ಭವಿಷ್ಯದ ನಾಯಕನನ್ನ ಆಯ್ಕೆ ಮಾಡಿದ ಹರ್ಭಜನ್ ಸಿಂಗ್. ಆಯ್ಕೆಯಾದ ಯುವ ನಾಯಕ ಯಾರು ಗೊತ್ತೆ??

ಭವಿಷ್ಯದ ನಾಯಕನನ್ನ ಆಯ್ಕೆ ಮಾಡಿದ ಹರ್ಭಜನ್ ಸಿಂಗ್. ಆಯ್ಕೆಯಾದ ಯುವ ನಾಯಕ ಯಾರು ಗೊತ್ತೆ??

ನಮಸ್ಕಾರ ಸ್ನೇಹಿತರೆ ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಭಾರತೀಯ ಕ್ರಿಕೆಟ್ ತಂಡ 5 ಪಂದ್ಯಗಳ ಟಿ-20 ಸರಣಿಯಲ್ಲಿ ಸೌತ್ ಆಫ್ರಿಕಾ ವಿರುದ್ಧ ಮೊದಲ ಪಂದ್ಯದಲ್ಲಿ ಸೋತಿದೆ. ಇದು ನಿಜಕ್ಕೂ ಕೂಡ ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ಸಾಕಷ್ಟು ಬೇಸರವನ್ನುಂಟು ಮಾಡಿದೆ. ಇನ್ನು ಈ ಬಾರಿ ತಂಡವನ್ನು ರೋಹಿತ್ ಶರ್ಮಾ ಅವರ ಅನುಪಸ್ಥಿತಿಯಲ್ಲಿ ರಿಶಬ್ ಪಂತ್ ರವರು ಮುನ್ನಡೆಸುತ್ತಿದ್ದಾರೆ.

ಆದರೆ ರೋಹಿತ್ ಶರ್ಮಾ ರವರು ಕೂಡ ಇನ್ನು ದೀರ್ಘ ಸಮಯದವರೆಗೆ ಭಾರತೀಯ ಕ್ರಿಕೆಟ್ ತಂಡದ ನಾಯಕತ್ವವನ್ನು ವಹಿಸಲು ಸಾಧ್ಯವಿಲ್ಲ. ಹೀಗಾಗಿ ಅವರ ನಂತರ ಭವಿಷ್ಯದ ಕಪ್ತಾನ ನನ್ನು ಈಗಾಗಲೇ ಭಾರತೀಯ ಕ್ರಿಕೆಟ್ ತಂಡ ಹಾಗೂ ಟೀಮ್ ಮ್ಯಾನೇಜ್ಮೆಂಟ್ ತಯಾರು ಮಾಡಬೇಕಾಗಿದೆ. ಈಗಾಗಲೇ ಈ ರೇಸಿನಲ್ಲಿ ಹಲವಾರು ಭಾರತೀಯ ಕ್ರಿಕೆಟಿಗರು ಇದ್ದಾರೆ ನಿಜ ಆದರೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ರವರ ಪ್ರಕಾರ ಒಬ್ಬ ಆಟಗಾರ ಖಂಡಿತವಾಗಿ ಭಾರತದ ಭವಿಷ್ಯದ ಕಪ್ತಾನ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಹಾಗೂ ಪರ್ಫೆಕ್ಟ್ ಕೂಡ ಹೌದು ಎಂಬುದಾಗಿ ಭವಿಷ್ಯನುಡಿದಿದ್ದಾರೆ. ಹೌದು ಗೆಳೆಯರೆ ಹರ್ಭಜನ್ ಸಿಂಗ್ ರವರು ಮಾತನಾಡುತ್ತಿರುವುದು ಹಾರ್ದಿಕ್ ಪಾಂಡ್ಯ ರವರ ಕುರಿತಂತೆ.

ಹಾರ್ದಿಕ್ ಪಾಂಡ್ಯ ರವರ ನಾಯಕತ್ವದ ಗುಣದಲ್ಲಿ ಸಾಕಷ್ಟು ವ್ಯಾಲಿಡ್ ಅಂಶಗಳಿವೆ ಹಾಗೂ ಅವರು ತಂಡದ ಗೆಲುವಿಗೆ ಸಕಾರಾತ್ಮಕ ಅಂಶಗಳನ್ನು ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅದಕ್ಕೂ ಮಿಗಿಲಾಗಿ ಇಂಜುರಿ ಯಿಂದ ಕ್ರಿಕೆಟ್ನಿಂದ ಹೊರಗುಳಿದಿದ್ದ ಹಾರ್ದಿಕ್ ಪಾಂಡ್ಯ ರವರು ವಾಪಸಾದ ಮೊದಲ ಹಂತದಲ್ಲಿಯೇ ಗುಜರಾತ್ ಟೈಟನ್ಸ್ ಎನ್ನುವ ಹೊಸ ತಂಡದ ನಾಯಕನಾಗಿ ಚೊಚ್ಚಲ ನಾಯಕತ್ವದ ಐಪಿಎಲ್ನಲ್ಲಿಯೇ ವಿಶ್ವದ ಅತ್ಯಂತ ಶ್ರೀಮಂತ ಹಾಗೂ ದೊಡ್ಡ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್ ಸೀಸನ್ 15ರ ಚಾಂಪಿಯನ್ ಆಗುತ್ತಾರೆ. ಹೀಗಾಗಿ ಭಾರತೀಯ ಕ್ರಿಕೆಟ್ ತಂಡದ ಭವಿಷ್ಯದ ಕಪ್ತಾನನಾಗಿ ಹಾರ್ದಿಕ್ ಪಾಂಡ್ಯ ರವರು ಸರಿಹೊಂದುತ್ತಾರೆ ಎಂಬುದಾಗಿ ಹರ್ಭಜನ್ ಸಿಂಗ್ ಸಲಹೆಯನ್ನು ನೀಡಿದ್ದಾರೆ. ಹರ್ಭಜನ್ ಸಿಂಗ್ ರವರ ಹೇಳಿಕೆ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.