ಅಯ್ಯರ್ ಮಾಡಿದ ಅದೊಂದು ತಪ್ಪು ಭಾರತದ ಸೋಲಿಗೆ ಕಾರಣವಾಯಿತೇ. ಮೊದಲ ಪಂದ್ಯದಲ್ಲಿ ಅಯ್ಯರ್ ಮಾಡಿರುವ ಎಡವಟ್ಟೇನು ಗೊತ್ತೇ??

ಅಯ್ಯರ್ ಮಾಡಿದ ಅದೊಂದು ತಪ್ಪು ಭಾರತದ ಸೋಲಿಗೆ ಕಾರಣವಾಯಿತೇ. ಮೊದಲ ಪಂದ್ಯದಲ್ಲಿ ಅಯ್ಯರ್ ಮಾಡಿರುವ ಎಡವಟ್ಟೇನು ಗೊತ್ತೇ??

ನಮಸ್ಕಾರ ಸ್ನೇಹಿತರೆ ಐಪಿಎಲ್ ಮುಗಿದ ಬೆನ್ನಲ್ಲೇ ಪ್ರಾರಂಭವಾಗಿರುವ ಸೌತ್ ಆಫ್ರಿಕಾ ವಿರುದ್ಧದ 5 ಟ್ವೆಂಟಿ-20 ಪಂದ್ಯಗಳ ಸರಣಿ ನಿನ್ನೆಯಷ್ಟೇ ದೆಹಲಿಯ ಅರುಣ್ ಜೆಟ್ಲಿ ಮೈದಾನದಲ್ಲಿ ಪ್ರಾರಂಭವಾಗಿತ್ತು. ಆದರೆ ರಿಷಬ್ ಪಂತ್ ರವರ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ ಮೊದಲ ಟಿ-ಟ್ವೆಂಟಿ ಪಂದ್ಯದಲ್ಲಿಯೇ ಸೌತ್ ಆಫ್ರಿಕಾ ವಿರುದ್ಧ ಸೋಲನ್ನು ಅನುಭವಿಸಿದೆ ಎನ್ನುವುದು ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಮೊದಲ ಸೋಲಿಗೆ ಈಗಾಗಲೇ ಹಲವಾರು ಕಾರಣಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಸೇರಿದಂತೆ ಎಲ್ಲಾ ಕಡೆಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ಹುಡುಕಲು ಆರಂಭಿಸಿದ್ದಾರೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತೀಯ ಕ್ರಿಕೆಟ್ ತಂಡ ನಾಲ್ಕು ವಿಕೆಟಿಗೆ ಬರೋಬ್ಬರಿ 211 ರನ್ನುಗಳನ್ನು ಪೇರಿಸಿತ್ತು. ಈ ಬೃಹತ್ ಮೊತ್ತದ ಪ್ರಮುಖ ಕಾರಣವಾಗಿ ಕಾಣಿಸಿಕೊಂಡಿದ್ದು ಆರಂಭಿಕ ಆಟಗಾರ ಇಶಾನ್ ಕಿಶನ್. ಆದರೆ 212 ರನ್ನುಗಳ ಗುರಿಯನ್ನು ಸೌತ್ಆಫ್ರಿಕ ತಂಡ ಐದು ಎಸೆತಗಳು ಬಾಕಿ ಉಳಿದಿರುವಂತೆ ವಾನ್ ಡರ್ ಡಸೇನ್ ರವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಗೆದ್ದು ಬೀಗಿತು. ಡಸೇನ್ ರವರಿಗೆ ಡೇವಿಡ್ ಮಿಲ್ಲರ್ ರವರ ಸಾತ್ ಕೂಡ ಬ್ಯಾಟಿಂಗ್ ನಲ್ಲಿ ದೊರಕಿತ್ತು. ಇನ್ನು ಸೌತ್ ಆಫ್ರಿಕಾ ಕ್ರಿಕೆಟ್ ತಂಡ ಚೇಸಿಂಗ್ ಮಾಡುವ ಸಂದರ್ಭದಲ್ಲಿ ಭಾರತೀಯ ಕ್ರಿಕೆಟಿಗ ನೊಬ್ಬ ಮಾಡಿರುವ ತಪ್ಪಿನಿಂದಾಗಿ ಭಾರತೀಯ ಕ್ರಿಕೆಟ್ ತಂಡ ಸೋಲುವಂತಾಯಿತು ಎಂಬುದಾಗಿ ಎಲ್ಲರೂ ಮಾತನಾಡುತ್ತಿದ್ದಾರೆ. ಹಾಗಿದ್ದರೆ ಕ್ರಿಕೆಟಿಗ ಯಾರು ಮತ್ತು ಆತ ಮಾಡಿರುವ ತಪ್ಪೇನು ಎಂಬುದನ್ನು ತಿಳಿಯೋಣ ಬನ್ನಿ. ಹೌದು ಗೆಳೆಯರು ನಾವು ಮಾತನಾಡುತ್ತಿರುವುದು ಶ್ರೇಯಸ್ ಅಯ್ಯರ್ ರವರ ಕುರಿತಂತೆ.

ಹೌದು ಗೆಳೆಯರೆ 16ನೇ ಓವರ್ನಲ್ಲಿ ಆವೇಶ್ ಖಾನ್ ರವರು ಬೌಲಿಂಗಿಗೆ ಬಂದಾಗ ಸೌತ್ ಆಫ್ರಿಕಾ ತಂಡಕ್ಕೆ 5 ಓವರ್ಗಳಲ್ಲಿ 63 ರನ್ನು ಬೇಕಾಗಿತ್ತು. ಈ ಸಂದರ್ಭದಲ್ಲಿ ವಾನ್ ಡರ್ ಡಸೇನ್ ರವರು 29ರನ್ನಿನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಆಗ ಸ್ಲೋವರ್ ಡೆಲಿವರಿ ಮಾಡಿದ ಆವೇಶ್ ಖಾನ್ ಅವರ ಎಸೆತವನ್ನು ಡಸೇನ್ ಡೀಪ್ ಮಿಡ್ ವಿಕೆಟ್ ಕಡೆಗೆ ಬಾರಿಸುತ್ತಾರೆ. ಅಲ್ಲಿ ಶ್ರೇಯಸ್ ಅಯ್ಯರ್ ರವರು ಈ ಕ್ಯಾಚನ್ನು ಮಿಸ್ ಮಾಡುತ್ತಾರೆ. ಈ ಅವಕಾಶವನ್ನು ಬಳಸಿಕೊಂಡ ಡಸೇನ್ ಮುಂದಿನ 16 ಎಸೆತಗಳಲ್ಲಿ 46 ರನ್ನುಗಳನ್ನು ಬಾರಿಸಿ ಭಾರತೀಯ ಕ್ರಿಕೆಟ್ ತಂಡದ ಸೋಲಿಗೆ ಕಾರಣರಾಗುತ್ತಾರೆ. ಒಂದು ಲೆಕ್ಕದಲ್ಲಿ ಪರೋಕ್ಷವಾಗಿ ಭಾರತೀಯ ಕ್ರಿಕೆಟ್ ತಂಡದ ಸೋಲಿಗೆ ಶ್ರೇಯಸ್ ಅಯ್ಯರ್ ರವರು ಮಿಸ್ ಮಾಡಿದ ಕ್ಯಾಚೇ ಕಾರಣ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಈ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ಹಂಚಿಕೊಳ್ಳಿ