ಇಸ್ರೇಲ್ ಗೂಢಾಚಾರಿಕೆ ಸಂಸ್ಥೆಯ ಮಹಿಳಾ ಏಜೆಂಟ್ ಗಳ ಬಗ್ಗೆ ನಿಮಗೆ ಗೊತ್ತೇ? ಸೌಂದರ್ಯವನ್ನು ಹೇಗೆ ಬಳಸುತ್ತಾರೆ ಗೊತ್ತೇ??

ಇಸ್ರೇಲ್ ಗೂಢಾಚಾರಿಕೆ ಸಂಸ್ಥೆಯ ಮಹಿಳಾ ಏಜೆಂಟ್ ಗಳ ಬಗ್ಗೆ ನಿಮಗೆ ಗೊತ್ತೇ? ಸೌಂದರ್ಯವನ್ನು ಹೇಗೆ ಬಳಸುತ್ತಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಇಸ್ರೇಲ್ ದೇಶ ಗಾತ್ರದಲ್ಲಿ ಚಿಕ್ಕದಾದರೂ ಕೂಡ ಮಿಲಿಟರಿ ಶಕ್ತಿಯಲ್ಲಿ ನೋಡುವುದಾದರೆ ಅತ್ಯಂತ ಬಲಶಾಲಿ ದೇಶ ಎನ್ನುವುದರಲ್ಲಿ ಎರಡು ಮಾತಿಲ್ಲ. ಮೊದಲಿನಿಂದಲೂ ಕೂಡ ಭಾರತ ದೇಶದೊಂದಿಗೆ ಸ್ನೇಹ ಸಂಬಂಧವನ್ನು ಹೊಂದಿದೆ. ಇನ್ನು ಇಸ್ರೇಲ್ ದೇಶದ ಸೀಕ್ರೆಟ್ ಏಜೆನ್ಸಿಯನ್ನು ಮೊಸಾದ್ ಎನ್ನುವುದಾಗಿ ಕರೆಯುತ್ತಾರೆ. ಪ್ರಪಂಚದಲ್ಲಿ ಯಾವುದೇ ವಿಚಾರವನ್ನು ಕಂಡುಹಿಡಿದರು ಕೂಡ ಇಸ್ರೇಲ್ ದೇಶದ ಜೆನ್ಸಿಯ ಏಜೆಂಟರ ಮುಖಾಂತರವೇ ಕಂಡುಹಿಡಿಯುತ್ತಾರೆ. 1200 ಜನರು ಈ ಸಂಸ್ಥೆಯಲ್ಲಿ ವರ್ಕ್ ಮಾಡುತ್ತಾರೆ. ಅದರಲ್ಲೂ 40% ಮಹಿಳೆಯರು ಈ ಸಂಸ್ಥೆಯಲ್ಲಿ ವರ್ಕ್ ಮಾಡುತ್ತಾರೆ. 24% ಕ್ಕೂ ಅಧಿಕ ಮಹಿಳೆಯರು ಈ ಸಂಸ್ಥೆಯ ಉಚ್ಚ ಸ್ಥಾನದಲ್ಲಿದ್ದಾರೆ.

ಈ ಮೊಸಾದ್ ಸಂಸ್ಥೆಯಲ್ಲಿ ಕೆಲಸ ಮಾಡುವಂತಹ ಮಹಿಳೆಯರು ಅತ್ಯಂತ ಕತರ್ನಾಕ್ ಏಜೆಂಟ್ ಗಳಾಗಿರುತ್ತಾರೆ. ಇವರು ಯಾವುದೇ ದೇಶದಲ್ಲಿ ಯಾರನ್ನು ಹಿಡಿದು ತರ ಬೇಕಾದರೂ ಕೂಡ ಅದನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸುತ್ತಾರೆ ಇಸ್ರೇಲಿನಲ್ಲಿ ಈ ಸಂಸ್ಥೆಯಲ್ಲಿ ಮಹಿಳಾ ಏಜೆಂಟ್ ವಿಭಾಗವನ್ನು ಮೊದಲ ಬಾರಿಗೆ 1986 ರಲ್ಲಿ ಪ್ರಾರಂಭಿಸಲಾಗಿತ್ತು. ಮೊದಲ ಮಹಿಳಾ ಏಜೆಂಟ್ ಮಾಜಿ ಪರಮಾಣು ವಿಜ್ಞಾನಿಯನ್ನು ಮತ್ತೆ ವಾಪಸ್ಸು ಕರೆತರಲು ತನ್ನ ಸೌಂದರ್ಯದ ಮೂಲಕವೇ ಕಾರ್ಯಾಚರಣೆ ಮಾಡಿ ಆತನನ್ನು ವಾಪಾಸು ಕರೆತಂದಿದ್ದರು ಎಂಬುದಾಗಿ ಒಬ್ಬ ಮುಖ್ಯಸ್ಥ ಟಿವಿ ವಾಹಿನಿಯಲ್ಲಿ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಇಸ್ರೇಲಿ ಮಹಿಳಾ ಏಜೆಂಟರು ತಮ್ಮ ಶತ್ರುಗಳಲ್ಲಿ ಸೌಂದರ್ಯವನ್ನು ಉಪಯೋಗಿಸಿಕೊಂಡು ಮಹಿಳೆಯಾಗಿರುವ ಲಾಭವನ್ನು ಉಪಯೋಗಿಸಿಕೊಂಡು ಯಾವ ಕೆಲಸವನ್ನು ಆದರೂ ಕೂಡ ಯಾವ ಸಂದರ್ಭದಲ್ಲಿ ಕೂಡಾ ಮಾಡಿಸಿಕೊಳ್ಳಬಹುದಾದ ಕ್ಷಮತೆಯನ್ನು ಹೊಂದಿರುತ್ತಾರೆ ಎಂಬುದಾಗಿ ತಿಳಿದುಬಂದಿದೆ. ಆದರೆ ಈ ಸಂದರ್ಭದಲ್ಲಿ ಅವರು ಯಾವುದೇ ಕಾರಣಕ್ಕೂ ದೈಹಿಕ ಸಂಪರ್ಕವನ್ನು ಹೊಂದುವುದಿಲ್ಲ.

