ಒಮ್ಮೆಲೆ ಹತ್ತು ಆಟಗಾರರನ್ನು ಬಿಡುಗಡೆ ಮಾಡಲು ಮುಂದಾದ ಆರ್ಸಿಬಿ. ಮೇಜರ್ ಸರ್ಜರಿಯಲ್ಲಿ ಹೊರ ಹೋಗುವವರು ಯಾರ್ಯಾರು ಗೊತ್ತೇ??

ಒಮ್ಮೆಲೆ ಹತ್ತು ಆಟಗಾರರನ್ನು ಬಿಡುಗಡೆ ಮಾಡಲು ಮುಂದಾದ ಆರ್ಸಿಬಿ. ಮೇಜರ್ ಸರ್ಜರಿಯಲ್ಲಿ ಹೊರ ಹೋಗುವವರು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೆ 15ನೇ ಸೀಸನ್ ನ ಐಪಿಎಲ್ ನಲ್ಲಿ ನಮ್ಮ ನೆಚ್ಚಿನ ರಾಜ್ ಚಾಲೆಂಜರ್ಸ್ ಬೆಂಗಳೂರು ತಂಡ ಕ್ವಾಲಿಫೈಯರ್ 2 ಹಂತಕ್ಕೆ ಅಂದರೆ ಸೆಮಿಫೈನಲ್ ಹಂತದವರೆಗೂ ತಲುಪಲು ಸಾಧ್ಯವಾಗಿತ್ತು. ಅಂದರೆ ಈ ಬಾರಿ ತಂಡ ಅಷ್ಟೊಂದು ಕಳಪೆ ಮಟ್ಟದ ಪ್ರದರ್ಶನವನ್ನು ನೀಡಿಲ್ಲವಾದರೂ ಕೂಡ ಮುಖ್ಯ ಹಂತದಲ್ಲಿ ಗೆಲುವನ್ನು ಸಾಧಿಸಲು ಎಡವಿತು ಎಂಬುದಾಗಿ ಅಂದು ಕೊಳ್ಳಬಹುದಾಗಿದೆ. ಇನ್ನು ಮುಂದಿನ ಸೀಸನ್ನಲ್ಲಿ ಈ ಬಾರಿ ಹಾಗೆ ದೊಡ್ಡಮಟ್ಟದ ಹರಾಜು ಪ್ರಕ್ರಿಯೆ ಇರುವುದಿಲ್ಲ.

ಆದರೆ ಮಿನಿ ಹರಾಜು ಖಂಡಿತವಾಗಿ ಇದ್ದೇ ಇರುತ್ತದೆ. ಹೀಗಾಗಿ ತಂಡದ ಕೋಚ್ ಸ್ಟಾಫ್ ಆಗಿರುವ ಸಂಜಯ್ ಬಂಗಾರ್ ಮೈಕ್ ಹೆಸನ್ ಸೇರಿದಂತೆ ಟೀಮ್ ಮ್ಯಾನೇಜ್ಮೆಂಟ್ 10 ಆಟಗಾರರನ್ನು ಮುಂದಿನ ಸೀಸನ್ ಗೂ ಮುನ್ನ ಒಮ್ಮೆಲೆ ಬಿಡುಗಡೆ ಮಾಡಲು ಸಜ್ಜಾಗಿದೆ ಎಂಬುದಾಗಿ ಕೇಳಿಬಂದಿದೆ. ಹಾಗಿದ್ದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಮುಂದಿನ ಐಪಿಎಲ್ ಸೀಸನ್ ಒಳಗೆ ತಂಡದಿಂದ ಹೊರಹೋಗುತ್ತಿರುವ ಆಟಗಾರರು ಯಾರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಅನುಜ್ ರಾವತ್; ಈ ಬಾರಿ ಆರಂಭಿಕ ಆಟಗಾರನಾಗಿ ಹಲವಾರು ಅವಕಾಶವನ್ನು ನೀಡಿದರೂ ಕೂಡ ಒಂದು ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದು ಬಿಟ್ಟರೆ ಮತ್ತೆ ಅವರ ಬ್ಯಾಟಿಂಗ್ ಬಂದಿದ್ದು ಇಲ್ಲವೇ ಇಲ್ಲ. ಹೀಗಾಗಿ ಅವರನ್ನು ಬಿಡುಗಡೆ ಮಾಡಬಹುದಾಗಿದೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಆರಂಭಿಕ ಆಟಗಾರನಾಗಿ ಅನುಜ್ ರಾವತ್ ಮಾಡಿದ ತಪ್ಪಿನಿಂದಾಗಿ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಲವಾರು ಪಂದ್ಯಗಳನ್ನು ಸೋತಿತ್ತು ಎಂದು ಹೇಳಬಹುದಾಗಿದೆ.

