ಭೂಮಿ ಪುತ್ರ ಮಂಗಳ ದೇವನು ತನ್ನದೇ ರಾಶಿಗೆ ಪ್ರವೇಶ ಮಾಡಲಿದ್ದಾನೆ, ಇದರಿಂದ ಮೂರು ರಾಶಿಗಳಿಗೆ ಅದೃಷ್ಟದ ಜೊತೆ ಹಣದ ಹರಿವು ಹೆಚ್ಚಳ. ಯಾರ್ಯಾರಿಗೆ ಗೊತ್ತೇ?

ಭೂಮಿ ಪುತ್ರ ಮಂಗಳ ದೇವನು ತನ್ನದೇ ರಾಶಿಗೆ ಪ್ರವೇಶ ಮಾಡಲಿದ್ದಾನೆ, ಇದರಿಂದ ಮೂರು ರಾಶಿಗಳಿಗೆ ಅದೃಷ್ಟದ ಜೊತೆ ಹಣದ ಹರಿವು ಹೆಚ್ಚಳ. ಯಾರ್ಯಾರಿಗೆ ಗೊತ್ತೇ?

ನಮಸ್ಕಾರ ಸ್ನೇಹಿತರ ಭೂಮಿ ಪುತ್ರ ಮಂಗಳಗ್ರಹವು ಇದೇ ಜೂನ್ 27ರಂದು ತನ್ನ ಸ್ವಂತ ರಾಶಿಯಾಗಿರುವ ಮೇಷ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಈ ಕಾರಣದಿಂದಾಗಿ 3 ರಾಶಿಯವರಿಗೆ ಅದೃಷ್ಟದ ಜೊತೆಗೆ ಹಣದ ಹರಿವು ಕೂಡ ಮೂಡಿಬರಲಿದೆ. ಹಾಗಿದ್ದರೆ ಶುಭಕಾರಕ ಮಂಗಳಗ್ರಹದ ರಾಶಿ ಬದಲಾವಣೆಯಿಂದಾಗಿ ಅದೃಷ್ಟವನ್ನು ಪಡೆಯಲಿರುವ 3 ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

ಮಿಥುನ ರಾಶಿ; ಮಿಥುನ ರಾಶಿಯವರ 11ನೇ ಮನೆಯಲ್ಲಿ ಮಂಗಳಗ್ರಹ ಗೋಚರಿಸುತ್ತಾನೆ. ವ್ಯಾಪಾರ ಉದ್ಯೋಗ ಸೇರಿದಂತೆ ಆರ್ಥಿಕವಾಗಿ ಸರ್ವ ಕ್ಷೇತ್ರದಲ್ಲಿ ಕೂಡ ಲಾಭ ಹಾಗೂ ಆರೋಗ್ಯದಲ್ಲಿ ಕೂಡ ಸುಧಾರಣೆ ಕಂಡು ಬರಲಿದೆ. ಉದ್ಯೋಗ ಕ್ಷೇತ್ರದಲ್ಲಿ ಕೂಡ ನಿಮ್ಮ ಕೆಲಸದಲ್ಲಿ ಸಾಕಷ್ಟು ಉತ್ತಮ ಪರಿಣಾಮಗಳು ಮೂಡಿಬಂದು ಕೆಲಸದ ಕ್ಷೇತ್ರದಲ್ಲಿ ಎಲ್ಲರಿಂದಲೂ ಕೂಡ ನೀವು ಗೌರವಕ್ಕೆ ಒಳಗಾಗಲಿದ್ದೀರಿ. ಈ ಸಂದರ್ಭದಲ್ಲಿ ನಿಮ್ಮ ಸಂಗಾತಿಯಿಂದ ಕೂಡ ನಿಮಗೆ ಸಾಥ್ ದೊರೆಯಲಿದೆ. ಪಾರ್ಟ್ನರ್ಶಿಪ್ ವ್ಯಾಪಾರ ಮಾಡುವುದಕ್ಕೆ ಇದೊಂದು ಉತ್ತಮ ಸಮಯವಾಗಿದೆ. ಇನ್ನು ಸೇನೆ ಸೇರಿದಂತೆ ಪೊಲೀಸ್ ನೌಕರಿಗೆ ಸೇರಲು ಬಯಸುವವರಿಗೆ ಇದೊಂದು ಉತ್ತಮ ಸಮಯದ ಅವಕಾಶವಾಗಿದೆ.

ಕರ್ಕಾಟಕ ರಾಶಿ; ಮಂಗಳ ಗ್ರಹ ನಿಮ್ಮ ರಾಶಿ ಹತ್ತನೇ ಮನೆಯಲ್ಲಿ ಇರುವ ಕಾರಣದಿಂದಾಗಿ ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಕೆಲಸಕ್ಕಾಗಿ ಅಲೆಯುತ್ತಿರುವವರಿಗೆ ಅತಿಶೀಘ್ರದಲ್ಲಿ ನಿಮ್ಮ ಮನಸ್ಸಿಗೆ ಇಷ್ಟ ಆಗುವಂತಹ ಕೆಲಸ ಸಿಗಲಿದೆ. ಪ್ರಮೋಷನ್ ಕೂಡ ಸಿಗಲಿದ್ದು ಪ್ರಾಪರ್ಟಿಯಲ್ಲಿ ಕೂಡ ಲಾಭ ಸಿಗಲಿದೆ ಎಂಬುದಾಗಿ ಉಲ್ಲೇಖವಾಗಿದೆ. ವ್ಯಾಪಾರದಲ್ಲಿ ದೊಡ್ಡಮಟ್ಟದ ಡೀಲ್ ಕೂಡ ನಿಮಗೆ ಸಿಗಲಿದ್ದು ಈ ಸಂದರ್ಭದಲ್ಲಿ ಯಾವುದೇ ರಿಸ್ಕನ್ನು ನೀವು ತೆಗೆದುಕೊಂಡು ಅದರಲ್ಲಿ ಯಶಸ್ಸನ್ನು ಸಾಧಿಸುತ್ತೀರಿ.

ಸಿಂಹ ರಾಶಿ; ಸಿಂಹ ರಾಶಿಯವರ 9ನೇ ಮನೆಯಲ್ಲಿ ಮಂಗಳಗ್ರಹ ಚಲಿಸುತ್ತಿರುತ್ತಾನೆ. ಅರ್ಧದಲ್ಲಿ ನಿಂತಿರುವ ಕೆಲಸ ಸಂಪೂರ್ಣವಾಗುತ್ತದೆ ಹಾಗೂ ಸರ್ಕಾರಿ ಟೆಂಡರ್ ಅನ್ನು ಪಡೆಯಲು ಯತ್ನಿಸುವವರಿಗೆ ಶುಭಸುದ್ದಿ ಸಿಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸುತ್ತಿರುವ ವಿದ್ಯಾರ್ಥಿಗಳಿಗೆ ಯಶಸ್ಸು ದೊರೆಯಲಿದೆ. ಈ ಸಂದರ್ಭದಲ್ಲಿ ಅಧ್ಯಾತ್ಮದಲ್ಲಿ ಕೂಡ ನಿಮ್ಮ ಆಸಕ್ತಿ ಹೆಚ್ಚಲಿದೆ. ಒಟ್ಟಾರೆಯಾಗಿ ಈ ಮೂರು ರಾಶಿಯವರಿಗೆ ಮಂಗಳನ ರಾಶಿ ಬದಲಾವಣೆಯಿಂದಾಗಿ ಲಾಭ ದೊರೆಯಲಿದೆ.