ಪಾಂಡ್ಯ, ಪಂತ್ ಅಲ್ಲಾ, ದಿನೇಶ್ ಅಂತೂ ಅಲ್ಲವೇ ಅಲ್ಲಾ, ಐರ್ಲೆಂಡ್ ವಿರುದ್ದದ ಸರಣಿಗೆ ಬಿಗ್ ಹಿಟ್ಟರ್ ಆಯ್ಕೆ ಮಾಡಿದ ಆಕಾಶ್ ಚೋಪ್ರಾ ಯಾರು ಗೊತ್ತೇ?

ಪಾಂಡ್ಯ, ಪಂತ್ ಅಲ್ಲಾ, ದಿನೇಶ್ ಅಂತೂ ಅಲ್ಲವೇ ಅಲ್ಲಾ, ಐರ್ಲೆಂಡ್ ವಿರುದ್ದದ ಸರಣಿಗೆ ಬಿಗ್ ಹಿಟ್ಟರ್ ಆಯ್ಕೆ ಮಾಡಿದ ಆಕಾಶ್ ಚೋಪ್ರಾ ಯಾರು ಗೊತ್ತೇ?

ನಮಸ್ಕಾರ ಸ್ನೇಹಿತರೇ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಅಂತಿಮ ಹಂತಕ್ಕೆ ಬಂದು ನಿಂತಿದೆ. ಎರಡು ತಂಡಗಳು ಎರೆಡೆರೆಡು ಪಂದ್ಯ ಗೆದ್ದು ಸರಣಿಯನ್ನು ಸಮಬಲ ಮಾಡಿಕೊಂಡಿವೆ. ಈ ನಡುವೆ ಬೆಂಗಳೂರಿನಲ್ಲಿ ನಡೆಯುವ ಕೊನೆಯ ಪಂದ್ಯ ಫೈನಲ್ ಆಗಲಿದೆ. ಈ ಸರಣಿ ಮುಗಿದ ನಂತರ ಭಾರತದ ಒಂದು ತಂಡ ಇಂಗ್ಲೆಂಡ್ ನಲ್ಲಿ ಟೆಸ್ಟ್ ಸರಣಿಯಲ್ಲಿ ಭಾಗವಹಿಸಲು ತೆರಳಲಿದೆ. ಮತ್ತೊಂದು ತಂಡ ಐರ್ಲೆಂಡ್ ವಿರುದ್ಧ ಟಿ 20 ಸರಣಿ ಆಡಲು ತೆರಳಲಿದೆ. ಈ ನಡುವೆ ಐರ್ಲೆಂಡ್ ವಿರುದ್ಧ ಆಡುವ ತಂಡಕ್ಕೆ ನಾಯಕರಾಗಿ ಹಾರ್ದಿಕ್ ಪಾಂಡ್ಯ ತಂಡವನ್ನು ಮುನ್ನಡಸಲಿದ್ದು, ಉಪ ನಾಯಕರಾಗಿ ಭುವನೇಶ್ವರ್ ಕುಮಾರ್ ಇದ್ದಾರೆ.

ಈ ನಡುವೆ ಐರ್ಲೆಂಡ್ ಪ್ರವಾಸದ ಬಗ್ಗೆ ಮಾತನಾಡಿರುವ ಭಾರತ ತಂಡದ ಮಾಜಿ ಆಟಗಾರ ಹಾಗೂ ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ಭಾರತ ತಂಡದ ಬ್ಯಾಟಿಂಗ್ ಸಂಯೋಜನೆ ಬಗ್ಗೆ ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಐರ್ಲೆಂಡ್ ಸರಣಿಯಲ್ಲಿ ರಿಷಭ್ ಪಂತ್ ಇರುವುದಿಲ್ಲ. ಹಾಗಾಗಿ ಸದ್ಯ ರಿಷಭ್ ಪಂತ್ ಆಡುತ್ತಿರುವ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಆಡಲು ದೀಪಕ್ ಹೂಡಾ ಸೂಕ್ತ ಎಂದು ಹೇಳಿದ್ದಾರೆ. ಆರಂಭಿಕ ರಾಗಿ ಇಶಾನ್ ಕಿಶನ್ ಮತ್ತು ರುತುರಾಜ್ ಗಾಯಕ್ವಾಡ್ ಆಡಿದರೇ,

ಮೂರನೇ ಕ್ರಮಾಂಕದಲ್ಲಿ ಆಟಗಾರ ಸೂರ್ಯ ಕುಮಾರ್ ಯಾದವ್ ಬರಲಿದ್ದಾರೆ. ನಾಲ್ಕನೇ ಕ್ರಮಾಂಕಕ್ಕೆ ಸಂಜು ಸ್ಯಾಮ್ಸನ್, ರಾಹುಲ್ ತ್ರಿಪಾಠಿ,ದೀಪಕ್ ಹೂಡಾ ನಡುವೆ ಪೈಪೋಟಿ ಇರುತ್ತದೆ. ನನ್ನ ಪ್ರಕಾರ ಬಿಗ್ ಹಿಟ್ ಹೊಡೆಯುವ ಸಾಮರ್ಥ್ಯ ಹಾಗೂ ಆಫ್ ಸ್ಪಿನ್ ಬೌಲಿಂಗ್ ಮಾಡುವ ದೀಪಕ್ ಹೂಡಾ ಈ ಜಾಗಕ್ಕೆ ಸೂಕ್ತ ಎಂದು ಹೇಳಿದ್ದಾರೆ. ಈ ಬಗ್ಗೆ ಅಂತಿಮ ತೀರ್ಮಾನವನ್ನು ಟೀಮ್ ಇಂಡಿಯಾ ಮ್ಯಾನೇಜ್ ಮೆಂಟ್ ತೆಗೆದುಕೊಳ್ಳಬೇಕಾಗುತ್ತದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ. ಒಟ್ಟಾರೆಯಾಗಿ ತಂಡ ಇಂತಿದೆ : ಇಶಾನ್ ಕಿಶನ್,ರುತುರಾಜ್ ಗಾಯಕ್ವಾಡ್, ಸೂರ್ಯ ಕುಮಾರ್ ಯಾದವ್, ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಆವೇಶ್ ಖಾನ್, ಯುಜವೇಂದ್ರ ಚಾಹಲ್.