ಇವರ ಕಾರ್ಯಕ್ಷಮತೆಗೆ ಒಂದು ಉದಾಹರಣೆ ಹೇಳುವುದಾದರೆ 1976 ರ ಸಂದರ್ಭದಲ್ಲಿ ಫ್ರಾನ್ಸ್ ಏರ್ಲೈನ್ ಅನ್ನು ಹೈಜಾಕ್ ಮಾಡಿ ಉಗಾಂಡಾ ಗೆ ತಂದಿಳಿಸಲಾಗಿತ್ತು. ಈ ಸಂದರ್ಭದಲ್ಲಿ ನೂರಾರು ಪ್ರಯಾಣಿಕರ ಜೊತೆಗೆ ಇಸ್ರೇಲ್ ಪ್ರಧಾನಮಂತ್ರಿಗಳ ಸಂಬಂಧಿಕರು ಕೂಡ ಇದ್ದರು. ಈ ಸಂದರ್ಭದಲ್ಲಿ ಮೊಸಾದ್ ನ ರಹಸ್ಯ ಏಜೆಂಟ್ ಫ್ಲೈಟ್ ನಲ್ಲಿ ಕಾರ್ಯಾಚರಣೆ ಮಾಡುವ ಮೂಲಕ ಎಲ್ಲರ ಪ್ರಾಣವನ್ನು ಉಳಿಸಿದ್ದರು. 2012 ರ ಸಂದರ್ಭದಲ್ಲಿ ಒಂದು ಟಿವಿ ಮಾಧ್ಯಮದ ಸಂದರ್ಶನದಲ್ಲಿ ಈ ಸಂಸ್ಥೆಯ ಇಬ್ಬರು ಲೇಡಿ ಏಜೆಂಟರು ತಮ್ಮ ವಿವರಣೆಯ ಕುರಿತಂತೆ ಮಾತನಾಡಿದರು. ಇವರು ಯಾವ್ಯಾವ ಮಾರ್ಷಲ್ ಆರ್ಟ್ಸ್ ಅನ್ನು ಕಲಿತಿರುತ್ತಾರೆ ಹಾಗೂ ಯಾವ ಸಂದರ್ಭದಲ್ಲಿ ಯಾವ ರೀತಿ ವೈರಿಗಳ ವಿರುದ್ಧ ಕಾರ್ಯಚರಣೆ ಮಾಡುತ್ತಾರೆ ಎಂಬುದರ ಕುರಿತಂತೆ ಕೂಡ ಮಾತನಾಡಿದ್ದಾರೆ.

