತ್ ಶರ್ಮಾ ರವರಿಗೆ ಭಾರತೀಯ ಕ್ರಿಕೆಟ್ ತಂಡದ ಬಾಗಿಲು ಸಂಪೂರ್ಣವಾಗಿ ಮುಚ್ಚಿದಂತೆ ಎಂದು ಹೇಳಬಹುದಾಗಿದೆ.