ಇದಾದನಂತರ ರುದರ್ಫೋರ್ಡ್ ಮಹಿಪಾಲ್ ಲೊಮ್ರೋರ್ ಜೇಸನ್ ಬೆಹ್ರೆನ್ಡ್ರೋಪ್ ಸಿದ್ದಾರ್ಥ್ ಕೌಲ್. ರುದರ್ಫೋರ್ಡ್ ರವರಿಗೆ ತಮ್ಮ ಪ್ರತಿಭೆಯನ್ನು ಸಾಬೀತು ಪಡಿಸಲು ಅವಕಾಶ ಸಿಗಲಿಲ್ಲ ಯಾಕೆಂದರೆ ಅವರ ಪಾಲಿನ ವಿದೇಶಿ ಆಟಗಾರರು ಈಗಾಗಲೇ ತಾಣದಲ್ಲಿ ಸಮರ್ಥವಾಗಿ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಮಹಿಪಾಲ್ ಲೊಮ್ರೋರ್ ಹೇಳುವಷ್ಟರ ಮಟ್ಟಿಗೆ ದೊಡ್ಡಮಟ್ಟದ ಪ್ರದರ್ಶನವನ್ನು ನೀಡಿಲ್ಲ. ಜೇಸನ್ ಬದಲು ಈಗಾಗಲೇ ಜೋಶ್ ತಂಡದಲ್ಲಿ ಅತ್ಯದ್ಭುತ ಪ್ರದರ್ಶನವನ್ನು ನೀಡುತ್ತಿದ್ದಾರೆ. ಸಿದ್ದಾರ್ಥ್ ಕೌಲ್ ರವರನ್ನು ಪ್ಲೇಆಫ್ ಹಂತಕ್ಕೆ ಮುನ್ನ ಬದಲಿ ಬೌಲರ್ ಆಗಿ ತಂಡದಲ್ಲಿ ಆರಿಸಲಾಗಿತ್ತು ಆದರೆ ಅವರು ಸಾಕಷ್ಟು ದುಬಾರಿಯಾಗಿ ಕಂಡುಬಂದಿದ್ದರು.

ಇನ್ನು ಈ ಬಿಡುಗಡೆ ಭಾಗ್ಯವನ್ನು ಕಾಣುವ ಆಟಗಾರರಲ್ಲಿ ಸಿರಾಜ್ ಕೂಡ ಕಂಡುಬರಬಹುದು. ಯಾಕೆಂದರೆ ಅಷ್ಟೊಂದು ಚೆನ್ನಾಗಿ ಪ್ರದರ್ಶನವನ್ನು ನೀಡುತ್ತಿದ್ದ ಯಜುವೇಂದ್ರ ಚಹಾಲ್ ರವರನ್ನು ತಂಡದಿಂದ ಬಿಡುಗಡೆ ಮಾಡಲು ಹಿಂದುಮುಂದು ನೋಡದ ತಂಡ ಈ ಬಾರಿ ತಂಡದ ಸೋಲಿನ ಪ್ರಮುಖ ಕಾರಣವಾಗಿರುವ ಮೊಹಮ್ಮದ್ ಸಿರಾಜ್ ಅವರನ್ನು ಮುಂದಿನ ಬಾರಿ ತಂಡದಲ್ಲಿ ಇಟ್ಟುಕೊಳ್ಳುವುದು ಅನುಮಾನವೇ ಸರಿ ಎಂದು ಹೇಳಲಾಗುತ್ತಿದೆ. ಅದರಲ್ಲೂ 7 ಕೋಟಿ ರೂಪಾಯಿ ಹಣವನ್ನು ನೀಡಿ ಸಿರಾಜ್ ರವರನ್ನು ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ವಿರಾಟ್ ಕೊಹ್ಲಿ ರವರ ಜೊತೆಗೆ ತಂಡದಲ್ಲಿ ರಿಟೈನ್ ಮಾಡಿಕೊಳ್ಳಲಾಗಿತ್ತು ಆದರೆ ಅವರಿಂದ 20 ಲಕ್ಷ ರೂಪಾಯಿ ಪ್ರದರ್ಶನವು ಕೂಡ ಬರಲಿಲ್ಲ.

ಅವರನ್ನು ಹೊರತುಪಡಿಸಿ ಇಂಗ್ಲೆಂಡ್ ಮೂಲದ ಡೇವಿಡ್ ವಿಲ್ಲಿ ಅವರನ್ನು ಕೂಡ ತಂಡದಿಂದ ಹೊರ ಹಾಕಬಹುದಾಗಿದೆ ಯಾಕೆಂದರೆ ಈಗಾಗಲೇ ಆಲ್-ರೌಂಡರ್ ರೂಪದಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ರವರು ಅತ್ಯದ್ಭುತ ಪ್ರದರ್ಶನವನ್ನು ನೀಡುತ್ತಿದ್ದಾರೆ. ಹೀಗಾಗಿ ಡೇವಿಡ್ ವಿಲ್ಲಿ ರವರ ಅವಶ್ಯಕತೆ ತಂಡದಲ್ಲಿ ಇರುವುದು ಅನುಮಾನವೇ ಸರಿ ಎಂದು ಹೇಳಬಹುದಾಗಿದೆ.

ಇವರಿಷ್ಟು ಜನ ಸೇರಿದಂತೆ ಒಟ್ಟಾರೆಯಾಗಿ 10 ಜನ ಆಟಗಾರರನ್ನು ತಂಡದಿಂದ ಆರ್ಸಿಬಿ ಟೀಮ್ ಮ್ಯಾನೇಜ್ಮೆಂಟ್ ಹೊರ ಹಾಕಲಿದೆ ಎಂಬುದಾಗಿ ಒಳ ಸುದ್ದಿಗಳು ಹರಿದಾಡುತ್ತಿವೆ. ಈಗಾಗಲೇ ಈ ವಿಚಾರದ ನಂತರ ಮುಂದಿನ ಬಾರಿ ತಂಡ ಯಾವರೀತಿಯಲ್ಲಿ ಫಾರ್ಮ್ ಆಗಲಿದೆ ಎಂಬ ಕುರಿತಂತೆ ಆರ್ಸಿಬಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ ಎಂದು ಹೇಳಬಹುದಾಗಿದೆ. ನೀವು ಮುಂದಿನ ಮಿನಿ ಹರಾಜಿನಲ್ಲಿ ಆರ್ಸಿಬಿ ತಂಡ ಯಾವ ಆಟಗಾರರನ್ನು ಖರೀದಿಸಿದರೆ ಉತ್ತಮ ಎಂಬುದನ್ನು ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.