ಇದೇ ಸಂದರ್ಭದಲ್ಲಿ ಯಾಯೆಲ್ ಎನ್ನುವ ಮಹಿಳಾ ಏಜೆಂಟ್ ಹೇಳಿರುವಂತೆ ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ಈ ಕ್ಷೇತ್ರದಲ್ಲಿ ಕಾರ್ಯ ನಿರ್ವಹಣೆ ಮಾಡುವುದು ಅತ್ಯಂತ ಸುಲಭವಾಗಿದೆ ಯಾಕೆಂದರೆ ಈ ಕ್ಷೇತ್ರದಲ್ಲಿ ಪುರುಷರನ್ನು ಸದಾಕಾಲ ಬೇರೆಯವರು ಅನುಮಾನದ ದೃಷ್ಟಿಯಲ್ಲಿ ನೋಡುವ ಕಾರಣದಿಂದಾಗಿ ಅವರ ಮೇಲೆ ಅ’ಪಾಯ ಹೆಚ್ಚಿರುತ್ತದೆ. ಆದರೆ ಮಹಿಳೆಯರ ಮುಖದ ಮೇಲಿರುವ ಮುಗುಳ್ನಗೆ ನೋಡಿ ಎಲ್ಲರೂ ಕೂಡ ಕಾರ್ಯಕ್ಕೆ ಹೋಗುತ್ತಾರೆ ಹೀಗಾಗಿ ಈ ಕೆಲಸ ಮಾಡುವುದು ಪುರುಷರಿಗಿಂತ ಮಹಿಳೆಯರಿಗೆ ಸುಲಭವಾಗಿದೆ ಎಂಬುದಾಗಿ ಹೇಳಿದ್ದಾರೆ.

ಯಕ್ರತ್ ಎನ್ನುವ ಇಸ್ರೇಲಿ ಮಹಿಳಾ ಗೂಢಚಾರಿಣಿ ಹೇಳುವಂತೆ ಮಹಿಳೆ ಆಗುವ ಲಾಭವನ್ನು ಈ ಗೂಢಾಚಾರಿಕೆಯಲ್ಲಿ ನಾವು ಬಳಸಿಕೊಳ್ಳುತ್ತೇವೆ. ಈ ಗೂಢಾಚಾರಿಕೆ ಸಂದರ್ಭದಲ್ಲಿ ನಾವು ಎದುರಾಳಿಯ ಜೊತೆಗೆ ಲಾರ್ಡ್ ರೋಮ್ಯಾನ್ಸ್ ಎಲ್ಲವನ್ನು ಮಾಡುತ್ತೇವೆ ಆದರೆ ಈ ಸಂದರ್ಭದಲ್ಲಿ ದೈಹಿಕ ಸಂಪರ್ಕಕ್ಕೆ ಹೋಗುವುದಿಲ್ಲ. ಮೊಸಾದ್ ಏಜೆನ್ಸಿಯಲ್ಲಿ ಕೂಡ ಈ ವಿಚಾರಕ್ಕೆ ನಿರ್ಬಂಧವಿದೆ ಎಂಬುದಾಗಿ ತಿಳಿದು ಬಂದಿದೆ. ಇನ್ನು ಈ ಸಂಸ್ಥೆಯ ಮುಖ್ಯಸ್ಥ ಆಗಿರುವ ಪಾರ್ಡೋ ಹೇಳುವಂತೆ 1986 ರ ಸಂದರ್ಭದಲ್ಲಿ,

ಅಣು ವಿಜ್ಞಾನಿಯನ್ನು ಮತ್ತೆ ಇಸ್ರೇಲ್ ದೇಶಕ್ಕೆ ಕರೆತರಲು ಮಹಿಳಾ ಏಜೆಂಟ್ ಅನ್ನು ಉಪಯೋಗಿಸಿ ತನ್ನ ಸೌಂದರ್ಯದ ಜಾಲದಲ್ಲಿ ಆತನನ್ನು ಸಿಕ್ಕಿಸಿ ಇಸ್ರೇಲ್ ದೇಶಕ್ಕೆ ಕರೆತರುವಲ್ಲಿ ಆಕೆ ಯಶಸ್ವಿಯಾಗುತ್ತಾಳೆ. ಇಲ್ಲಿಂದ ಮಹಿಳಾ ಏಜೆಂಟ್ ಗಳು ಮೊಸಾದ್ ನಲ್ಲಿ ಹೆಚ್ಚಾಗಲು ಕಾರಣವಾಯಿತು ಎಂಬುದಾಗಿ ಹೇಳುತ್ತಾರೆ. ಈ ಕಾರಣದಿಂದಾಗಿಯೇ ಇಂಟೆಲಿಜೆನ್ಸ್ ವಿಚಾರದಲ್ಲಿ ಇಂದಿಗೂ ಕೂಡ ಹಲವಾರು ಮುಂದುವರೆದ ದೇಶಗಳ ಹೋಲಿಕೆಯಲ್ಲಿ ಕೂಡ ಇಸ್ರೇಲ್ ದೇಶ ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. ಮೊದಲಿನಿಂದಲೂ ಕೂಡ ಭಾರತ ದೇಶಕ್ಕೆ ಕೃತಜ್ಞ ವಾಗಿರುವ ಇಸ್ರೇಲ್ ದೇಶ ಒಂದು ನಂಬಿಕಸ್ಥ ಸ್ನೇಹಿತ ದೇಶ ಎಂದು ಹೇಳಬಹುದಾಗಿದೆ. ಇಸ್ರೇಲ್ ದೇಶದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮಾಡಿ ಹಚ್ಚಿಕೊಳ್ಳಿ.