ಕೆ ಎಲ್ ರಾಹುಲ್ ಬೇಡವೇ ಬೇಡ, ಈತನನ್ನು ಭಾರತ ತಂಡದ ನಾಯಕನ್ನಾಗಿ ಮಾಡಿ ಎಂದ ಆಸ್ಟ್ರೇಲಿಯಾದ ಬ್ರಾಡ್ ಹಾಗ್. ಯಾರನ್ನು ಮಾಡಬೇಕಂತೆ ಗೊತ್ತೆ?

ಕೆ ಎಲ್ ರಾಹುಲ್ ಬೇಡವೇ ಬೇಡ, ಈತನನ್ನು ಭಾರತ ತಂಡದ ನಾಯಕನ್ನಾಗಿ ಮಾಡಿ ಎಂದ ಆಸ್ಟ್ರೇಲಿಯಾದ ಬ್ರಾಡ್ ಹಾಗ್. ಯಾರನ್ನು ಮಾಡಬೇಕಂತೆ ಗೊತ್ತೆ?

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈಗಾಗಲೇ ಭಾರತೀಯ ಕ್ರಿಕೆಟ್ ತಂಡ ಸೌತ್ ಆಫ್ರಿಕಾ ವಿರುದ್ಧ 5 ಟಿ-ಟ್ವೆಂಟಿ ಪಂದ್ಯ ಗಳ ಸರಣಿಯನ್ನು ಆಡುತ್ತಿದೆ. ಈ ಸರಣಿಗೆ ಭಾರತೀಯ ತಂಡದ ನಾಯಕನನ್ನಾಗಿ ಮೊದಲು ಕೆಎಲ್ ರಾಹುಲ್ ರವರನ್ನು ನೇಮಿಸಲಾಗಿತ್ತು. ಆದರೆ ಪ್ರಾಕ್ಟೀಸ್ ಸಂದರ್ಭದಲ್ಲಿ ಕೆಎಲ್ ರಾಹುಲ್ ರವರು ಮಾಡಿಕೊಂಡಿರುವ ಇಂಜುರಿಯ ಕಾರಣದಿಂದಾಗಿ ತಂಡದ ನಾಯಕತ್ವವನ್ನು ಯುವ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ಮನ್ ಅವರಿಗೆ ನೀಡಲಾಗಿತ್ತು.

ಆದರೆ ಈಗಾಗಲೇ ನೀವೇ ನೋಡಿರುವಂತೆ ರಿಷಬ್ ಪಂತ್ ರವರ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ ಸತತವಾಗಿ 2 ಸೋಲು ಗಳನ್ನು ಕಂಡಿದೆ. ಇದು ನಿಜಕ್ಕೂ ಈಗಾಗಲೇ ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ಸಾಕಷ್ಟು ಅಸಮಾಧಾನವನ್ನು ನೀಡಿದೆ ಎಂಬುದನ್ನು ಸೋಶಿಯಲ್ ಮೀಡಿಯಾದಲ್ಲಿ ನೋಡಿ ನೀವು ತಿಳಿದುಕೊಳ್ಳಬಹುದಾಗಿದೆ. ಎಲ್ಲರೂ ಕೂಡ ಕೆ ಎಲ್ ರಾಹುಲ್ ಅವರು ನಾಯಕರಾಗಿದ್ದರೆ ಖಂಡಿತವಾಗಿ ಭಾರತೀಯ ಕ್ರಿಕೆಟ್ ತಂಡ ಈ ಪರಿಸ್ಥಿತಿಗೆ ಬರುತ್ತಿರಲಿಲ್ಲ ಎಂಬುದಾಗಿ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ ಇದರ ನಡುವಲ್ಲಿಯೇ ಆಸ್ಟ್ರೇಲಿಯಾದ ಮಾಜಿ ಆಟಗಾರ ಆಗಿರುವ ಬ್ರಾಡ್ ಹಾಗ್ ಅವರು ತಮ್ಮದೇ ಆದಂತಹ ಅಭಿಪ್ರಾಯವನ್ನು ಈಗ ವ್ಯಕ್ತಪಡಿಸುತ್ತಿದ್ದಾರೆ.

ರೋಹಿತ್ ಶರ್ಮ ರವರ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ರವರಿಗೆ ಅಲ್ಲ ಬದಲಾಗಿ ಹಾರ್ದಿಕ್ ಪಾಂಡ್ಯ ರವರನ್ನು ಭಾರತೀಯ ಕ್ರಿಕೆಟ್ ತಂಡದ ನಾಯಕನನ್ನಾಗಿ ಆಯ್ಕೆ ಮಾಡಬೇಕಾಗಿತ್ತು ಎಂಬುದಾಗಿ ಬ್ರಾಡ್ ಹಾಗ್ ಅಭಿಪ್ರಾಯಪಟ್ಟಿದ್ದಾರೆ. ಐಪಿಎಲ್ ನಲ್ಲಿ ಈಗಾಗಲೇ ಉತ್ಕೃಷ್ಟವಾದ ನಾಯಕತ್ವದ ಗುಣವನ್ನು ತೋರಿರುವ ಹಾರ್ದಿಕ್ ಪಾಂಡ್ಯ ರವರು ಕಠಿಣ ಸಂದರ್ಭದಲ್ಲಿ ತಾವೇ ತಂಡದ ಮುಂದೆ ನಿಂತು ತಂಡವನ್ನು ಗೆಲುವಿನ ದೊರಕಿ ಸೇರಿಸುತ್ತಾರೆ ಎಂಬುದಾಗಿ ಬ್ರಾಡ್ ಹಾಗ್ ಹಾರ್ದಿಕ್ ಪಾಂಡ್ಯ ರವರ ನಾಯಕತ್ವದ ಗುಣವನ್ನು ಹಾಡಿಹೊಗಳಿದ್ದಾರೆ. ಬ್ರಾಡ್ ಹಾಗ್ ರವರ ಅನಿಸಿಕೆ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.